ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಆದರೆ ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಅಡ್ಡಾಡುತ್ತಿದ್ದು, ಬೀಚ್‌ಗಳಿಗೆ ಸುತ್ತಾಡುತ್ತಿದ್ದಾರೆ.
ಮಂಗಳೂರು(ಮಾ.18): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಆದರೆ ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಅಡ್ಡಾಡುತ್ತಿದ್ದು, ಬೀಚ್‌ಗಳಿಗೆ ಸುತ್ತಾಡುತ್ತಿದ್ದಾರೆ.
ರಜೆ ನೀಡಿರುವುದು ಸುತ್ತಾಡಲು ಅಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಬೀಚ್‌ಗಳಲ್ಲು ಸುತ್ತಾಡುವವರಿಗೆ ಪೊಲೀಸರು ದಂಡ ವಿಧಿಸಿದರೆ ಮಾತ್ರ ರಜೆಯ ಸದುಪಯೋಗ ಪಡೆಯಬಹುದು ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ಸಲಹೆ ವ್ಯಕ್ತಪಡಿಸಿದರು.
undefined
ಆಸ್ಪತ್ರೆಯಲ್ಲಿ ಬಿಸಿ ನೀರು ಸೇವಿಸಿದ ಸಚಿವ!
ಸಾಮಾನ್ಯವಾಗಿ ಸಚಿವರು ಆಗಮಿಸುವಾಗ ಉಪಹಾರದ ವ್ಯವಸ್ಥೆ ಮಾಡುವುದು ವಾಡಿಕೆ. ಆದರೆ ಮಂಗಳವಾರ ಆರೋಗ್ಯ ಸಚಿವ ಶ್ರೀರಾಮುಲು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದಾಗ ಅವರು ಸೇವಿಸಿದ್ದು ಕೇವಲ ಬಿಸಿ ನೀರು ಮಾತ್ರ.
'ಮಂಗಳೂರಲ್ಲಿ ಶೀಘ್ರ ವೈರಾಣು ಪತ್ತೆ ಪರೀಕ್ಷಾ ಕೇಂದ್ರ'
ಶಂಕಿತ ಕೊರೋನಾ ಸೋಂಕಿತರ ಎರಡು ವಾರ್ಡ್‌ಗಳಿಗೆ ಸಚಿವ ಶ್ರೀರಾಮುಲು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಂದು ವಾರ್ಡ್‌ನಲ್ಲಿ ಮಹಿಳೆಯನ್ನು, ಇನ್ನೊಂದು ವಾರ್ಡ್‌ನಲ್ಲಿ ನಾಲ್ಕು ಮಂದಿಯನ್ನು ಇರಿಸಲಾಗಿದೆ. ಈ ವಾರ್ಡ್‌ಗಳಿಗೂ ಶ್ರೀರಾಮುಲು ಭೇಟಿ ನೀಡಿದರು. ಕೊನೆಗೆ ಆಸ್ಪತ್ರೆ ಅಧೀಕ್ಷಕರ ಕೊಠಡಿ ತೆರಳಿದ ಶ್ರೀರಾಮುಲು, ನನಗೆ ಕುಡಿಯಲು ಬಿಸಿ ನೀರು ಮಾತ್ರ ಸಾಕು ಎಂದು ಕೇಳಿ ಪಡೆದರು.