Old Age Pension : ಪಿಂಚಣಿಗೆ ವೃದ್ಧರ ಪರದಾಟ : ಅಧಿಕಾರಿಗಳ ಅಸಡ್ಡೆ

By Kannadaprabha News  |  First Published Dec 18, 2021, 7:22 AM IST
  •  ಜಿಲ್ಲಾ ಕೇಂದ್ರದಲ್ಲೂ ಪಿಂಚಣಿಗೆ ವೃದ್ಧರ ಪರದಾಟ :  ಅಧಿಕಾರಿಗಳ ಅಸಡ್ಡೆ
  • ಆಧಾರ್‌ ಲಿಂಕ್‌ ಆಗದೇ ಪಿಂಚಣಿಗಾಗಿ ಪರದಾಟ

ವಿಶೇಷ ವರದಿ:ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ಡಿ.18): ಸರ್ಕಾರದ ವಿವಿಧ ಇಲಾಖೆಗಳಡಿ ಮಂಜೂರಾಗುವ ಸಾಲ ಸೌಲಭ್ಯಗಳು ನೇರ ನಗದು ಯೋಜನೆಯಡಿ (ಡಿಬಿಟಿ) ನೇರವಾಗಿ ಫಲಾನುಭವಿಗಳ ಖಾತೆಗೆ (ಡಿಬಿಟಿ) ಜಮೆ ಆಗುತ್ತದೆ. ಆದರೆ ಇಂದಿಗೂ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಬಹುತೇಕ ವೃದ್ದರು ತಿಂಗಳಾದರೆ ಸಾಕು ತಮ್ಮ ಪಿಂಚಣಿಗಾಗಿ (Pension) ಅಂಚೆ ಕಚೇರಿಗೆ ನಾಲ್ಕೈದು ಬಾರಿ ಸುತ್ತಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.  ಹೌದು, ಸರ್ಕಾರ 60 ತುಂಬಿದ ಹಿರಿಯ ನಾಗರಿಕರಿಗೆ (Old Age) ತಮ್ಮ ಜೀವನೋಪಾಯಕ್ಕಾಗಿ ಪಿಂಚಣಿ ಸೌಕರ್ಯ ಕಲ್ಪಿಸಿದ್ದರೂ ಅದು ಮನೆಗೆ ಬಾಗಿಲಿಗೆ ತಲುಪದೇ ಪ್ರತಿ ತಿಂಗಳು ಪಿಂಚಣಿಗಾಗಿ ಪೋಸ್ಟ್‌ ಮಾಸ್ಟರ್‌ಗಳ ಇರುವ ಅಂಚೆ ಕಚೇರಿಗೆ ಬಂದು ತಮ್ಮ ಪಿಂಚಣಿ ಪಡೆಯುವ ಪಡಿಪಾಟಲು ಹಿರಿಯ ನಾಗರಿಕರದಾಗಿದ್ದು ಈ ಬಗ್ಗೆ ಹೇಳೋವರು ಕೇಳುವವರು ಇಲ್ಲವಾಗಿದೆ.

Latest Videos

undefined

ಅಂಚೆ ಕಚೇರಿಗೆ ಅಲೆದಾಟ

ಜೀವನದ ಸಂಧ್ಯಾ ಕಾಲದಲ್ಲಿ ಮಕ್ಕಳು (Children), ಕುಟುಂಬಸ್ಥರ (Family)  ಆಸರೆ ಇಲ್ಲದೇ ಎಷ್ಟು ಹಿರಿಯ ನಾಗರಿಕರಿಗೆ (Old Age People) ಸರ್ಕಾರದ ಪಿಂಚಣಿ ಕೈ ಹಿಡಿದಿದ್ದರೂ ಅಂಚೆ ಕಚೇರಿ (Post Office) ಸಿಬ್ಬಂದಿ ತಮ್ಮ ಕಾಯಕ ನಿಷ್ಠೆ ಪ್ರದರ್ಶಿಸಿ ಅವರು ಇರುವಲ್ಲಿಗೆ ಹೋಗಿ ತಲುಪಿಸದ ಪರಿಣಾಮ ನಗರದ ಬಿಬಿ ರಸ್ತೆಯಲ್ಲಿರುವ (BB Road) ಪ್ರಧಾನ ಅಂಚೆ ಕಚೇರಿಗೆ ಹಿರಿಯ ನಾಗರಿಕರು ದಾಂಗುಡಿ ಇಡುತ್ತಿದ್ದಾರೆ. ಉಪ ಅಂಚೆ ಕಚೇರಿಗಳಲ್ಲಿ ಇದೇ ಪರಿಸ್ಥಿತಿ ಇದೆ. ಆದರೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ಶೇ.30 ಕ್ಕೂ ಹೆಚ್ಚು ಫಲಾನುಭವಿಗಳು ಇಂದಿಗೂ ಅಂಚೆ ಕಚೇರಿ ಬಳಿ ಬಂದು ಪ್ರತಿ ತಿಂಗಳು ಅಂಚೆ ಮಾಸ್ಟರ್‌ಗಳನ್ನು ಹುಡುಕಾಟ ನಡೆಸಿ ಪಿಂಚಣಿ ಪಡೆಯಬೇಕಿದ್ದು ಇದರಿಂದ ಸಾಕಷ್ಟು ಅವ್ಯವಸ್ಥೆ ಎದುರಿಸಬೇಕಿದೆ.

ಮೊದಲೇ ವಯಸ್ಸು ಆಗಿರುವ ಹಿರಿಯ ನಾಗರಿಕರು ಬೇರೊಬ್ಬರ ಸಹಾಯದಿಂದಲೇ ಅಂಚೆ ಕಚೇರಿಗೆ ಬರಬೇಕಿದೆ. ಅದರಲ್ಲೂ ಕೈ, ಕಾಲು ಊನಗೊಂಡವರು, ಅಶಕ್ತ ಹಿರಿಯ ನಾಗರಿಕರೇ ಜಾಸ್ತಿ ಇದ್ದಾರೆ. ಊರುಗೋಲು ಇಲ್ಲದೇ ಒಂದು ಹೆಜ್ಜೆ ಮುಂದಿಡಲು ಆಗಷ್ಟು ದೈಹಿಕವಾಗಿ ಬಳಲಿರುವ ಹಿರಿಯ ನಾಗರಿಕರು ಪ್ರತಿ ತಿಂಗಳು ಪಿಂಚಣಿಗಾಗಿ (Pension) ಇಂದಿಗೂ ಅಂಚೆ ಕಚೇರಿಗೆ ಸುತ್ತಾಡುವುದು ನೋಡುಗರ ಕರಳು ಹಿಂಡುವಂತಾಗಿದ್ದು ಸಂಬಂಧ ಪಟ್ಟ ಪಿಂಚಣಿ ಇಲಾಖೆ ಹಿರಿಯ ನಾಗರಿಕರ ಬ್ಯಾಂಕ್‌ ಖಾತೆ (Bank Account Details)  ವಿವರಗಳನ್ನು ಸಂಗ್ರಹಿಸಿ ಅವರ  ಖಾತೆಗೆ (Account) ನೇರವಾಗಿ ಜಮೆ ಮಾಡಿದರೆ ಅನುಕೂಲ ಎನ್ನುವ ಮಾತು ಫಲಾನು ಭವಿಗಳಿಂದ ಕೇಳಿ ಬಂತು.

ವೃದ್ಧರ ಪಿಂಚಣಿಗೂ ಬೀಳುತ್ತೇ ಕತ್ತರಿ

ಇನ್ನೂ ಸರ್ಕಾರ (Govt) ನೀಡುವ ಪಿಂಚಣಿ ಹಣಕ್ಕೂ ಕತ್ತರಿ ಬೀಳುತ್ತದೆಯೆಂಬ ಆರೋಪ ಪಿಂಚಣಿದಾರರಿಗೆ ಕೇಳಿ ಬರುತ್ತಿದೆ. ಕೆಲವರು ಬ್ಯಾಂಕ್‌ ಖಾತೆ ವಿವರ ಕೊಟ್ಟರೂ ನಮಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಿಲ್ಲ. ಅಂಚೆ ಕಚೇರಿ ಬಳಿ ಬಂದು ಪಡೆದುಕೊಳ್ಳಿ ಎನ್ನುತ್ತಾರೆ. ಸರ್ಕಾರ 1,000 ರು ಕೊಟ್ಟರೆ 100, 150 ರು, ಹಿಡಿದು ನಮಗೆ ಉಳಿದಿದ್ದು ಕೊಡುತ್ತಾರೆ. ಕೇಳಿದರೆ ನಮಗೆ ಅವಾಜ್‌ ಹಾಕುತ್ತಾರೆಂದು ಹಿರಿಯ ಪಿಂಚಣಿದಾರರು ತಮ್ಮ ಅಳಲು ತೋಡಿಕೊಂಡರು. ಅಲ್ಲದೇ ಪಿಂಚಣಿ ಸರಿಯಾಗಿ ಬರುವುದಿಲ್ಲ. ಅಂಚೆ ಕಚೇರಿಗೆ ಬಂದರೂ ಕೆಲವೊಮ್ಮೆ ಸಿಬ್ಬಂದಿ ಕೈಗೆ ಸಿಗಲ್ಲ. ಕೂರಲು ಆಸನ ವ್ಯವಸ್ಥೆ ಇಲ್ಲ ಎಂದು ಚಿಕ್ಕಬಳ್ಳಾಪುರದ ಕೆಳಗಿನ ತೋಟದ ಹಿರಿಯ ನಾಗರಿಕರೊಬ್ಬರು ಅಂಚೆ ಇಲಾಖೆ ಅಧಿಕಾರಿಗಳ, ಸಿಬ್ಬಂದಿ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.

click me!