ಇತ್ತೀಚೆಗೆ ಸುರಿದ ಮಳೆಗೆ ಎರಡೂ ತೆಲುಗು ರಾಜ್ಯಗಳಲ್ಲಿ ಪ್ರವಾಹ ಭೀತಿ ಹುಟ್ಟಿಸಿದೆ. ಸಿನಿ ತಾರೆಯರು ಸಂತ್ರಸ್ತರಿಗೆ ಆಸರೆಯಾಗಲು ಮುಂದೆ ಬಂದಿದ್ದಾರೆ. ಅದರಲ್ಲಿ ನಟ ಜ್ಯೂನಿಯರ್ ಎನ್‌ಟಿಆರ್ ಬರೋಬ್ಬರಿ 1 ಕೋಟಿ ರೂ. ಪರಿಹಾರ ನಿಧಿಗೆ ಹಣ ಸಹಾಯ ಮಾಡಿದ್ದಾರೆ.
Cine World Sep 8, 2024, 6:48 PM IST
ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವಾಗ ರೈಲಿಗೆ ಸಿಲುಕುವುದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಘಟನೆ ಮಧುರಾನಗರದ ರೈಲ್ವೆ ಸೇತುವೆ ಮೇಲೆ ನಡೆದಿದ್ದು, ಭದ್ರತಾ ಸಿಬ್ಬಂದಿ ಸಿಎಂ ನಾಯ್ಡು ಅವರನ್ನು ಟ್ರ್ಯಾಕ್‌ನ ಬದಿಗೆ ಎಳೆದು ಕಿರಿದಾದ ಪಾದಚಾರಿ ಮಾರ್ಗಕ್ಕೆ ತಂದಿದ್ದಾರೆ.
India Sep 7, 2024, 9:33 AM IST
ಭೂಕುಸಿತ ಪ್ರವಾಹ ಮುಂತಾದ ಪ್ರಕೃತಿ ವಿಕೋಪಗಳು ಆಗದಂತೆ ಮುಂಜಾಗೃತೆ ವಹಿಸಬಹುದು. ಆದರೆ ಆಗದೆಯೇ ಇರುವಂತೆ ತಡೆಯುವುದು ಮಾನವನ ಕೈಯಲ್ಲಿ ಅಸಾಧ್ಯವಾದ ವಿಚಾರ. ಆದರೀಗ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಪ್ರವಾಹ ಭೂಕುಸಿತವನ್ನು ತಡೆಯಲು ವಿಫಲರಾಗಿದ್ದಾರೆ ಎಂದು 30 ಅಧಿಕಾರಿಗಳನ್ನು ಗಲ್ಲಿಗೇರಿಸಿದ್ದಾರೆ ಎಂದು ವರದಿ ಆಗಿದೆ.
International Sep 4, 2024, 2:42 PM IST
Andhra floods: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ವ್ಯಾಪಕ ಹಾನಿ ಮತ್ತು ಸಾವುನೋವುಗಳು ಸಂಭವಿಸಿವೆ. ಒಂದು ಹೃದಯ ವಿದ್ರಾವಕ ದೃಶ್ಯದಲ್ಲಿ, ನವಜಾತ ಶಿಶುವೊಂದನ್ನು ಪ್ಲಾಸ್ಟಿಕ್ ಕ್ರೇಟ್‌ನಲ್ಲಿ ಪ್ರವಾಹದ ನೀರಿನ ಮೂಲಕ ಸಾಗಿಸಲಾಗುತ್ತಿದೆ.
India Sep 4, 2024, 10:42 AM IST
ಆಂಧ್ರಪ್ರದೇಶದಲ್ಲಿ ಪ್ರಕಾಶಂ ಬ್ಯಾರೇಜ್‌ಗೆ ಮೂರು ದೋಣಿಗಳು ಡಿಕ್ಕಿ ಹೊಡೆದ ಪರಿಣಾಮ ಬ್ಯಾರೇಜ್‌ನ ಒಂದು ಗೇಟ್ ಹಾನಿಗೊಳಗಾಗಿದ್ದು, ಭಾರೀ ಪ್ರಮಾಣದ ನೀರು ಹೊರಬಿದ್ದಿದೆ. ಇದರಿಂದಾಗಿ ವಿಜಯವಾಡ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದೆ.
India Sep 4, 2024, 8:04 AM IST
NTR Jr donates ₹1 crore ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ 31 ಜನರು ಸಾವನ್ನಪ್ಪಿದ್ದಾರೆ ಮತ್ತು ವ್ಯಾಪಕ ಹಾನಿ ಸಂಭವಿಸಿದೆ. ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ ಮತ್ತು ಜೂನಿಯರ್ ಎನ್‌ಟಿಆರ್ ಪರಿಹಾರ ನಿಧಿಗೆ ₹1 ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
India Sep 3, 2024, 10:22 AM IST
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಕಳೆದ 3 ದಿನಗಳಿಂದ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ 31 ಮಂದಿ ಸಾವನ್ನಪ್ಪಿದ್ದಾರೆ.
India Sep 3, 2024, 10:04 AM IST
ಇಂಟರ್‌ಗವರ್ನ್‌ಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (IPCC), ಅಥವಾ NASA ದ ವರದಿಗಳನ್ನು ಗಣನೆಗೆ ತೆಗೆದುಕೊಂಡರೆ, ಮಂಗಳೂರು ಇರೋದು ಇನ್ನು 75 ವರ್ಷಗಳ ಕಾಲ ಮಾತ್ರ. 2100ರ ವೇಳೆಗೆ ಬಹುತೇಕ ಮಂಗಳೂರು ಹವಾಮಾನ ಬದಲಾವಣೆಯ ಕಾರಣದಿಂದಾಗಿ ಮುಳುಗಿ ಹೋಗಲಿದೆ ಎಂದಿದೆ.
Travel Sep 2, 2024, 6:02 PM IST
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
India Sep 2, 2024, 3:21 PM IST
ಭಾರಿ ಮಳೆಯಿಂದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ. ಅಪಾರ್ಟ್‌ಮೆಂಟ್ ಮೇಲೆ ಕುಳಿತು ಆಹಾರ ಆರ್ಡರ್ ಮಾಡಿದವರಿಗೆ ಡೆಲಿವರಿ ಬಾಯ್ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಪಾರ್ಸೆಲ್ ತಲುಪಿಸಿದ ಘಟನೆ ಸೆರೆಯಾಗಿದೆ. ಡೆಲಿವರಿ ಬಾಯ್ ಕರ್ತವ್ಯ, ಶ್ರಮ ಹಾಗೂ ಬದ್ಧತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ ಕಂಪನಿ ಡೆಲಿವರಿ ಬಾಯ್‌ಗೆ ಭರ್ಜರಿ ಗಿಫ್ಟ್ ಘೋಷಿಸಿದೆ.
India Sep 1, 2024, 5:10 PM IST
IPCC ವರದಿಯ ಪ್ರಕಾರ 2030ರ ವೇಳೆಗೆ ಹವಾಮಾನ ಬದಲಾವಣೆಯಿಂದಾಗಿ ವಿಶ್ವದ ಹಲವು ನಗರಗಳು ಮುಳುಗಡೆಯಾಗುವ ಅಪಾಯವಿದೆ. ಈ ಪಟ್ಟಿಯಲ್ಲಿ ಭಾರತದ ನಗರದ ಹೆಸರು ಸಹ ಇದೆ.
International Sep 1, 2024, 3:55 PM IST
ನೀರಿನಿಂದ ಮೇಲೆ ಬಂದು ಜನವಸತಿ ಪ್ರದೇಶಗಳಲ್ಲಿ ಅಡ್ಡಾಡುತ್ತಿದ್ದ ಮೊಸಳೆಯೊಂದನ್ನು ಜನ ಹಿಡಿದು ಜನ ಅದನ್ನು ಸ್ಕೂಟರ್‌ನಲ್ಲಿ ಮಲಗಿಸಿಕೊಂಡು ಸುರಕ್ಷಿತ ತಾಣದತ್ತ ಕರೆದುಕೊಂಡು ಹೋಗಿದ್ದಾರೆ. ಈ ಚಿಲ್ಲಿಂಗ್ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ್ತಿದೆ.
India Sep 1, 2024, 3:11 PM IST
ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕೇಂದ್ರ ರೈಲು ವಿಭಾಗ 20 ರೈಲು ಸೇವೆ ರದ್ದು ಮಾಡಿದೆ. ಇನ್ನು 30ಕ್ಕೂ ಹೆಚ್ಚು ರೈಲಿನ ಮಾರ್ಗ ಬದಲಾವಣೆ ಮಾಡಿದೆ.
India Sep 1, 2024, 3:01 PM IST
ಗುಜರಾತಿನಲ್ಲಿ ಬಿಟ್ಟೂಬಿಡದೇ ಸುರಿಯುತ್ತಿರೋ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ.. ಈಗಾಗಲೇ ಕನಿಷ್ಠ 36 ಜೀವಗಳನ್ನ ಈ ಪ್ರವಾಹ ಬಲಿ ಪಡೆದಿದೆ. ವಿಶ್ವಾಮಿತ್ರಿ ನದಿ ಹುಚ್ಚೆದು ಉಕ್ಕಿ ಹರಿದಿದ್ದು, ಅನೇಕರು ತಮ್ಮ ಆಶ್ರಯ ತಾಣಗಳನ್ನು ಕಳೆದುಕೊಂಡಿದ್ದಾರೆ.
India Sep 1, 2024, 11:58 AM IST
ಬಂಗಾಳ ಕೊಲ್ಲಿಯಲ್ಲಿ ವಾಯುಭಾರಕುಸಿತ ಆಗಿರುವ ಕಾರಣ ಆಂಧ್ರ ಪ್ರದೇಶದ ಹಲವು ಕಡೆಗಳಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಪ್ರಮಾಣ ದಲ್ಲಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿದೆ. ವಿಜಯವಾಡಸೇರಿ ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
India Sep 1, 2024, 10:38 AM IST