ರಾಜ್ಯದ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಒಂದು ಕಾಫಿ ಎಸ್ಟೇಟ್‌ನಲ್ಲಿ 16 ಕಾಡಾನೆಗಳು ವಾರದಿಂದ ಬೀಡು ಬಿಟ್ಟಿದ್ದು, ರೈತರು ಜೀವಭಯದಲ್ಲಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಆ.01): ರಾಜ್ಯದ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಬಂದು ಹೋಗಲಸ್ಟೇ ಸ್ವರ್ಗವೆನಿಸುತ್ತದೆ. ಆದರೆ, ಇಲ್ಲಿ ನೆಲೆಗೊಂಡು ಜೀವನ ಮಾಡುವವರಿಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗತೊಡಗಿದೆ. ಮೂಡಿಗೆರೆಯ ಒಂದೇ ಕಾಫಿ ಎಸ್ಟೇಟ್‌ನಲ್ಲಿ 16 ಕಾಡಾನೆಗಳು ಒಂದು ವಾರದಿಂದ ಬೀಡು ಬಿಟ್ಟಿದ್ದು, ಎಲೆಫ್ಯಾಂಟ್ ಟಾಸ್ಕ್ ಫೋರ್ಸ್‌ನ ಆನೆ ಓಡಿಸುವ ಪ್ರಯತ್ನ ಠುಸ್ ಪಟಾಕಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳು ಹಾಗೂ ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕಾಡಾನೆಗಳು ಪದೇ ಪದೇ ದಾಳಿ ನಡೆಸುತ್ತಿದ್ದು ಇಲ್ಲಿನ ರೈತರು, ಜನರು ಆತಂಕದಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಮೂಡಿಗೆರೆ ತಾಲೂಕಿನ ಗೋಣಿ ಬೀಡು ಗ್ರಾಮದ ಸರದಿ. ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು ಕಾಫಿ, ಅಡಿಕೆ ಮುಂತಾದ ಬೆಳೆಗಳಿಗೆ ಹಾನಿ ಮಾಡಿದ್ದು ರೈತರು ಆತಂಕದಿಂದ ಬದುಕುತ್ತಿದ್ದಾರೆ.
undefined
ಪ್ರವಾಸಿಗರಿಗೆ ಗುಡ್‌ನ್ಯೂಸ್: ವೀಕ್ಷಣೆಗೆ ಮುಕ್ತಗೊಂಡ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಜಲಪಾತಗಳು
ಒಂದಲ್ಲ ಎರಡಲ್ಲ ಬರೋಬ್ಬರಿ 16 ಕಾಡಾನೆಗಳು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಸಮೀಪದ ಜಿ. ಹೊಸಳ್ಳಿ ಗ್ರಾಮದಲ್ಲಿರುವ ಟಾಟಾ ಎಸ್ಟೇಟ್ ನಲ್ಲಿ ಆನೆಗಳು ಬೀಡು ಬಿಟ್ಟಿವೆ. ಒಂದಲ್ಲ ಎರಡಲ್ಲ ಬರೋಬ್ಬರಿ 16 ಕಾಡಾನೆಗಳು ಟಾಟಾ ಎಸ್ಟೇಟ್ ನಲ್ಲಿ ಸಾಲಾಗಿ ಸಾಗುವ ದೃಶ್ಯ ಮೊಬೈಲ್ ನಲ್ಲಿ ಸೆರೆ ಆಗಿದೆ.ಕಳೆದ ಅನೇಕ ದಿನಗಳಿಂದ ಜಿ.ಹೊಸಳ್ಳಿ, ಅರೇಹಳ್ಳಿ, ಚೀಕನಹಳ್ಳಿ, ಮಾಕೋನಹಳ್ಳಿ, ಮಲಸಾವರ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಕಾಡಾನೆಗಳು ಸುತ್ತುಹೊಡೆಯುತ್ತಿವೆ. ಗುಂಪಿನಲ್ಲಿ ಮರಿಯಾನೆಗಳು ಇದ್ದು ಕೆಲವೊಮ್ಮೆ ಜನಗಳ ಮೇಲೂ ಎಗರಿ ಬರುತ್ತಿವೆ. ಈ ಕಾಡಾನೆಗಳ ಹಿಂಡಿನಿಂದ ಈ ಭಾಗದಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವ ಸಂದರ್ಭದಲ್ಲಿ ಎಲ್ಲಿ ಆನೆಗಲೂ ಪ್ರತ್ಯಕ್ಷವಾಗುತ್ತವೆ ಎಂದು ಜನರು ಆತಂಕದಿಂದ ಬದುಕುವಂತಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆನಷ್ಟವನ್ನು ಉಂಟುಮಾಡುತ್ತಿವೆ.
ಸ್ಥಳಬಿಟ್ಟು ಕದಲುತ್ತಿಲ್ಲ ಕಾಡಾನೆಗಳು: ಅರಣ್ಯ ಇಲಾಖೆಯ ಎಲಿಪೆಂಟ್ ಟಾಸ್ಕ್ ಪೋರ್ಸ್ ಸಿಬ್ಬಂದಿಗಳು ಆನೆಗಳನ್ನು ಓಡಿಸಲು ಪ್ರಯತ್ನಿಸಿದರೂ ಅವು ಸ್ಥಳಬಿಟ್ಟು ಕದಲುತ್ತಿಲ್ಲ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡುತ್ತಾ ಕಾಫಿ ತೋಟಗಳನ್ನು ಪುಡಿಗೈಯುತ್ತಿವೆ, ಕಾಫಿ ತೋಟಗಳಿಗೆ ಹೋಗಲು ಭಯಪಡುವಂತಾಗಿದೆ, ಕಾರ್ಮಿಕರು ಸಹ ಕೆಲಸಕ್ಕೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಫಿಬೆಳೆಗಾರ ಗಿರೀಶ್ ತಿಳಿಸಿದ್ದಾರೆ. ಕೃಷಿಯನ್ನೆ ನಂಬಿರುವ ನಮಗೆ ಇವುಗಳ ಉಪಟಳದಿಂದ ಸಾಕಷ್ಟು ಹಿಂಸೆ ಅನುಭವಿಸುವಂತ್ತಾಗಿದೆ. ಆನೆಗಳ ದಾಳಿಯಿಂದ ನಮ್ಮಗೆ ಬೆಳೆ ಸಿಗುತ್ತಿಲ್ಲ, ನಮ್ಮ ಜಮೀನನ್ನ ದಯವಿಟ್ಟು ಅರಣ್ಯ ಇಲಾಖೆಯವರೆ ತೆಗೆದುಕೊಂದು ಸೂಕ್ತ ಪರಿಹಾರವನ್ನು ಒದಗಿಸಬೇಕೆಂಬುದು ಒತ್ತಾಯಿಸಿದ್ದಾರೆ.
ವಿಧಿಯ ಕ್ರೂರತ್ವಕ್ಕೆ ಕಾಫಿನಾಡ ಘಟನೆ ಜೀವಂತ ಸಾಕ್ಷಿ ಚಿಕ್ಕಮಗಳೂರು (ಆ.01): ವಿಧಿಯ ಕ್ರೂರತ್ವಕ್ಕೆ ಇಂದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸಾಕ್ಷಿ ಆಗಿದೆ. ಮನೆ ಮಾಲೀಕನ ಅಂತ್ಯ ಸಂಸ್ಕಾರಕ್ಕೆ ಹೋದಾಗ ಮನೆ, ಕೊಟ್ಟಿಗೆ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಮನೆ ಸುಟ್ಟು ಕರಕಲಾಗಿ, ಕೊಟ್ಟಿಗೆಯಲ್ಲಿದ್ದ ರಾಸುಗಳ ಸಜೀವ ದಹನ ಆಗಿವೆ. ಅಜ್ಜಂಪುರ ತಾಲೂಕಿನ ಬಾಣೂರು ಗ್ರಾಮದ 65 ವರ್ಷದ ವೃದ್ಧ ಹನುಮಂತಪ್ಪ ಎಂಬುವರು ಅನ್ಯಾರೋಗ್ಯದಿಂದ ಸಾವನ್ನಪ್ಪಿದ್ದರು. ಮನೆಯವರು ಅವರ ಅಂತ್ಯ ಸಂಸ್ಕಾರಕ್ಕೆಂದು ಹೋಗಿದ್ದ ವೇಳೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ನಿಂದ ಅನಿಲ್ ಸೋರಿಕೆಯಾಗಿ, ಬ್ಲಾಸ್ಟ್ ಆಗಿ ದುರ್ಘಟನೆ ಸಂಭವಿಸಿದೆ. ಸಿಲಿಂಡರ್ ಬ್ಲಾಸ್ಟ್ನಿಂದ ಅಕ್ಕಪಕ್ಕದ ಎರಡು ಶೀಟ್ ಮನೆ ಹಾಗೂ ಮನೆ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಹಸು ಹಾಗೂ ಒಂದು ಕುರಿ ಸಜೀವದಹನವಾಗಿವೆ.
Chikkamagaluru: ಸಾಂಪ್ರಾದಾಯಿಕ ಶೈಲಿಯಲ್ಲಿ ಗದ್ದೆ ನಾಟಿ ಮಾಡಿದ ಮಲೆನಾಡಿಗರು
ರಾಸುಗಳು, ಕುರಿಗಳು ಸಾವು: ಬೆಂಕಿ ಅವಘಡದಿಂದ ಶೀಟ್ ಮನೆ ಹಾಗೂ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟುಕರಕಲಾಗಿವೆ. ಗ್ರಾಮದಲ್ಲಿ ಜನ ಕೂಡ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಕಾರಣ ಗ್ರಾಮದಲ್ಲಿದ್ದ ಕೆಲ ಸ್ಥಳಿಯರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆದರೆ, ಸಿಲಿಂಡರ ಬ್ಲಾಸ್ಟ್ ಆದ ಪರಿಣಾಮ ಮನೆ, ಕೊಟ್ಟಿಗೆ, ರಾಸುಗಳು ಎಲ್ಲವೂ ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿದ್ದಾರೆ. ಅಜ್ಜಂಪರು ಪೊಲೀಸರು ಪ್ರಕರಣ ದಾಖಲಾಗಿದೆ.ಒಂದಡೆ ಮನೆಮಾಲೀಕನ ಸಾವು ಮತ್ತೊಂದಡೆ ಮನೆಯಲ್ಲಿದ್ದ ವಸ್ತುಗಳು,ಜಾನುವಾರು ಬೆಂಕಿಗೆ ಆಹುತಿ ಆಗಿರುವುದು ಮನೆಯರಿಗೆ ತೀವ್ರ ಆಘಾತ ಮೂಡಿಸಿದೆ.