ಚಿಂಚೋಳಿ: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವೃದ್ಧನ ಶವ ಪತ್ತೆ

By Kannadaprabha NewsFirst Published Jul 28, 2021, 3:37 PM IST
Highlights

* ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ನಡೆದ ಘಟನೆ
* ನೀರಿನ ಸೆಳೆತಕ್ಕೆ ವೃದ್ಧ ಕೊಚ್ಚಿ ಹೋಗಿದ್ದ ವೃದ್ಧ
* ಮುಳ್ಳಿನ ಪೊದೆಯಲ್ಲಿ ವೃದ್ಧ ಶವ ಪತ್ತೆ
 

ಚಿಂಚೋಳಿ(ಜು.28): ಮುಲ್ಲಾಮಾರಿ ನದಿ ನೀರು ಇನ್ನೊಂದು ಮಾನವ ಜೀವ ಬಲಿ ಪಡೆದಿದೆ. 2 ವಾರದ ಇಂದೆ ಪೋತಂಗಲ್‌ ರೈತ ಪ್ರಲ್ಹಾದ್‌ ಎಂಬಾತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಆತನ ಶವವೇ ಇನ್ನೂ ಸಿಕ್ಕಿಲ್ಲ, ಏತನ್ಮಧ್ಯೆ ತಾಲೂಕಿನ ಗಾರಂಪಳ್ಳಿ ಗ್ರಾಮದ ಹತ್ತಿರ ಮುಲ್ಲಾಮಾರಿ ನೀರಿನ ಸೆಳೆತಕ್ಕೆ ವೃದ್ಧ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಗಾರಂಪಳ್ಳಿ ಗ್ರಾಮದ ವೃದ್ಧ ಮರೆಪ್ಪ ಸಂಬಣ್ಣ (73) ಮೃತಪಟ್ಟವರು. ಜು.20ರಂದು ಮುಲ್ಲಾಮಾರಿ ನದಿ ಸೇತುವೆ ಮೇಲೆ ಪ್ರವಾಹದ ಹರಿಯುತ್ತಿದ್ದರು ಸಹ ನಡೆದುಕೊಂಡು ಬರುವಾಗ ನೀರಿನ ಸೆಳೆತಕ್ಕೆ ವೃದ್ಧ ಕೊಚ್ಚಿಕೊಂಡು ಹೋಗಿದ್ದಾನೆ. ಜು.26ರಂದು ಮಧ್ಯಾಹ್ನ ಸೇತುವೆ ಸ್ವಲ್ಪ ದೂರ ಮುಳ್ಳಿನ ಪೊದೆಯಲ್ಲಿ ವೃದ್ಧನ  ಪತ್ತೆಯಾಗಿದೆ.

ಜಿಟಿಜಿಟಿ ಮಳೆಗೆ ಕಲಬುರಗಿ ಜನಜೀವನ ಸ್ಥಬ್ಧ

ಘಟನಾ ಸ್ಥಳಕ್ಕೆ ತಹಸಿಲ್ದಾರ ಅರುಣಕುಮಾರ ಕುಲಕರ್ಣಿ, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು, ಪಿಎಸ್‌ಐ ಪಟೇಲ್‌ ಭೇಟಿ ನೀಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಾಲೂಕಿನಲ್ಲಿ ಅಬ್ಬರದ ಮಳೆ ಮುಲ್ಲಾಮಾರಿ ನದಿಯ ಪರಿಶೀಲಿಸಿದ್ದಾರೆ. ಚಿಂಚೋಳಿ ನೀರಿನ ಪ್ರವಾಹಕ್ಕೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
 

click me!