ಹಾಸಿಗೆಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳನ್ನೇ ಕಾಯಿಸಿದ ಆಸ್ಪತ್ರೆ

By Kannadaprabha News  |  First Published Jul 30, 2020, 7:47 AM IST

ಕೊರೋನಾ ಸೋಂಕಿತರಿಗೆ ಮೀಸಲಿಟ್ಟಿರುವ ಹಾಸಿಗೆಗಳ ಕುರಿತು ಪರಿಶೀಲನೆಗೆ ತೆರಳಿದ್ದಾಗ ಅರ್ಧ ತಾಸಿಗೂ ಹೆಚ್ಚು ಹೊತ್ತು ಕಾಯಿಸಿ ಸೂಕ್ತ ಮಾಹಿತಿ ನೀಡದೆ ನಿರ್ಲಕ್ಷ್ಯತನ ತೋರಿದ ಆರೋಪದ ಮೇರೆಗೆ ಮಾರತ್ತಹಳ್ಳಿ ಸಕ್ರ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸುವಂತೆ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ತಂಡ ಸೂಚಿಸಿದೆ.


ಬೆಂಗಳೂರು(ಜು.30): ಕೊರೋನಾ ಸೋಂಕಿತರಿಗೆ ಮೀಸಲಿಟ್ಟಿರುವ ಹಾಸಿಗೆಗಳ ಕುರಿತು ಪರಿಶೀಲನೆಗೆ ತೆರಳಿದ್ದಾಗ ಅರ್ಧ ತಾಸಿಗೂ ಹೆಚ್ಚು ಹೊತ್ತು ಕಾಯಿಸಿ ಸೂಕ್ತ ಮಾಹಿತಿ ನೀಡದೆ ನಿರ್ಲಕ್ಷ್ಯತನ ತೋರಿದ ಆರೋಪದ ಮೇರೆಗೆ ಮಾರತ್ತಹಳ್ಳಿ ಸಕ್ರ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸುವಂತೆ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ತಂಡ ಸೂಚಿಸಿದೆ.

ಸೋಂಕಿತರಿಗೆ ಹಾಸಿಗೆಗಳ ತಪಾಸಣೆ ಸಂಬಂಧ ಸಕ್ರ ಆಸ್ಪತ್ರೆಗೆ ಪರಿಶೀಲನೆಗೆ ಭೇಟಿ ನೀಡಲಾಗಿತ್ತು. ಆದರೆ ಮಾಹಿತಿ ನೀಡದ ಆಸ್ಪತ್ರೆ ವಿರುದ್ಧ ವಿಪತ್ತ ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ನೋಡಲ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಗ್ನಿಶಾಮಕ ದಳದ ಎಡಿಜಿಪಿ ಸುನೀಲ್‌ ಅಗರ್‌ವಾಲ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

Latest Videos

undefined

ಕೊರೋನಾ ಸೋಂಕಿತೆಯ ಅಂತ್ಯಕ್ರಿಯೆಯಲ್ಲಿ150 ಮಂದಿ ಭಾಗಿ..! ಕೊರೋನಾ ಆತಂಕ

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಸಂಬಂಧ ಐದು ಖಾಸಗಿ ಆಸ್ಪತ್ರೆಗಳು ಸರ್ಕಾರದ ಸೂಚನೆ ಪಾಲನೆ ಪರಿಶೀಲನೆಗೆ ಹಿರಿಯ ಐಎಎಸ್‌ ಅಧಿಕಾರಿ ಉಮಾ ಮಹೇಶ್ವರನ್‌ ಹಾಗೂ ಎಡಿಜಿಪಿ ಸುನೀಲ್‌ ಅರ್ಗವಾಲ್‌ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಈ ತಂಡವು ಸಕ್ರ, ಸರ್ಜಾಪುರ ರಸ್ತೆಯ ಕೊಲಂಬಿಯಾ ಏಷಿಯಾ, ವೈಟ್‌ ಫೀಲ್ಡ್‌ ಕೊಲಂಬಿಯಾ ಏಷಿಯಾ, ವೈದೇಹಿ ಹಾಗೂ ಮಾರತ್ತಹಳ್ಳಿ ಯಶೋಮತಿ ಆಸ್ಪತ್ರೆಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿತು. ಈ ವೇಳೆ ಸಕ್ರ ಆಸ್ಪತ್ರೆಯ ಆಡಳಿತ ಮಂಡಳಿ ಅಧಿಕಾರಿಗಳು ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳನ್ನು ಕಾಯಿಸಿದರು ಎಂದು ತಿಳಿದುಬಂದಿದೆ.

ಹೆಚ್ಚುವರಿ 5 ಲಕ್ಷ ವಾಪಸ್‌ಗೆ ಸೂಚನೆ

ಕೊರೋನಾ ಚಿಕಿತ್ಸೆ ಸಲುವಾಗಿ 14 ಸೋಂಕಿತರಿಂದ ಪಡೆದಿದ್ದ ಹೆಚ್ಚುವರಿಯಾಗಿ ಪಡೆದಿದ್ದ .5 ಲಕ್ಷ ಮರಳಿಸುವಂತೆ ಸರ್ಜಾಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಅಧಿಕಾರಿಗಳು ಸೂಚಿಸಿದ್ದಾರೆ. 14 ರೋಗಿಗಳ ಚಿಕಿತ್ಸಾ ವೆಚ್ಚವು .13 ಲಕ್ಷ ಆಗಿದೆ. ಆದರೆ ಆಸ್ಪತ್ರೆಯು .18 ಲಕ್ಷ ಪಡೆದಿದ್ದ ಸಂಗತಿ ಬಿಲ್‌ ಬುಕ್‌ಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿತು. ಹೆಚ್ಚುವರಿ ಹಣವನ್ನು ರೋಗಿಗಳಿಗೆ ಮರಳಿಸಲು ಆಸ್ಪತ್ರೆ ಒಪ್ಪಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.

ಹೋಂ ಐಸೋಲೇಶನ್‌ ಆರೈಕೆ ಪ್ಯಾಕೇಜ್‌ ಆರಂಭ..!

ಇನ್ನುಳಿದ ಮೂರು ಆಸ್ಪತ್ರೆಗಳಲ್ಲಿ ಸರ್ಕಾರದ ನಿಯಮ ಪಾಲನೆಯಾಗಿದೆ ಎಂಬುದು ಮನದಟ್ಟಾಗಿದೆ. ಸಕ್ರ ಆಸ್ಪತ್ರೆಯ ಬಿಲ್‌ಗಳ ಕುರಿತು ಒಂದೆರೆಡು ದಿನಗಳಲ್ಲಿ ಪರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.

ಆಸ್ಪತ್ರೆಗಳಲ್ಲಿ ಸಾಮಾನ್ಯ ಬೆಡ್‌ಗಳು ಸಾಕಷ್ಟುಖಾಲಿ ಇದ್ದರೆ, ಐಸಿಯು ಮತ್ತು ವೆಂಟಿಲೇಟರ್‌ಗಳು ರೋಗಿಗಳಿಂದ ಭರ್ತಿಯಾಗಿವೆ. ಬಾಕಿ ಉಳಿದಿರುವ ಹಾಸಿಗೆಗಳಿಗೆ ಆಕ್ಸಿಜನ್‌ ಸೌಲಭ್ಯ ಕಲ್ಪಿಸಿ ತುರ್ತು ಚಿಕಿತ್ಸೆಗೆ ಬಳಿಸಕೊಳ್ಳಬಹುದು ಎಂದು ಎಡಿಜಿಪಿ ಸುನೀಲ್‌ ಅರ್ಗವಾಲ್‌ ತಿಳಿಸಿದ್ದಾರೆ.

'ಕೊರೋನಾ ಸಂದರ್ಭದಲ್ಲೂ ಸಚಿವರು, ಶಾಸಕರು ಸಿಎಂ ಆಗಲು ಹವಣಿಸುತ್ತಿದ್ದಾರೆ'

ಕೊನೆಗೆ ಅನಗತ್ಯವಾದ ವಿವರ ನೀಡದೆ ಗೊಂದಲ ಸೃಷ್ಟಿಸುತ್ತಿದ್ದರು. ಇದರಿಂದ ನಾವು ಅಲ್ಲಿಂದ ಹೊರಟು ಬಂದೆವು. ಸರ್ಕಾರದ ಆದೇಶದ ಪಾಲಿಸದ ಹಾಗೂ ಪರಿಶೀಲನಾ ತಂಡಕ್ಕೆ ಸೂಕ್ತ ಮಾಹಿತಿಯನ್ನು ನೀಡದೆ ನಿರ್ಲಕ್ಷ್ಯತನ ತೋರಿದ ಆರೋಪದ ಮೇರೆಗೆ ಸಕ್ರ ಆಸ್ಪತ್ರೆ ಮೇಲೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳು ಹೇಳಿದ್ದಾರೆ.

click me!