ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಾದರೂ ಇಲ್ಲಿಯವರೆಗೂ ನೆರೆ ಸಂತ್ರಸ್ಥರ ಹತ್ರ ಸುಳಿದಿಲ್ಲ, ಸಂತ್ರಸ್ಥರ ಕಣ್ಣೀರು ಒರೆಸುತ್ತಿಲ್ಲ ಎಂದು ಮಳೆಗೆ ಮನೆಯನ್ನ ಕಳೆದುಕೊಂಡವರು ಕಾಂಗ್ರೆಸ್ ಸರಕಾರಕ್ಕೆ ಹಿಡಿಶಾಪವನ್ನ ಹಾಕುತ್ತಿದ್ದಾರೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಆ.01): ಕಳೆದ ಮೂರು ವರ್ಷದಿಂದ ರಾಜ್ಯ ಸರಕಾರದಿಂದ ನೆರೆ ಸಂತ್ರಸ್ಥರಿಗೆ ಎ,ಬಿ, ಸಿ ಕೆಟಗೇರಿಯಲ್ಲಿ ಮನೆಗಳನ್ನ ನೀಡಲಾಗುತ್ತಿತ್ತು. ಆದರೆ ಸದ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಾದರೂ ಇಲ್ಲಿಯವರೆಗೂ ನೆರೆ ಸಂತ್ರಸ್ಥರ ಹತ್ರ ಸುಳಿದಿಲ್ಲ, ಸಂತ್ರಸ್ಥರ ಕಣ್ಣೀರು ಒರೆಸುತ್ತಿಲ್ಲ ಎಂದು ಮಳೆಗೆ ಮನೆಯನ್ನ ಕಳೆದುಕೊಂಡವರು ಕಾಂಗ್ರೆಸ್ ಸರಕಾರಕ್ಕೆ ಹಿಡಿಶಾಪವನ್ನ ಹಾಕುತ್ತಿದ್ದಾರೆ.
undefined
ಪ್ರಸಕ್ತ ಸಾಲಿನಲ್ಲಿ 2023 ರಲ್ಲಿ ಕಳೆದ ಜುಲೈ 20 ರಿಂದ ಸುರಿದ ಭಾರಿ ಮಳೆಗೆ ಧಾರವಾಡ ಜಿಲ್ಲೆಯಾದ್ಯಂತ ಜನರು ಮಳೆಗೆ ತತ್ತರಿಸಿದ್ದಾರೆ..ಒಂದು ಕಡೆ ಮುಂಗಾರು ಮಳೆ ಕೈ ಕೊಟ್ಟು ಬರಗಾಲ ಘೋಷಣೆ ಆಗುವ ಹಂತಕ್ಕೆಬಂದು ನಿಂತಿರುವ ಧಾರವಾಡ ಜಿಲ್ಲೆಯಾದ್ಯಂತ ಕಳೆದ ಜುಲೈ 15 ರಿಂದ ಸುರಿಧ ಭಾರಿ ಮಳೆಗೆ ಜಿಲ್ಲೆಯಾದ್ಯಂತ ಬರೊಬ್ಬರಿ 677 ಮನೆಗಳು ಹಾನಿಯಾಗಿವೆ.ಆದರೆ ಕೇವಲ 677 ಮನೆಗಳು ಹಾನಿಯಾಗಿದ್ದಲ್ಲದೆ 200 ಕ್ಕೂ ಹೆಚ್ಚು ಮನೆಗಳು ಬಾಹಶಹ ಹಾನಿಯಾಗಿವೆ.ಆದರೆ ಅಂತಹ ಮನೆಗಳನ್ನ ಸರಕಾರ ಕಳೆದ ಮೂರು ವರ್ಷದಿಂದ ಎ,ಬಿ,ಸಿ ಕೆಟಗೇರಿಯಲ್ಲಿ ಮನೆಗಳನ್ನ ಹಂತ ಹಂತವಾಗಿ ಗುರುತಿಸಿ ಮನೆಗಳಿಗೆ ಹಣ ಬಿಡುಗಡೆ ಯಾಗುತ್ತಿತ್ತು.ಆದರೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಇನ್ನುವರೆಗೂ ಕೇವಲ ಜಿಲ್ಲಾಧಿಕಾರಿಗಳ ಮುಖಾಂತರ ಮನೆಗಳನ್ನ ಐಡೆಂಟಿಪೈ ಮಾಡಿಸುತ್ತಿದ್ದಾರೆ ಹೊರೆತು ಯಾವುದೆ ಕಾರಣಕ್ಕೂ ಆರ್ ಜಿ ಎಸ್ ಎಲ್ ವೆಬ್ ಸೈನ್ ನಲ್ಲಿ ಅಪ್ ಲೋಡ್ ಮಾಡುವ ಕಾರ್ಯ ಆರಂಭ ವಾಗಿಲ್ಲ..
ವಿದ್ಯಾಕಾಶಿ ಧಾರವಾಡಲ್ಲಿ ಸರ್ಕಾರಿ ಶಾಲೆಯ 496 ಕೊಠಡಿಗಳು ಶಿಥಿಲ: ಜೀವಭಯದಲ್ಲಿ ಮಕ್ಕಳಿಗೆ ಪಾಠ ಭೋದನೆ
ಇನ್ನು ನೇಮಕವಾಗದ ನೂಡಲ್ ಅಧಿಕಾರಿಗಳು : ಪ್ರತಿ ವರ್ಷ ಮಳೆ ಬಂತೆಂದರೆ ಸಾಕು ಜೂನ್ ಮೊದಲ ವಾರದಲ್ಲಿ ಓರ್ವ ತಲಾಟೆ, ಸರ್ಕಲರ್, ಮತ್ತು ತಹಶಿಲ್ದಾರ ಸೇರಿದಂತೆ ಮೂವರ ಅಧಿಕಾರಿಗಳ ತಂಡವೊಂದು ರಚನೆಯಾಗುತ್ತಿತ್ತು..ಆದರೆ ಇನ್ನು ಸರಕಾರದ ಆದೇಶ ಆಗದೆ ಇರೋದಕ್ಕೆ ಟಿಮ್ ರಚನೆ ಯಾಗಿಲ್ಲ ಮತ್ತು ನಾವು ಸರಕಾರಕ್ಕೆ ಮಾಹಿತಿಯನ್ನ ಕೊಡುತ್ತೆವೆ ಸರಕಾರ ಆದೇಶ ಮಾಡಿದ ಬಳಿಕ ನಾವು ಎಬಿಸಿ ಕೆಟಗೇರಿಯಲ್ಲಿ ಮನೆಗಳ ಎಂಟ್ರಿ ಕಾರ್ಯವನ್ನ ಮತ್ತು ನೂಡಲ್ ಅಧಿಕಾರಿಗಳನ್ನ ನೇಮಕ ಮಾಡಲಾಗುತ್ತೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಡನೆಯನ್ನ ನೀಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಮನೆಗಳು ಬಿದ್ದಿರುವ ತಾಲೂಕಾವಾರು ಅಂಕ ಅಂಶಗಳನ್ನ ನೋಡೋದಾದ್ರೆ
ಧಾರವಾಡ ತಾಲೂಕಿನಲ್ಲಿ 87, ಅಳ್ನಾವರ ತಾಲೂಕಿನಲ್ಲಿ 4, ಹುಬ್ಬಳ್ಳಿ ಶಹರದಲ್ಲಿ 5, ಹುಬ್ಬಳ್ಳಿ ಗ್ರಾಮೀಣ ಕ್ಷೆತ್ರದಲ್ಲಿ 11, ಕಲಘಟಗಿ ತಾಲೂಕಿನಲ್ಲಿ 45, ಕುಂದಗೋಳ್ 26, ನವಲಗುಂದ ತಾಲೂಕಿನಲ್ಲಿ 10 ಮನೆಗಳು, ಅಣ್ಣಿಗೇರಿ ತಾಲೂಕಿನಲ್ಲಿ 8 ಸೇರಿದಂತೆ ಬಾಗಶಹ ಮನೆಗಳು ಹಾನಿಯಾಗಿವೆ ಆದರೆ ಇನ್ನುವರೆಗೂ ಸರಕಾರದ ಆದೇಶವಿಲ್ಲ ಎಂದು ತಹಶಿಲ್ದಾರಗಳು ,ಜಿಲ್ಲಾಡಳಿತ ಸುಮ್ಮನೆ ಕುಳತಿದೆ.
ರಾಜ್ಯ ಸರಕಾರದ ಆದೇಶದ ಮುಖ ಮಾಡಿದ ಸಂತ್ರಸ್ಥರು: ಕಳೆದ ಮೂರು ವರ್ಷದಿಂದ ನೆರೆ ಸಂತ್ರಸ್ಥರಿಗೆ ಎಬಿಸಿ ಕೆಟಗೇರಿಯಲ್ಲಿ ಸಿಗುತ್ತಿದ್ದ ಮನೆಗಳು ಈ ಭಾರಿ ಸಿಗುತ್ತಾ ಎಂಬ ನೀರಿಕ್ಷೆಯಲ್ಲಿ ಸಂತ್ರಸ್ತರು ಒಂದು ಕಡೆ ಇದ್ರೆ ಮತ್ತೊಂದಡೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಸಿಎಂ ಅವರು ಎಬಿಸಿ ಕೆಟಗೇರಿಯ ಮನೆಗಳನ್ನ ಕೊಡೋದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ..ಆದರೆ ಇನ್ನುಆದೇಶ ಮಾಡಿಲ್ಲ ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಅದೇಶ ಮಾಡಬಹುದು ಎಂದು ಸಚಿವ ಸಂತೋಷ್ ಲಾಡ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ.