ಚಿಂತಕ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಗೆ ಡಾಲಿ ಧನಂಜಯ ಆಕ್ಷೇಪ/ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಏರಿಸಿದ ವಿಚಾರ/ ಇಬ್ಬರ ನಡುವಿನ ವಿಚಾರಕ್ಕೆ ಅಭಿಮಾನಿಗಳ ಸೋಶಿಯಲ್ ವಾರ್
ಬೆಂಗಳೂರು(ಮಾ. 17) ಮಾರಕ ಕೊರೋನಾ ಇಡೀ ಜಗತ್ತಿನಲ್ಲಿಯೇ ತಲ್ಲಣ ಮಾಡುತ್ತಿದ್ದರೆ ಕರ್ನಾಟಕದ ಸೋಶಿಯಲ್ ಮೀಡಿಯಾ ಮಟ್ಟಿಗೆ ಮಂಗಳವಾರ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾಡಿದ ಟ್ವೀಟ್ ಒಂದು ದೊಡ್ಡ ಸುದ್ದಿಗೆ ಕಾರಣವಾಯಿತು. ಇದಕ್ಕೆ ಇಂಬು ನೀಡಿದ್ದು ಡಾಲಿ ಧನಂಜಯ ಮಾಡಿದ ಪ್ರತಿ ಟ್ವೀಟ್.
ಕೊರೋನಾ ಎಂಬ ವೈರಸ್ನಿಂದ ತತ್ತರಿಸಿ ಹೋಗಿರುವ ಇಟಲಿಯಲ್ಲಿ 80 ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ಶುಶ್ರೂಷೆ ಮಾಡಲು ಹಿಂದೆ ಮುಂದೆ ನೋಡಲಾಗುತ್ತಿದೆ. ಹೆಚ್ಚಿನ ರೋಗಿಗಳಿದ್ದರೆ ವಯಸ್ಸಿನ ಮಾನದಂಡದ ಅಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸುದ್ದಿಯೊಂದನ್ನು ಆಂಗ್ಲ ಮಾಧ್ಯಮಪ್ರಕಟ ಮಾಡಿತ್ತು. ಇದನ್ನು ಆಧರಿಸಿ ಚಕ್ರವರ್ತಿ ಟ್ವೀಟ್ ಮಾಡಿದ್ದರು. ಅಲ್ಲಿ ಅವರು ಬಳಕೆ ಮಾಡಿದ್ದ ಪದವೊಂದಕ್ಕೆ ಡಾಲಿ ಧನಂಜಯ ಆಕ್ಷೇಪ ಎತ್ತಿದ್ದರು.
ರಿಟ್ವೀಟ್ ಮಾಡಿದ್ದ ಧನಂಜಯ್ 'ಏನಾದರು ಆಗು ಮೊದಲು ಮಾನವನಾಗು' ಎಂದು ಕವಿ ಸಾಲಿನ ಮೂಲಕ ಸಣ್ಣ ಏಟು ನೀಡಿದ್ದರು. ಇದಾದ ಮೇಲೆ ಮತ್ತೆ ಪ್ರತಿಕ್ರಿಯೆ ನೀಡಿದ ಸೂಲಿಬೆಲೆ ನನ್ನ ಟ್ವೀಟ್ ಸರಿ ಮಾಡಿಕೊಳ್ಳುತ್ತಿದ್ದೇನೆ. ವಿಶ್ವದಾದ್ಯಂತ ಸಂಚರಿಸುವ ಮಿಷನರಿಗಳ ಸಂದೇಶವನ್ನು ನಾನು ನನ್ನ ಟ್ವೀಟ್ ನಲ್ಲಿ ಬಳಕೆ ಮಾಡಿಕೊಂಡಿದ್ದೆ. ಇಟಲಿ 80ಕ್ಕೂ ಅಧಿಕ ಜನರ ಆರೈಕೆಗೆ ವಿಫಲವಾಗಿದೆ. ದೇವರು ಎಲ್ಲರನ್ನು ಒಂದೇ ಸಮನಾಗಿ ಪ್ರೀತಿ ಮಾಡುತ್ತಾನೆ ಆದರೆ 80 ವರ್ಷದ ಮೇಲಿನವರನ್ನು ಹೊರತುಪಡಿಸಿ!
ಜಸ್ಟ್ ಕೆಮ್ಮಿದ್ದಷ್ಟೆ; ಬಂದ್ ಎತ್ತಾಕಿಕೊಂಡು ಹೋದ್ರು!
ಹೀಗೆಂದು ಹೇಳಿ ತಾವು ಹೇಳಿದ್ದಕ್ಕೆ ಒಂದು ಸ್ಪಷ್ಟನೆ ನೀಡಿದ್ದಾರೆ. ಇಬ್ಬರ ಕುರಿತಾಗಿಯೂ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗೆಯ ಸೂಕ್ಷ್ಮ ಸಂದರ್ಭಗಳಲ್ಲಿ ಟ್ವೀಟ್ ಮಾಡುವಾಗ ಎಚ್ಚರಿಕೆ ವಹಿಸಬೇಕಾದದ್ದು ಅಗತ್ಯ.
ಕೊರೋನಾ ಕಾರಣಕ್ಕೆ ಇಡೀ ಜಗತ್ತು ತಲೆ ಬಿಸಿ ಮಾಡಿಕೊಂಡಿದ್ದರೆ ಎಡ-ಬಲ ಎಂಬ ತಿಕ್ಕಾಟ ಬೇಕಿತ್ತೆ? ಮಾನವತೆಯ ಪಾಠ ಹೇಳುವ ಸಂದರ್ಭ ಇದಾಗಿತ್ತೆ? ಯಾರು ಯಾರನ್ನು ಅರಿತುಕೊಳ್ಳಬೇಕು? ಇನ್ನೂ ಮುಂತಾದ ಪ್ರಶ್ನೆಗಳನ್ನು ನಮಗೆ ನಾವು ಕೇಳಿಕೊಳ್ಳಲು ಇದೊಂದು ಸುಸಂದರ್ಭ ಎಂದಷ್ಟೇ ಹೇಳಬಹುದು.
Sorry I correct my tweet.
Missionaries travel worldwide with the msg I wrote. But fail to serve people of 80+ in Italy! They reject them the service of ICU! God loves all but not the people with age more than 80!
And to those who are fuming, FYI Vatican is surrounded by Italy https://t.co/qJt1u243GM
ಏನಾದರು ಆಗು ಮೊದಲು ಮಾನವನಾಗು🙏 https://t.co/F2SRrNkAn5
— Dhananjaya (@Dhananjayaka)