ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು, ಕೆಲ ಸಿಬ್ಬಂದಿಯಿಂದ ನಡೆದಿದೆ ಎನ್ನಲಾದ 40 ಕೋಟಿ ರು. ಭ್ರಷ್ಟ್ರಚಾರ ಆರೋಪ ಸಂಬಂಧ ಅರಣ್ಯ ವಿಜಿಲೆನ್ಸ್ ತಂಡದಿಂದ ತನಿಖೆ ನಡೆಸಲು ಅರಣ್ಯ ಪಡೆಯ ಮುಖ್ಯಸ್ಥ ಹಾಗೂ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಆರ್.ಕೆ.ಸಿಂಗ್ ಆದೇಶಿಸಿದ್ದಾರೆ.
ಗುಂಡ್ಲುಪೇಟೆ (ಮಾ.04): ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು, ಕೆಲ ಸಿಬ್ಬಂದಿಯಿಂದ ನಡೆದಿದೆ ಎನ್ನಲಾದ 40 ಕೋಟಿ ರು. ಭ್ರಷ್ಟ್ರಚಾರ ಆರೋಪ ಸಂಬಂಧ ಅರಣ್ಯ ವಿಜಿಲೆನ್ಸ್ ತಂಡದಿಂದ ತನಿಖೆ ನಡೆಸಲು ಅರಣ್ಯ ಪಡೆಯ ಮುಖ್ಯಸ್ಥ ಹಾಗೂ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಆರ್.ಕೆ.ಸಿಂಗ್ ಆದೇಶಿಸಿದ್ದಾರೆ. ಕಟ್ಟಡ ನಿರ್ಮಾಣ, ಹಲವು ಕಾಮಗಾರಿಗಳಲ್ಲಿ ನಿಯಮ ಪಾಲಿಸದೇ ಭ್ರಷ್ಟ್ರಚಾರ ಎಸಗಲಾಗಿದೆ ಎನ್ನುವ ಕುರಿತು ರೈತ ಸಂಘ ಸೇರಿದಂತೆ ಬೇರೆ ಸಂಘಟನೆಗಳಿಂದ ದೂರು ಬಂದಿರುವ ಹಿನ್ನೆಲೆ ಈ ಆದೇಶವನ್ನು ಮಾಡಿದ್ದು, ವಿಜಿಲೆನ್ಸ್ ತಂಡ ತನಿಖೆ ಆರಂಭಿಸಿದೆ.
ಈಗಾಗಲೇ ಬಂಡೀಪುರ ಅರಣ್ಯಇಲಾಖೆಯ ಎಫ್‌ಡಿಎ ನಾಗೇಂದ್ರ ವಿರುದ್ಧ ಈಗಾಗಲೇ ಸಾಕಷ್ಟುದೂರು ಬಂದ ಹಿನ್ನೆಲೆ ವಿಜಿಲೆನ್ಸ್ ತಂಡ ಈಗಾಗಲೇ ತನಿಖೆ ನಡೆಸಿ ಕ್ರಮಕ್ಕೆ ಶಿಫಾರಸ್ಸು ಮಾಡಿದೆ, ಅಲ್ಲದೇ ಬಂಡೀಪುರ ಅರಣ್ಯ ಸಂರಕ್ಷಣಾಕಾರಿ ಹಾಗೂ ನಿರ್ದೇಶಕ ಡಾ. ಪಿ.ರಮೇಶ್‌ಕುಮಾರ್ ವಿರುದ್ಧವೂ ಆರೋಪ ಕೇಳಿ ಬಂದಿರುವುದರಿಂದ ಅವರ ವಿರುದ್ಧವೂ ತನಿಖೆ ನಡೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
undefined
ಚುನಾವಣೆ ವೇಳೆ ಶಾಸಕ ಶರತ್ ರಾಜಕೀಯ ನಾಟಕ: ಸಚಿವ ಎಂಟಿಬಿ ನಾಗರಾಜ್
ಟೆಂಡರ್ ಕರೆಯದೆ ಚೆಕ್ ಡ್ರಾ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ನಲವತ್ತು ಕೋಟಿಗೂ ಹೆಚ್ಚು ಅನುದಾನವನ್ನು ಕೆಲವು ಕಾಮಗಾರಿಗೆ ಟೆಂಡರ್ ಕರೆಯದೆ ಕೆಲಸವಾಗುವ ಮುಂಚೆ ಚೆಕ್ ನೀಡಿ, ಲ್ಯಾಂಟನ ತೆರವು, ಪೀಠೋಪಕರಣ ಖರೀದಿ, ಸಿಎಫ್, ಎಸಿಎಫ್ ಕಚೇರಿ ನವೀಕರಣ, ಒಂದೇ ಗೆಸ್ಟ್‌ಹೌಸ್ ಲಕ್ಷಾಂತರ ರು.ಕಾಮಗಾರಿ ಲೆಕ್ಕ ತೋರಿಸಿ ಇನ್ನಿತರ ಸಣ್ಣಪುಟ್ಟವಿಚಾರಗಳಿಗೆ ಸುಳ್ಳು ಬಿಲ್ ಸೃಷ್ಟಿಸಿ ಕೋಟ್ಯಾಂತರ ದುರ್ಬಳಕೆ ಮಾಡಿಕೊಂಡಿದ್ದಾರೆ.
ಕೂಡಲೇ ಸರ್ಕಾರ ತನಿಖೆ ಮಾಡಬೇಕು. ತನಿಖೆ ಆಗುವವರೆಗೂ ಸಿಎಫ್ ಅವರನ್ನು ಅಮಾನತು ಮಾಡಬೇಕು ಎಂದು ರೈತಸಂಘ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಇಲಾಖೆ ಮುಖ್ಯಸ್ಥರಿಗೆ ದೂರು ನೀಡಿದೆ. ಎಸ್‌ಬಿಐ ಬ್ಯಾಂಕ್‌ನಿಂದ ಗಿಡ ನೆಡಲು 18 ಲಕ್ಷ ರು. ನೀಡಲಾಗಿದೆ. ಆದರೆ, ಮೇಲುಕಾಮನಹಳ್ಳಿ ಬಳಿ ಒಂದಷ್ಟುಸಸಿ ನೆಟ್ಟು ಹಣ ದುರುಪಯೋಗ. ಬಂಡೀಪುರ ಗಜೇಂದ್ರ ಗೆಸ್ಟ್ ಹೌಸ್‌ಗೆ 25 ಲಕ್ಷ ರು. ಖರ್ಚು ತೋರಿಸಿ ಇನ್ನೂ 5ಲಕ್ಷ ರು. ಖರ್ಚಾಗುವ ಬಗ್ಗೆ ತೋರಿಸಿದ್ದಾರೆ. ಹೊಸ ಬಸ್ ಖರೀದಿಸಿ ಬಾಡಿ ವಿನ್ಯಾಸಕ್ಕೆ 23 ಲಕ್ಷ ರು.ಗೂ ಹೆಚ್ಚು ಟೆಂಡರ್ ಕರೆಯದೆ ನೀಡಿದ್ದಾರೆ.
ಮೀನು ತರಬೇತಿ ಕಾರ್ಯಕ್ರಮ ನಡೆಸುವುದಾಗಿ ತಮಿಳುನಾಡಿನಿಂದ ಇವರಿಗೆ ಬೇಕಾದವರನ್ನು ಕರೆಸಿಕೊಂಡು ಲಕ್ಷಾಂತರ ರು. ಬಿಲ್ ಮಾಡಿದ್ದಾರೆ. ತಜ್ಞರ ಭೇಟಿ ವೆಚ್ಚ 30 ಲಕ್ಷ ರು., ಪೆನ್ನು ಪ್ಯಾಡ್, ಕಾಟ್ರೆಜ್ ಅಂತ 10 ಲಕ್ಷ ರು., ಲಂಟಾನ ತೆರವಿಗೆ 65 ಲಕ್ಷ ರು. ತೋರಿಸಿದ್ದಾರೆ. ರಸ್ತೆ ನಿರ್ವಹಣೆಗೆ 30 ಲಕ್ಷ ರು. ಡ್ರಾ ಮಾಡಿದ್ದಾರೆ, ಡಸ್ಟ್ ಬಿನ್ ಖರೀದಿಗೆ 10 ಲಕ್ಷ ರು. ಬಿಲ್ ಮಾಡಿದ್ದಾರೆ ಎನ್ನುವ ಆರೋಪದ ಪತ್ರವನ್ನು ನೀಡಿದ ನಂತರ ತನಿಖೆಗೆ ಆದೇಶಿಸಲಾಗಿದೆ.
ಶಿರಸಿಯಲ್ಲಿ ಅಬ್ಬರದ ಬೇಡರ ವೇಷದ ಸಂಭ್ರಮ: ರೌದ್ರರಮಣೀಯ ಬೇಡರ ವೇಷ ನೋಡಲು ಸಹಸ್ರಾರು ಜನ
ಮೇಲಾಧಿಕಾರಿಗಳ ಅನುಮತಿ ಪಡೆದು ತುಂಡು ಗುತ್ತಿಗೆ ಕಾಮಗಾರಿ: ಬಂಡೀಪುರದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲು ಟೆಂಡರ್ ಕರೆಯಲಾಗಿದ್ದು, ಯಾರು ಸಹ ಟೆಂಡರ್ ಸಲ್ಲಿಸದೆ ಇದ್ದ ಕಾರಣ ಮೇಲಾಧಿಕಾರಿಗಳ ಅನುಮತಿ ಪಡೆದು ತುಂಡು ಗುತ್ತಿಗೆ ಮೂಲಕ ಕಾಮಗಾರಿ ನಡೆಸಲಾಗಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಕಾರಿ ಡಾ. ಪಿ. ರಮೇಶ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಗಜೇಂದ್ರ ಅತಿಥಿ ಗೃಹ ಶಿಥಿಲಗೊಂಡಿತ್ತು. ಗಣ್ಯಾತಿ ಗಣ್ಯರು ಆಗಮಿಸುತ್ತಿದ್ದ ಹಿನ್ನಲೆ ದುರಸ್ಥಿ ಪಡಿಸಲೇ ಬೇಕಾದ ಅನಿವಾರ್ಯತೆ ಇದ್ದ ಕಾರಣ ವಿಶೇಷ ಪರಿಣಿತರಿಂದಲೇ ವಿವಿಧ ಕಾಮಗಾರಿಗಳನ್ನು ಎಪಿಸಿಸಿಎಫ್(ಹುಲಿ ಯೋಜನೆ) ಅನುಮತಿ ಪಡೆದು ನಿರ್ವಹಿಸಲಾಗಿದೆ ಎಂದಿದ್ದಾರೆ. ಸಫಾರಿ ಬಸ್ ಬಾಡಿ ವಿನ್ಯಾಸವನ್ನು ನಿಯಮಾನುಸಾರ ಟೆಂಡರ ಕರೆದು ಕಡಿಮೆ ದರ ಸೂಚಿಸಿದವರಿಂದ ಮಾಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.