ಚಿಕ್ಕಮಗಳೂರು: 3 ಲಕ್ಷ ಬಂಡವಾಳ ಹಾಕಿ 30 ಲಕ್ಷದ ಒಡೆಯನಾದ ರೈತ..!

By Kannadaprabha News  |  First Published Aug 1, 2023, 8:12 PM IST

ಟೊಮೊಟೊ ದರ ಏರಿಕೆ ಆಗುತ್ತಿದ್ದು ಲಾಭದತ್ತ ರೈತಾಪಿ ವರ್ಗವಿದೆ. ಜಿಲ್ಲೆಯ ಟೊಮೆಟೊ ಹೊರ ರಾಜ್ಯಗಳಿಗೆ ಸರಬರಾಜು ಆಗುತ್ತಿದ್ದು ದೆಹಲಿ, ರಾಜಸ್ಥಾನ, ಗುಜರಾತ್ , ಪಶ್ಚಿಮ ಬಂಗಾಳಕ್ಕೆ ಜಿಲ್ಲೆಯ ಟೊಮೆಟೊ ಹೋಗುತ್ತಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.01):  ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಟೊಮೇಟೋ ಬೆಳೆಯುವ ರೈತರಿಗೆ ಇದೀಗ ಶುಕ್ರದಸೆ ಆರಂಭವಾಗಿದೆ. ಕಳೆದ 20 ವರ್ಷಗಳಿಂದ ಟೊಮೆಟೊ ಬೆಳೆಯನ್ನು ಬೆಳೆದು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದ ರೈತರಿಗೆ ಬಂಪರ್ ಬೆಲೆ ಸಿಕ್ಕಿದೆ. ಇತ್ತೀಚೆಗೆ ರಾಜ್ಯದಲ್ಲಿ  ಟೊಮೆಟೊ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದೀಗ ಮತ್ತಷ್ಟು ಏರಿಕೆಯಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 160ರಿಂದ 180ರೂ. ದಾಟಿದೆ. ಚಿಕ್ಕಮಗಳೂರು ನಗರದ ಎಪಿಎಂಸಿಯಲ್ಲಿರುವ ಟೊಮೊಟೊ ಮಂಡಿಗೆ ಜಿಲ್ಲೆ ಮತ್ತು ಅಕ್ಕ–ಪಕ್ಕದ ಜಿಲ್ಲೆಗಳಿಂದ ರೈತರು ಮತ್ತು ವ್ಯಾಪಾರಿಗಳು ತಂದಿದ್ದ ಟೊಮೊಟೊ ವನ್ನು ಬೆಳಿಗ್ಗೆ ಹರಾಜು ಮಾಡಲಾಯಿತು. 

Latest Videos

undefined

ಎಪಿಎಂಸಿಯಲ್ಲಿ ಟೊಮೇಟೋ ಹರಾಜು ಪ್ರಕ್ರಿಯೆ 

ಇಂದು 15 ಸಾವಿರ ಬಾಕ್ಸ್ ಟೊಮೆಟೊ ಮಾರುಕಟ್ಟೆಗೆ ಬಂದಿತ್ತು. ನಿನ್ನೆ 5 ಸಾವಿರ ಬಾಕ್ಸ್ ಬಂದಿದ್ದು,ನಾಳೆ  20 ಸಾವಿರ ಬಾಕ್ಸ್ ಟೊಮೊಟೊ ಬರಲಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ  ಟೊಮೊಟೊ ಹರಾಜು ಪ್ರಕ್ರಿಯೆ ನಡೆಯಿತು.25 ಕೆ ಜೆ ಬಾಕ್ಸ್ ಟೊಮೆಟೋ 2500ರಿಂದ 4600 ವ್ಯಾಪಾರವಾಯಿತು. ಕೆ.ಜಿ. 160ರಿಂದ 180 ರೂಪಾಯಿ ವ್ಯಾಪಾರ ಆಯಿತು.ದರ ಏರಿಕೆ ಬಗ್ಗೆ ಮಾತಾಡಿದ ವ್ಯಾಪಾರಿ ಹರೀಶ್  ಟೊಮೆಟೊ ದರ ಕಡಿಮೆಯಾಗಲು ಕನಿಷ್ಠ ಇನ್ನೂ ಒಂದು ತಿಂಗಳು ಬೇಕಾಗಲಿದೆ. ಮಹಾರಾಷ್ಟ್ರ ಸೇರಿದಂತೆ ಇತರೆಡೆ ಇರುವ ಟೊಮೆಟೊ ಬೆಳೆ ಮಾರುಕಟ್ಟೆಗೆ ಬಂದರೆ ದರ ಕಡಿಮೆಯಾಗಲಿದೆ ಎಂದರು. 

ಒಂದೇ ಕಾಫಿ ಎಸ್ಟೇಟ್‌ನಲ್ಲಿ ಬೀಡುಬಿಟ್ಟ 16 ಕಾಡಾನೆಗಳು: ಜೀವ ಭಯದಲ್ಲಿ ರೈತರು

3 ಲಕ್ಷ ಬಂಡಾವಳ ಹಾಕಿ 30 ಲಕ್ಷದ ಒಡೆಯನಾದ ರೈತ

ಬಯಲುಸೀಮೆಭಾಗವಾದ ಅಂತಘಟ್ಟಯ ಮೂಲದ ಕುಮಾರಪ್ಪನಿಗೆ ಬಂಪರ್ ಬೆಲೆ ಸಿಕ್ಕಿದೆ. 3 ಲಕ್ಷ ಬಂಡಾವಳ ಹಾಕಿದ ರೈತ ಕುಮಾರಪ್ಪನಿಗೆ 30 ಲಕ್ಷ ಲಾಭ ಸಿಕ್ಕಿದೆ. ಟೊಮೊಟೊ ದರ ಏರಿಕೆ ಆಗುತ್ತಿದ್ದು ಲಾಭದತ್ತ ರೈತಾಪಿ ವರ್ಗವಿದೆ. ಜಿಲ್ಲೆಯ ಟೊಮೆಟೊ ಹೊರ ರಾಜ್ಯಗಳಿಗೆ ಸರಬರಾಜು ಆಗುತ್ತಿದ್ದು ದೆಹಲಿ, ರಾಜಸ್ಥಾನ, ಗುಜರಾತ್ , ಪಶ್ಚಿಮ ಬಂಗಾಳಕ್ಕೆ ಜಿಲ್ಲೆಯ ಟೊಮೆಟೊ ಹೋಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ರೈತ ಸಮ್ಮುಖದಲ್ಲಿ  ಟೊಮೊಟೊ ಹರಾಜು ಪ್ರಕ್ರಿಯೆ ನಡೆಯುವುದು ಮತ್ತೊಂದು ವಿಶೇಷ ಆಗಿದೆ.

click me!