ತವರಲ್ಲಿ ಮಣ್ಣಾದ ಪಾಪು: ಏಳು ದಶಕದ ಹುಬ್ಬಳ್ಳಿಯ ನಂಟು ಇನ್ನು ನೆನಪು ಮಾತ್ರ

By Kannadaprabha NewsFirst Published Mar 18, 2020, 7:31 AM IST
Highlights

ಸರ್ಕಾರಿ ಗೌರವದೊಂದಿಗೆ ಪಾಟೀಲ ಪುಟ್ಟಪ್ಪ ಅಂತ್ಯಕ್ರಿಯೆ| ಲಿಂಗಾಯತ ವಿಧಿ- ವಿಧಾನದಂತೆ ಹಾವೇರಿಯಲ್ಲಿ ಸಂಸ್ಕಾರ| ಹುಬ್ಬಳ್ಳಿಯ ಪಾಪು ನಿವಾಸದಲ್ಲಿ ಸಾರ್ವಜನಿಕ ದರ್ಶನ| ಧಾರವಾಡಕ್ಕೆ ಪಾರ್ಥಿವ ಶರೀರ ಮೆರವಣಿಗೆ| ಪುತ್ರ ಅಶೋಕ ಪಾಟೀಲರಿಂದ ಧಾರ್ಮಿಕ ವಿಧಾನ| 

ಹುಬ್ಬಳ್ಳಿ[ಮಾ.18]: ಹಿರಿಯ ಪತ್ರಕರ್ತ, ಸಾಹಿತಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ (ಪಾಪು) ಅವರು ತಮ್ಮ ಹುಟ್ಟೂರಿನ ಮಣ್ಣಿನಲ್ಲಿ ಲೀನವಾಗಿದ್ದಾರೆ. ಸೋಮವಾರ ನಿಧನರಾದ ಪಾಪು ಅವರ ಅಂತ್ಯಕ್ರಿಯೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕು ಹಲಗೇರಿ ಗ್ರಾಮದ ಸ್ವಂತ ತೋಟದಲ್ಲಿ ಮಂಗಳವಾರ ಸಂಜೆ ಲಿಂಗಾಯತ ಧರ್ಮದ ವಿಧಿ-ವಿಧಾನದಂತೆ ನೆರವೇರಿತು.

101 ವರ್ಷದ ಪಾಪು ವಯೋಸಹಜ ಕಾಯಿಲೆಯಿಂದ ಫೆ.10 ರಂದು ಇಲ್ಲಿನ ಕಿಮ್ಸ್‌ಗೆ ದಾಖಲಾಗಿದ್ದರು. ವೈದ್ಯರ ತೀವ್ರ ಪ್ರಯತ್ನ ವಿಫಲವಾಗಿ ಸೋಮವಾರ ರಾತ್ರಿ 10.10ಕ್ಕೆ ಕೊನೆಯುಸಿರೆಳೆದರು. ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿರುವ ಅವರ ಮನೆ ‘ಪ್ರಪಂಚ’ದಲ್ಲಿ ಪಾರ್ಥಿವ ಶರೀರದ ಪೂಜೆ ನೆರವೇರಿಸಿದ ಬಳಿಕ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಧಾರವಾಡಕ್ಕೆ ಮೆರವಣಿಗೆಯಲ್ಲಿ ಸಾಗಿ ವಿದ್ಯಾವರ್ಧಕ ಸಂಘದ ಆವರಣದಲ್ಲೂ ಸಾರ್ವಜನಿಕ ದರ್ಶನಕ್ಕೆ ಏರ್ಪಾಡು ಮಾಡಲಾಗಿತ್ತು.

ಪತ್ರಕರ್ತ ಪಾಟೀಲ್ ಪುಟ್ಟಪ್ಪ (101) ಇನ್ನಿಲ್ಲ.  ಧರೆಗುರುಳಿದ ಮರ

ಅಲ್ಲಿಂದ ಪಾರ್ಥಿವ ಶರೀರ ಮೆರವಣಿಗೆ ಮೂಲಕ ಶಿಗ್ಗಾವಿ, ಹಾವೇರಿ, ರಾಣಿಬೆನ್ನೂರು ಮೂಲಕ ಹಲಗೇರಿ ತಲುಪಿತು. ಬಳಿಕ ಹಲಗೇರಿಯಲ್ಲಿರುವ ಪಾಪು ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲಿಂಗಾಯತ ಧರ್ಮದ ವಿಧಿ-ವಿಧಾನದಂತೆ ಅಂತ್ಯ ಸರ್ಕಾರ ನೆರವೇರಿತು. ಪಾಪು ಅವರ ಪುತ್ರ ಅಶೋಕ ಪಾಟೀಲ ಧಾರ್ಮಿಕ ವಿಧಿ-ವಿಧಾನ ಪೂರೈಸಿದರು. ಅಂತ್ಯಕ್ರಿಯೆಗೆ ಮುನ್ನ ಪಾಪು ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಮೂರು ಸುತ್ತಿನ ಕುಶಾಲ ತೋಪುಗಳನ್ನು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಪಾಪು, ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪತ್ರಿಕೋದ್ಯಮ ಓದಿದ ಮೊದಲ ಕನ್ನಡಿಗ!

ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯರು, ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಮಠದ ನಿಜಗುಪ್ರಭು ತೋಂಟದಾರ್ಯರು, ಭೈರನಹಟ್ಟಿಶಾಂತಲಿಂಗ ಶ್ರೀಗಳು, ಕೂಡಲಸಂಗಮ ಜಯಮೃತ್ಯಂಜಯ ಶ್ರೀಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರದ ಪರವಾಗಿ ಸಚಿವರಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್‌ ಭಾಗವಹಿಸಿದ್ದರು.

ಹುಬ್ಬಳ್ಳಿಯಿಂದ ತವರಿನೆಡೆಗೆ... 

ನಾಡೋಜ ಡಾ.ಪಾಟೀಲ ಪುಟ್ಟಪ್ಪ ಮತ್ತು ಹುಬ್ಬಳ್ಳಿ ನಡುವಿನ 75 ವರ್ಷಗಳ ನಂಟು ಇನ್ನು ಸ್ಮತಿಪಟಲದಲ್ಲಿ ಮಾತ್ರ! ಹುಬ್ಬಳ್ಳಿಯನ್ನು ಕರ್ಮಭೂಮಿಯಾಗಿಸಿ ಕೊಂ ಡು ದುಡಿದು ಈ ನೆಲಕ್ಕೆ ನಿಜಾರ್ಥದಲ್ಲಿ ಶಕ್ತಿಯನ್ನು, ಗಟ್ಟಿತನವನ್ನು, ಧ್ವನಿಯನ್ನು ತುಂಬಿದ ಪಾಪು ಅವರನ್ನು ಇದೀಗ ಇಲ್ಲಿಂದ ಅವರ ತವರೂರು ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕು ಹಲಗೇರಿ ಗ್ರಾಮಕ್ಕೆ ಕಳಿಸಿಕೊಡಲಾಗಿದೆ. 

ಶಿವಕುಮಾರಗೌಡ ಪಾಪು ಆದ ಕಥೆ!

ಮಂಗಳವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇಲ್ಲಿನ ಚೆನ್ನಮ್ಮ ವೃತ್ತದಲ್ಲೇ ತಮ್ಮ ಪತ್ರಿಕಾ ಕಚೇರಿ ತೆರೆದಿದ್ದ ಪಾಪು, ಅಡ್ಡ ಹಾದಿ ಹಿಡಿದ ಸರ್ಕಾರಕ್ಕೆ ಲೇಖನಿಯ ಮೊನಚಿನಲ್ಲಿ ತಿವಿದು ಸರಿದಾರಿಗೆ ತರುತ್ತಿದ್ದುದು ಇಲ್ಲಿಂದಲೇ. ಅದು ಕೇವಲ ಪತ್ರಿಕಾ ಕಚೇರಿ ಮಾತ್ರವಾಗಿರಲಿಲ್ಲ. ನಾಯಕರನ್ನು ಸೃಷ್ಟಿ ಸುವ ಗರಡಿಮನೆಯಾಗಿತ್ತು. ಸರಳ ರಾಜಕಾರಣಿ ಐ.ಜಿ. ಸನದಿ ಅವರಂಥವರನ್ನು, ಚಿಂತಕರನ್ನು, ಕವಿ ಗಳನ್ನು, ಪತ್ರಕರ್ತರನ್ನು, ಹೋರಾಟಗಾರರನ್ನು ಸ ಮಾಜಕ್ಕೆ ನೀಡಿದ ಹೆಗ್ಗಳಿಕೆ ಅದಕ್ಕಿದೆ. ಅಷ್ಟೇ ಯಶಸ್ಸು ಕಂಡ ಹತ್ತು ಹಲವು ಹೋರಾಟಗಳ ಜನ್ಮಸ್ಥಳವೂ ಆಗಿತ್ತು. ಇಷ್ಟೊಂದು ಭಾವನಾತ್ಮಕವಾಗಿ ಪಾಪು ಮತ್ತು ಹುಬ್ಬಳ್ಳಿ ನಡುವಿದ್ದ ಬೆಸುಗೆ ಈಗ ಬಿರಿದಿದೆ. 

1949ರಲ್ಲಿ ಪತ್ರಿಕೋದ್ಯಮ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿ ವಾಪಸ್ಸಾದ ಬಳಿಕ ಪಾಪು ನವಯುಗ, ಪ್ರಪಂಚ, ಸಂಗಮ ಹಾಗೂ ವಿಶ್ವವಾಣಿ ಪತ್ರಿಕೆಗಳನ್ನು ಹುಬ್ಬಳ್ಳಿಯಿಂದ ನಡೆಸಿ 410 ಕಿಮೀ ದೂರದಲ್ಲಿರುವ ವಿಧಾನಸೌಧವನ್ನು ಅಲುಗಾಡಿಸಿ ದರು. ಹಲವಾರು ಭಾರಿ ಹುಬ್ಬಳ್ಳಿ ಜವಾರಿ ಭಾಷೆಯ ಶಬ್ದಗಳನ್ನು ಹೊಂದಿದ್ದ ಪತ್ರಿಕೆ ದೊಡ್ಡ ರಾಜಕಾ ರಣಿಗಳ ಸಣ್ಣತನವನ್ನು ಕನಲುವಂತೆ ಮಾಡಿತ್ತು. ಸರಿದಾರಿಗೆ ತಂದಿತ್ತು. ಮೈಸೂರು ರಾಜ್ಯವಾಗಿದ್ದ ಅಂದು ಮುಂಬೈ ಕರ್ನಾಟಕ ಭಾಗದ ಶಕ್ತಿಕೇಂದ್ರವಾಗಿ ಹುಬ್ಬಳ್ಳಿಯಿತ್ತು. ಅದರಲ್ಲೂ ಹುಬ್ಬಳ್ಳಿಯಲ್ಲಿ ಪಾಟೀಲ ಪುಟ್ಟಪ್ಪ ಅವರ ಪ್ರಪಂಚ ಕಚೇರಿ, ಇನ್ನೊಂದು ಚೇಂಬರ್ ಆಫ್ ಕಾಮರ್ಸ್ ಕೇಂದ್ರ ಬಿಂದುಗಳಾಗಿದ್ದವು. ಹೋರಾಟ ರೂಪುಗೊಳ್ಳುತ್ತಿದ್ದುದೆ ಇಲ್ಲಿ. ನಿಜಲಿಂಗಪ್ಪ ಅವರು ಈ ಕಚೇರಿಯಲ್ಲಿ ಗಂಟೆಗಟ್ಟಲೆ ಕುಳಿತಿದ್ದುದನ್ನು ಕಂ ಡಿದ್ದೇನೆ ಎನ್ನುತ್ತಾರೆ ಮಾಜಿ ಸಂಸದ ಐ.ಜಿ. ಸನದಿ. ಪಾಪು ಕರ್ನಾಟಕ ಏಕೀಕರಣ ಹೋರಾಟ, ಕನ್ನಡ ಭಾಷೆಗಾಗಿ ವರನಟ ರಾಜಕುಮಾರ್ ಅವರನ್ನು ಕರೆತಂದ ಗೋಕಾಕ ಚಳವಳಿಗಳ ರೂಪು ರೇಷೆ ಸಿದ್ಧಗೊಂಡಿದ್ದು ಪಾಪು ಅವರ ಇದೇ ಕರ್ಮಭೂಮಿಯಲ್ಲಿ. ಬಳಿಕ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ಕೇಂದ್ರ ಸ್ಥಾಪನೆಯಾಗಲಿ ಎಂದು ಹಳಿ ಮೇಲೆ ಕೂತರು. 

ಕರ್ಮಭೂಮಿ ಹುಬ್ಬಳ್ಳಿಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಪಾಪು ಇಲ್ಲಿನ ದೇಶಪಾಂಡೆ ನಗರದ ಜಿಮಖಾನಾ ಮೈದಾನವನ್ನು ಕಬಳಿಸುವ ಹುನ್ನಾರ ನಡೆದಿದೆ ಎಂದಾಗ ನೂರರ ವಯಸ್ಸಲ್ಲಿ ಶತಶತ ಶಕ್ತಿಗಳೊಂದಿಗೆ ಧರಣಿ ಕುಳಿತಿದ್ದರು. ಅಷ್ಟೇ ಅಲ್ಲ, ತೀರಾ ಇತ್ತಿಚೆಗೆ ಕೆಎಸ್‌ಆರ್‌ಟಿಸಿ ನೌಕರರು ತಮ್ಮನ್ನು ಉಳಿಸಿ ಎಂದು ಮನೆಯನ್ನು ಎಡತಾಕಿದಾಗ ಅವರ ಬೇಡಿಕೆಯಲ್ಲಿನ ನ್ಯಾಯವನ್ನು ಪರಾಮರ್ಶಿಸಿ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಲ್ಲದೆ, ಸರ್ಕಾರದ ಮಟ್ಟದಲ್ಲಿ ಹೋರಾ ಡಿದರು. ಇಂಥ ಪಾಪು ಇಂದು ಸ್ವಗ್ರಾಮದಲ್ಲಿ ಲೀನರಾಗಿದ್ದಾರೆ. ಹುಬ್ಬಳ್ಳಿಯಲ್ಲಿನ ಅವರ ಹೆಜ್ಜೆ ಗುರುತುಗಳು ಮಸಕು ಮಸಕಾಗಿ ಕಾಣುತ್ತಿವೆ. 

ಖಾದಿಗಾಗಿ: 

ಇವಿಷ್ಟೇ ಅಲ್ಲ, ಪಾಟೀಲ್ ಪುಟ್ಟ ಪ್ಪನವರು ಹುಬ್ಬಳ್ಳಿ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಅಧ್ಯಕ್ಷರಾಗಿ 2017ರಿಂದ ಸೋಮವಾರದವರೆಗೂ ಮುಂದುವರಿದಿದ್ದರು. ಅಗಲಿಕೆ ಹಿನ್ನೆಲೆಯಲ್ಲಿ ನಿಯೋಜಿತ ಅಧ್ಯಕ್ಷರಾಗಿರುವ ಕೆ.ವಿ. ಪತ್ತಾರ ಮಾತನಾಡಿ, ಹಿಂದಿನಿಂದಲೂ ಸಂಘಕ್ಕೆ ಪಾಪು ಅಧ್ಯಕ್ಷರಾಗಿರಲಿ, ಇಲ್ಲದಿರಲಿ ಎಂದಿಗೂ ಸುಪ್ರೀಂ ಎನ್ನಿಸಿಕೊಂಡವರು. ಖಾದಿಯ ಎಲ್ಲ ಹೋರಾಟಕ್ಕೆ ಬೆನ್ನೆಲುಬಾಗಿದ್ದರು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾ ರ ನೀಡುತ್ತಿದ್ದ 10ಪೈಸೆ ಸಹಾಯಧನವನ್ನು ಹೆಚ್ಚಿಸುವಂತೆ ಪಾಪು ಅವರು ಹೋರಾಡಿದ್ದ ಫಲವಾಗಿಯೆ ಇವತ್ತು ಕೈಮಗ್ಗ ನೇಕಾರರಿಗೆ ವರ ದಾನವಾಯಿತು. ಕಳೆದ 2016ರಿಂದ ರಾಜ್ಯ ಸರ್ಕಾ ರದಿಂದ ಬರುತ್ತಿದ್ದ ಸಹಾಯಧನ ಸ್ಥಗಿತ ಗೊಂಡಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ವೇಳೆ, ನಮ್ಮ ನಿಯೋಗದ ಮುಖ್ಯಸ್ಥರಾಗಿ ಬೆಂಗಳೂರಿಗೆ ಬಂದಿದ್ದರು. ದೇವೇಗೌಡರನ್ನು ಭೇಟಿಯಾದರು. ಈಚೆಗೆ ಯಡಿಯೂರಪ್ಪ ಅವ ರನ್ನೂ ಭೇಟಿಯಾಗಿ ಸಹಾಯಧನ ಬಿಡುಗಡೆಗೆ ಕೇಳಿದ್ದರು. ಆಸ್ಪತ್ರೆ ಸೇರುವ 15 ದಿನಗಳ ಮೊದಲು ಸಂಘಕ್ಕೆ ಬಂದು ವಿ ಚಾರ ವಿವರ ಪಡೆದಿದ್ದರು ಎಂದು ಬೇಸರಿಸಿದರು.

ಪಾಟೀಲ ಪುಟ್ಟಪ್ಪ ಅವರ ಕಚೇರಿಯೆ ನಮಗೆ ಆಶ್ರಯವಾಗಿತ್ತು. ಅಲ್ಲಿಯೆ ಉಳಿದು, ಅಲ್ಲಿಂದಲೆ ಬೆಳೆದವರು ನಾವು. ಪಾಟೀಲ ಪುಟ್ಟಪ್ಪನವರ ಕಾರ್ಯಕ್ಷೇತ್ರವನ್ನು ಹುಬ್ಬಳ್ಳಿಯಲ್ಲಿ ಆರಂಭಿಸದಿದ್ದರೆ ಬಹುಶಃ ನಮ್ಮಂಥವರು ಬೆಳಕಿಗೆ ಬರುತ್ತಿರಲಿಲ್ಲ ಎಂದು ಮಾಜಿ ಸಂಸದ ಐ.ಜಿ. ಸನದಿ ಹೇಳಿದ್ದಾರೆ. 
 

click me!