ಲಾಕ್‌ಡೌನ್‌ ಆದೇಶ ಉಲ್ಲಂಘಣೆ: ಅಗತ್ಯ ವಸ್ತುಗಳ ಖರೀದಿಗೆ ಅರ್ಧ ಕಿಮೀಗೂ ಅಧಿಕ ಸಾಲು..!

Published : Apr 19, 2020, 09:27 AM IST
ಲಾಕ್‌ಡೌನ್‌ ಆದೇಶ ಉಲ್ಲಂಘಣೆ: ಅಗತ್ಯ ವಸ್ತುಗಳ ಖರೀದಿಗೆ ಅರ್ಧ ಕಿಮೀಗೂ ಅಧಿಕ ಸಾಲು..!

ಸಾರಾಂಶ

ಗದಗ ಜಿಲ್ಲೆಯಲ್ಲಿ 2 ದಿನ ಮಾತ್ರ ಕಿರಾಣಿ ಸಾಮಗ್ರಿ ಖರೀದಿಗೆ ಅವಕಾಶ| ಗ್ರೇನ್‌ ಗ್ರೋಸರಿ ಮಾರುಕಟ್ಟೆಯಲ್ಲಿ ಕಿರಾಣಿ ಸಾಮಗ್ರಿಗಾಗಿ ಮುಗಿಬಿದ್ದ ಜನತೆ| ಸಾಮಾಜಿಕ ಅಂತರ ಪಾಲಿಸದ ಮಂದಿ|

ಗದಗ(ಏ.19): ನಗರದಲ್ಲಿ ಕೊರೋನಾ 3 ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸಿ ವಾರದಲ್ಲಿ 2 ದಿನ ಮಾತ್ರ ಕಿರಾಣಿ ಸಾಮಗ್ರಿ ಖರೀದಿಗೆ ಅವಕಾಶ ಕಲ್ಪಿಸಿದೆ. 

ಶನಿವಾರ ಬೆಳಗ್ಗೆ ಗದಗ ನಗರದ ಗ್ರೇನ್‌ ಗ್ರೋಸರಿ ಮಾರುಕಟ್ಟೆಯಲ್ಲಿ ಕಿರಾಣಿ ಸಾಮಗ್ರಿಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು. ಪೊಲೀಸ್‌ ಇಲಾಖೆ ಸಾಮಾಜಿಕ ಅಂತರದ ಆಧಾರದಲ್ಲಿ ಸರದಿ ಸಾಲಿನಲ್ಲಿ ನಿಲ್ಲಿಸಿದ್ದರು. 

ಕೊರೋನಾ ಆತಂಕ: ಕಿರಾಣಿ ಅಂಗಡಿಗಳಿಗೆ ಬೀಗಮುದ್ರೆ

ಆನಂತರ ಹುಯಿಲಗೋಳ ನಾರಾಯಣರಾವ್‌ ವೃತ್ತದಲ್ಲಿ ಜಿಲ್ಲಾಡಳಿತದಿಂದ ನಿರ್ಮಿಸಿರುವ ಸೋಂಕು ನಿವಾರಣಾ ಸುರಂಗದ ಮೂಲಕ ಹಾಯ್ದು ಹೋಗುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರೋಸರಿ ಮಾರುಕಟ್ಟೆಯಿಂದ ಹಳೆಯ ಬಸ್‌ ನಿಲ್ದಾಣದ ವರೆಗೂ ಅರ್ಧ ಕಿಮೀ ವರೆಗೂ ಸಾಲು ಬೆಳೆದಿತ್ತು.
 

PREV
click me!

Recommended Stories

ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊಸ ಪದ್ದತಿಗೆ ಮುನ್ನುಡಿ
ಮೃತದೇಹದ ಬಟ್ಟೆ ಮೇಲಿದ್ದ ಟ್ಯಾಗ್ ನೀಡಿತು ರೋಚಕ ಸುಳಿವು, ಒಂದೇ ವಾರಕ್ಕೆ ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು