ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಾಗಿ ಭೂಸ್ವಾಧೀನ ಪಡಿಸಿಕ್ಕೊಂಡ ನೀರಾವರಿ ಇಲಾಖೆ. ಬಾಕಿ ಮೊತ್ತ ನೀಡದಿದ್ದರಿಂದ ಭೂಸ್ವಾಧೀನ ಅಧಿಕಾರಿ ಎ.ಸಿ. ವಾಹನ ಜಪ್ತಿ. ಮಾ 6 ಕ್ಕೆ ನ್ಯಾಯಾಲಯಕ್ಕೆ ಬಾಕಿ ಮೊತ್ತ ಜಮೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಮಾ. 4): ಧಾರವಾಡ ತಾಲೂಕ ಹೂಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಎಡದಂಡೆ ಕಾಲುವೆ ನಂ.02 ನೇದ್ದರ ನಿರ್ಮಾಣದ ಕುರಿತಂತೆ ಧಾರವಾಡ ತಾಲೂಕ ಹೂಲಿಕೇರಿ ಗ್ರಾಮದ ರಿಸನಂ.108/2 ಕ್ಷೇತ್ರ : 00ಎ-13 ಗುಂಟೆ ಜಮೀನನ್ನು ಭೂ ಮಾಲಿಕರಾದ ವೀರಣ್ಣ ತಂದೆ ಶೀದ್ಲಿಂಗಪ್ಪ ನಾಗಶೆಟ್ಟಿ ಅಳ್ನಾವರ ತಾಲೂಕಿನ ಹೂಲಿಕೇರಿ ಗ್ರಾಮದವರು ಇವರ ಹೆಸರಿನಲ್ಲಿ ಸದರಿ ಜಮೀನಿಗೆ ರೂ. 14,184/-ಗಳನ್ನು ನಿಗಧಿಪಡಿಸಿ ತೀರ್ಪು ಘೋಷಣೆ ಮಾಡಿ ಭೂ-ಸ್ವಾಧೀನ ಪಡಿಸಿಕೊಂಡಿದ್ದು ಇರುತ್ತದೆ.
undefined
ಸದರಿ ಜಮೀನಿನ ಭೂ ಮಾಲಿಕರು ಹೆಚ್ಚುವರಿ ಪರಿಹಾರ ಕೋರಿ ಭೂ ಸ್ವಾಧೀನ ಕಾಯ್ದೆ 1894 ರ ಕಲಂ 18 (1) ರಡಿ ಈ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಗೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದಲ್ಲಿ ದಾಖಲಾದ ಎಲ್.ಎ.ಸಿ ನಂ. 26/2013 ನೇದ್ದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಿವಾಣಿ ನ್ಯಾಯಾಲಯ ಧಾರವಾಡ ರವರು ಸದರಿ ಜಮೀನಿಗೆ ಪ್ರತಿ ಗುಂಟೆಗೆ ರೂ 31,500 ಗಳನ್ನು ನಿಗಧಿಪಡಿಸಿ ಆದೇಶಿಸಿದ್ದು ಇರುತ್ತದೆ ಮಾನ್ಯ ನ್ಯಾಯಾಲಯದ ಆದೇಶದನ್ವಯ ಸದರಿ ಪ್ರಕರಣಗಳಲ್ಲಿ ಒಟ್ಟು ರೂ 20,42,792 ಗಳನ್ನು ಮಾನ್ಯ ನ್ಯಾಯಾಲಯಕ್ಕೆ ಭರಣಾ ಮಾಡಬೇಕಾಗಿದ್ದು, ಈ ಕುರಿತಂತೆ ಭೂ ಕೋರಿಕೆ ಸಂಸ್ಥೆಯವರಾದ ಕಾರ್ಯನಿರ್ವಾಹಕ ಇಂಜನೀಯರರು, ಸಣ್ಣ ನೀರಾವರಿ ಇಲಾಖೆ ಧಾರವಾಡ ಇವರು ರೂ: 17,85,308/-ಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಣವನ್ನು ಈಗಾಗಲೇ ಭರಣಾ ಮಾಡಿದ್ದು ಇರುತ್ತದೆ..
ಬಾಕಿ ಮೊತ್ತ ರೂ: 2,57,484 ಗಳನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಾನ್ಯ ನ್ಯಾಯಾಲಯಕ್ಕೆ ಹಣವನ್ನು ಭರಣಾ ಮಾಡದ ಕಾರಣ ಸರ್ಕಾರದ ಹಂತದಲ್ಲಿ ಭೂಸ್ವಾಧೀನ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿಗಳ ವಾಹನ ಜಪ್ತಿಯಾಗಿರುತ್ತದೆ.
ರೈತರಿಗೆ ಸೇರಿದ ಮನೆ, ಜಮೀನುಗಳಿಗೆ ಬೇಲಿ ಅಳವಡಿಕೆ
ಈಗಾಗಲೇ ದಿನಾಂಕ 03.03.2023 ರಂದು ಸಣ್ಣ ನೀರಾವರಿ ಇಲಾಖೆಗೆ ಸರ್ಕಾರದಿಂದ ರೈತರಿಗೆ ನೀಡಬೇಕಾಗಿರುವ ಬಾಕಿ ಮೊತ್ತ ಬಿಡುಗಡೆಯಾಗಿದ್ದು, ಸೋಮವಾರ ದಿನಾಂಕ: 06-03-2023 ರಂದು ನ್ಯಾಯಾಲಯಕ್ಕೆ ಜಮೆ ಮಾಡುವುದಾಗಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ 75 ಎಕರೆ ಗುಳುಂ..!
ಒಟ್ಟಿನಲ್ಲಿ ಕೆಟ್ಟ ಮೆಲೆ ಬುದ್ದಿ ಬಂತು ಅನ್ನೂ ಹಾಗೆ ಆಗಿದೆ ಧಾರವಾಡ ಉಪವಿಭಾಗಾಧಿಕಾರಿಗಳ ಪರಿಸ್ಥಿತಿ ಮೊದಲೇ ಕೋರ್ಟ್ ಆದೇಶ ಮಾಡಿದಂತೆ ಹಣವನ್ನ ನೀಡಿದ್ದರೆ ಎ ಸಿ ಕಚೇರಿಯ ಮರಿಯಾದೆ ಯಾದ್ರು ಉಳಿತಿತ್ತೆನೋ ಎಂದು ಪ್ರಜ್ಞಾವಂತರು ಮಾತನಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ರೈತನಿಗೆ ಆದ ಪರಿಸ್ಥಿತಿ ಮತ್ತೆ ಬೇರೆ ಯಾವ ರೈತನಿಗೆ ಆಗಬಾರದು ಎಂಬುದು ಸಾರ್ವಜನಿಕರ ಒತ್ತಾಯ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಇದ್ದ ಮರಿಯಾದೆನೂ ಉಳಿತ್ತಿತ್ತು.