ಹಲವು ಪವಾಡಗಳಿಗೆ ಹೆಸರಾಗಿದ್ದ ಕಾರ್ಕಳ್ಳಿ ಬಸವ ಸಾವು

Suvarna News   | Asianet News
Published : Apr 19, 2020, 09:17 AM IST
ಹಲವು ಪವಾಡಗಳಿಗೆ ಹೆಸರಾಗಿದ್ದ ಕಾರ್ಕಳ್ಳಿ ಬಸವ ಸಾವು

ಸಾರಾಂಶ

ಹಲವು ಪವಾಡಗಳಿಗೆ ಹೆಸರಾಗಿದ್ದ ಕಾರ್ಕಳ್ಳಿ ಬಸವ ಮೃತಪಟ್ಟಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕಾರ್ಕಳ್ಳಿ ಗ್ರಾಮದ ಶ್ರೀಬಸವೇಶ್ವರ ದೇವಾಲಯದ ಬಸವ ಕಳೆದ 3 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು.  

ಮಂಡ್ಯ(ಏ.19): ಹಲವು ಪವಾಡಗಳಿಗೆ ಹೆಸರಾಗಿದ್ದ ಕಾರ್ಕಳ್ಳಿ ಬಸವ ಮೃತಪಟ್ಟಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕಾರ್ಕಳ್ಳಿ ಗ್ರಾಮದ ಶ್ರೀಬಸವೇಶ್ವರ ದೇವಾಲಯದ ಬಸವ ಕಳೆದ 3 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು.

ಹಲವು ಪವಾಡಗಳಿಗೆ ರಾಜ್ಯಾದ್ಯಂತ  ಹೆಸರುವಾಸಿಯಾಗಿದ್ದ ಬಸವ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಸಾವನ್ನಪ್ಪಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎನ್ನುವ ಕಾರಣಕ್ಕೆ ರಾತ್ರಿಯೇ ಬಸವನ ಅಂತ್ಯಕ್ರಿಯೆ ಮಾಡಲಾಗಿದೆ.

ಬಸವನ ಪವಾಡ, ಪರೀಕ್ಷೆ ಮಾಡಿದ ಪೊಲೀಸ್‌ನನ್ನು ಬೀದಿಯಲ್ಲಿ ಅಟ್ಟಾಡಿಸಿದ ಬಸಪ್ಪ

ದೇವಾಲಯದ ಆಡಳಿತ ಮಂಡಳಿ ರಾತ್ರಿಯೇ ಬಸವನ ಅಂತ್ಯಕ್ರಿಯೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದನ್ನು ತಡೆದಿದ್ದಾರೆ. ದೇವಾಲಯದ ಆವರಣದಲ್ಲೇ ಅಂತ್ಯಕ್ರಿಯೆ ನಡೆಸಲಾಗಿದೆ. ಲಾಕ್ ಡೌನ್‌ನಿಂದಾಗಿ ಭಕ್ತರು ಪವಾಡಗಳಿಗೆ ಹೆಸರಾಗಿದ್ದ ದೇವರ ಬಸವನ ಅಂತಿಮ ದರ್ಶನ ಮಾಡಲು ಸಾಧ್ಯವಾಗಿಲ್ಲ.

ಕೊಂಬಿನಿಂದಲೇ ತೊಟ್ಟಿಲು ತೂಗಿ ಮಗು ಮಲಗಿಸಿದ ಬಸವ

PREV
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?