ಮತ್ತೆ ಕೃಷ್ಣೆ ಪ್ರವಾಹ ಭೀತಿ: ಹೊರಹರಿವು ಏರಿಳಿತ..!

By Kannadaprabha News  |  First Published Jul 28, 2021, 3:19 PM IST

*  ಬಸವ ಸಾಗರ ಜಲಾಶಯದಿಂದ 3.5 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ
*  ನದಿಪಾತ್ರದ ಜನರಲ್ಲಿ ಆತಂಕ
* ನೀರಿನ ಪ್ರಮಾಣದಲ್ಲಿ ಹೆಚ್ಚು-ಕಡಿಮೆಯಾಗುವ ಸಾಧ್ಯೆತೆ 
 


ಕೊಡೇಕಲ್‌(ಜು.28): ಸಮೀಪದ ನಾರಾಯಣಪುರದ ಕ್ಕೆ ಒಳ ಹರಿವಿನ ಪ್ರಮಾಣ ಮತ್ತೆ ಹೆಚ್ಚಾಗಿದ್ದು, ಜಲಾಶಯದಿಂದ ಮಂಗಳವಾರ 3.05 ಲಕ್ಷ ಕ್ಯುಸೆಕ್‌ ನೀರು ಬಿಡಲಾಯಿತು. ಜಲಾಶಯದಿಂದ ಹರಿಬರುತ್ತಿದ್ದ ನೀರಿನ ಪ್ರಮಾಣ ಕಳೆದೆರಡು ದಿನಗಳಿಂದ ಕಡಿಮೆಯಾಗಿತ್ತು. ಆದರೆ ಮಂಗಳವಾರದಿಂದ ಮತ್ತೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಜಾಸ್ತಿಯಾಗಿರುವುದರಿಂದ ಪ್ರವಾಹ ಭೀತಿಯಲ್ಲೇ ನದಿ ತೀರದ ಜನತೆ ದಿನದೂಡುವಂತಾಗಿದೆ.

ಒಳಹರಿವಿನ ಪ್ರಮಾಣ ಜಾಸ್ತಿಯಾಗಿರುವುದರಿಂದ ಪ್ರವಾಹ ಭೀತಿಯಲ್ಲಿ ನದಿ ತೀರದ ಜನತೆ ಆತಂಕದಲ್ಲಿದ್ದಾರೆ. ಕಳೆದ ಕೆಲ ದಿನಗಳಿಂದ ಸತತವಾಗಿ ಹಂತ ಹಂತವಾಗಿ ಕೃಷ್ಣಾ ನದಿಗೆ ಭೋರ್ಗರಿಯುವ ನೀರಿನ ಹರಿವಿನ ಪ್ರಮಾಣ ಜಾಸ್ತಿಯಾಗಿದ್ದು, ಕೃಷ್ಣಾ ತೀರದ ಬಂಡೋಳ್ಳಿ, ತಿಂಥಣಿ, ಬೆಂಚಿಗಡ್ಡಿ, ದೇವರಗಡ್ಡಿ, ಮೇಲಿನಗಡ್ಡಿ, ನೀಲಕಂಠ ರಾಯನಗಡ್ಡಿ ಸೇರಿ ಇತರೆ ಗ್ರಾಮಗಳ ಜನತೆ ಯಲ್ಲಿಭೀತಿ ಉಂಟಾಗಿತ್ತು.

Tap to resize

Latest Videos

undefined

ನೆಮ್ಮದಿಯಾಗಿದ್ದ ಜನರಿಗೆ ಆತಂಕ:

ಕಳೆದ ಭಾನುವಾರದಿಂದ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾದ್ದರಿಂದ ನದಿ ತೀರದ ಜನತೆಯಲ್ಲಿ ಕೊಂಚ ನೆಮ್ಮದಿಯುಂಟಾಗಿತ್ತು. ಆದರೆ ಮಳೆಯಾಗದಿದ್ದರೂ ಆಲಮಟ್ಟಿ ಜಲಾಶಯದಿಂದ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣದಿಂದಾಗಿ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಸ್ಥರಿಗೆ ಮತ್ತೆ ಪ್ರವಾಹ ಭೀತಿ ಎದುರಿಸುವಂತಾಗಿದೆ.

ರಾಯಚೂರು: ಎಲೆಬಿಚ್ಚಾಲಿಯ ರಾಯರ ಜಪದಕಟ್ಟೆ ಮುಳುಗಡೆ

ಜಲಾಶಯಕ್ಕೆ ಯಾವುದೇ ಸಮಯದಲ್ಲಾದರೂ ನೀರಿನ ಪ್ರಮಾಣ ಹೆಚ್ಚು-ಕಡಿಮೆಯಾಗುವ ಸಾಧ್ಯೆತೆಗಳಿವುದರಿಂದ ಇಂದಿಗೂ ಸಹ ನದಿ ತೀರದ ಗ್ರಾಮಸ್ಥರು ಎಚ್ಚರದಿಂದಿರಬೇಕೆಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
492.25 ಮೀ ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 489.58 ಮೀ ತಲುಪಿದ್ದು, 22.49 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಸಂಗ್ರಹ ಮಟ್ಟಕಾಯ್ದುಕೊಂಡು ಜಲಾಶಯದ ಗೇಟ್‌ಗಳ ಮೂಲಕ 30 ಗೇಟ್‌ ತೆರೆಯುವ ಮೂಲಕ 3.05 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.

ಕೃಷ್ಣಾ ನದಿಗೆ ಕಳೆದೆರೆಡು ದಿನಗಳಿಂದ ಜಲಾಶಯದಿಂದ ನೀರಿನ ಹೊರಹರಿವು ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದರಿಂದ ನದಿಗೆ ಯಾವುದೇ ಕ್ಷಣದಲ್ಲಾದರೂ ಹೆಚ್ಚಿನ ನೀರು ಹರಿಬಿಡುವ ಸಾಧ್ಯತೆವಿರುತ್ತದೆ. ಈ ನಟ್ಟಿನಲ್ಲಿ ನದಿ ತೀರದ ಗ್ರಾಮಸ್ಥರು ಸದಾ ಎಚ್ಚರದಿಂದಿರಬೇಕು ಎಂದು ಹುಣಸಗಿ ತಹಸೀಲ್ದಾರ್‌ ಮಹದೇವಪ್ಪಗೌಡ ಬಿರಾದಾರ ತಿಳಿಸಿದ್ದಾರೆ.  
 

click me!