ಬೆಂಗಳೂರಲ್ಲಿ 3.5 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ..!

By Kannadaprabha News  |  First Published Nov 11, 2020, 7:13 AM IST

ಮಂಗಳವಾರ 1176 ಹೊಸ ಕೇಸ್‌ ಪತ್ತೆ, 8 ಸಾವು|ಮಹದೇವಪುರ ವಲಯದಲ್ಲಿ ಎರಡು ಕಂಟೈನ್ಮೆಂಟ್‌ ಪ್ರದೇಶ| ಕೊರೋನಾಗೆ ಬಲಿಯಾದ ದೇಶದ ಐದು ಪ್ರಮುಖ ಮೆಟ್ರೋಪಾಲಿಟನ್‌ ನಗರಗಳ ಪೈಕಿ ಬೆಂಗಳೂರು ನಗರ ಮೂರನೇ ಸ್ಥಾನ| 


ಬೆಂಗಳೂರು(ನ.11):  ರಾಜಧಾನಿಯಲ್ಲಿ ಕೊರೋನಾ ಸೋಂಕು ಪ್ರಕರಣ ಇಳಿಮುಖವಾಗಿದ್ದು, ಮಂಗಳವಾರ 1,176 ಪ್ರಕರಣ ವರದಿಯಾಗಿವೆ. ಈ ಹೊಸ ಪ್ರಕರಣಗಳೊಂದಿಗೆ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 3,51,481ಕ್ಕೆ ಏರಿಕೆಯಾಗಿದೆ. ಇದೇ ವೇಳೆ 2,257 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 3,30,205ಕ್ಕೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಸಾವಿನ ಸಂಖ್ಯೆ 10ಕ್ಕಿಂತ ಕಡಿಮೆ ಇದ್ದು, ಮಂಗಳವಾರ ಎಂಟು ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 3,969ಕ್ಕೆ ತಲುಪಿದೆ.

ಸದ್ಯ 17,306 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 465 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚೇತರಿಕೆ ಪ್ರಮಾಣ ಶೇ.93.95:

Latest Videos

undefined

ನಗರದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ ಶೇ.93.95ರಷ್ಟಿದೆ. ಅಂದರೆ, ಹೊಸ ಸೋಂಕು ಪ್ರಕರಣದ ಪ್ರಮಾಣ ಶೇ.10.03 ಇದ್ದರೆ, ಸೋಂಕಿತರ ಚೇತರಿಕೆ ಪ್ರಮಾಣ ಶೇ.93.95ರಷ್ಟಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.4.92ರಷ್ಟಿದೆ. ಸೋಂಕಿತರ ಸಾವಿನ ಪ್ರಕರಣಗಳು ತಗ್ಗಿದ್ದು, ಶೇ.1.13ರಷ್ಟಿದೆ.

ಎಚ್ಚರ ತಪ್ಪಿದ್ರೆ ಅಪಾಯ ಫಿಕ್ಸ್‌: ಚಳಿಗಾಲದಲ್ಲಿ ಕೊರೋನಾ ಆಯಸ್ಸು ಹೆಚ್ಚು...!

ಕೇವಲ 2 ಕಂಟೈನ್ಮೆಂಟ್‌ ಪ್ರದೇಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರು ಹೆಚ್ಚಿರುವ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆಯೂ ಕಡಿಮೆಯಾಗಿದ್ದು, ಪ್ರಸ್ತುತ ಮಹದೇವಪುರ ವಲಯದಲ್ಲಿ ಎರಡು ಮಾತ್ರ ಕಂಟೈನ್ಮೆಂಟ್‌ ಪ್ರದೇಶಗಳಿವೆ. ಇನ್ನು ವಲಯವಾರು ಸೋಂಕಿತರ ಪ್ರಮಾಣ ನೋಡುವುದಾದರೆ, ಅತಿ ಹೆಚ್ಚು ಮಹದೇವಪುರ ವಲಯದಲ್ಲಿ ಶೇ.17ರಷ್ಟುಸೋಂಕಿತರು ಇದ್ದಾರೆ. ಅತಿ ಕಡಿಮೆ ದಾಸರಹಳ್ಳಿ ವಲಯದಲ್ಲಿ ಶೇ.4ರಷ್ಟುಸೋಂಕಿತರಿದ್ದಾರೆ.

ಸಾವು: ತೃತೀಯ ಸ್ಥಾನ

ಕೊರೋನಾಗೆ ಬಲಿಯಾದ ದೇಶದ ಐದು ಪ್ರಮುಖ ಮೆಟ್ರೋಪಾಲಿಟನ್‌ ನಗರಗಳ ಪೈಕಿ ಬೆಂಗಳೂರು ನಗರ ಮೂರನೇ ಸ್ಥಾನದಲ್ಲಿದೆ. ಮುಂಬೈನಲ್ಲಿ 10,445, ನವದೆಹಲಿಯಲ್ಲಿ 7,060, ಬೆಂಗಳೂರಲ್ಲಿ 3,970, ಚೆನ್ನೈನಲ್ಲಿ 3,723 ಹಾಗೂ ಕೋಲ್ಕತ್ತಾದಲ್ಲಿ 2,336 ಮಂದಿ ಸೋಂಕಿತರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
 

click me!