ಹಾಳೆತಟ್ಟೆ ತಯಾರಿಕಾ ಘಟಕ ಸಿಬ್ಬಂದಿಗೆ ಸೋಂಕು: ಕಂಪನಿ ಸೀಲ್‌ಡೌನ್..!

By Kannadaprabha NewsFirst Published Jul 30, 2020, 7:20 AM IST
Highlights

ವಿಟ್ಲ ಸಮೀಪದ ಕೊಡಂಗಾಯಿ ಬಲಿಪಗುಳಿಯಲ್ಲಿರುವ ಹಾಳೆತಟ್ಟೆತಯಾರಿಕೆಯ ಕಂಪನಿಯ 9 ಮಂದಿ ನೌಕರರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಕಂಪನಿಯನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿದೆ.

ಬಂಟ್ವಾಳ(ಜು.30): ವಿಟ್ಲ ಸಮೀಪದ ಕೊಡಂಗಾಯಿ ಬಲಿಪಗುಳಿಯಲ್ಲಿರುವ ಹಾಳೆತಟ್ಟೆತಯಾರಿಕೆಯ ಕಂಪನಿಯ 9 ಮಂದಿ ನೌಕರರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಕಂಪನಿಯನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಹೊಂದಿರುವ ಈ ಹಾಳೆತಟ್ಟೆತಯಾರಿಕಾ ಕಂಪನಿಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಅನೇಕ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಸ್ಥಳೀಯರು ಕೂಡಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊರೋನಾ ಸೋಂಕಿತೆಯ ಅಂತ್ಯಕ್ರಿಯೆಯಲ್ಲಿ150 ಮಂದಿ ಭಾಗಿ..! ಕೊರೋನಾ ಆತಂಕ

ಸುಮಾರು 300ಕ್ಕೂ ಅಧಿಕ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಕೊರೋನಾ ಪಾಸಿಟಿವ್‌ ದೃಢಪಟ್ಟವರಲ್ಲಿ ಯಾವುದೇ ಕೊರೋನಾ ಲಕ್ಷಣಗಳು ಕಂಡು ಬಾರದ ಹಿನ್ನಲೆ ಅವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಲವರಿಗೆ 17 ದಿನಗಳ ಕಾಲ ಹೋಂಕ್ವಾರಂಟೈನ್‌ ಮಾಡಲಾಗಿದೆ.

ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಲೇ ಇದ್ದು, ಬುಧವಾರ 208 ಮಂದಿಗೆ ಪಾಸಿಟಿವ್‌ ದೃಢಪಟ್ಟಿದೆ. ಕೊರೋನಾ ಮರಣದಲ್ಲೂ ಜಿಲ್ಲೆ ದಾಪುಗಾಲು ಇಡುತ್ತಿದೆ. ಮತ್ತೆ 7 ಮಂದಿ ಸೋಂಕಿತರು ಸಾವಿಗೀಡಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 142ಕ್ಕೆ ಏರಿದೆ.

'ಇವತ್ತು ಖಾದರ್ ಕಾಲವಲ್ಲ': ಶಾಸಕರಿಗೆ ಸಚಿವ ಕೋಟ ಟಾಂಗ್..!

ಕೊರೋನಾ ಸೋಂಕಿನೊಂದಿಗೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಪಡುಬಿದ್ರಿಯ 52 ವರ್ಷದ ವ್ಯಕ್ತಿ, ಬಂಟ್ವಾಳದ 62 ವರ್ಷದ ವ್ಯಕ್ತಿ, ಮಂಗಳೂರಿನ 69 ವರ್ಷದ ವೃದ್ಧೆ ಹಾಗೂ 73 ವರ್ಷದ ವೃದ್ಧ, ಧಾರವಾಡದ 66 ವರ್ಷದ ವೃದ್ಧ, ಕಾರವಾರದ 66 ವರ್ಷದ ವೃದ್ಧ ಹಾಗೂ ಮಂಗಳೂರಿನ 39 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

click me!