ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮುಖಂಡ

By Kannadaprabha News  |  First Published Nov 10, 2020, 3:58 PM IST

ಮುಖಂಡರೋರ್ವರು ಮಾಜಿ ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. 


ಬಾಗಲಕೋಟೆ (ನ.10):  ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ನಿರ್ದೇಶಕ ವಿಜಯಾನಂದ ಕಾಶಪ್ಪನವರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಲಕ ಅಧ್ಯಕ್ಷ ಸ್ಥಾನದ ಲಾಬಿ ನಡೆಸಿದ್ದು ಸೋಮವಾರ ಬಾದಾಮಿಯಲ್ಲಿ ಸಿದ್ದರಾಮಯ್ಯನವರ ಕಾಲು ಮುಗಿದು ಆಶೀರ್ವಾದ ಪಡೆದಿದ್ದಾರೆ.

ಸಾಮಾಜಿಕ ಅಂತರದ ಪಾಠ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ...!

Tap to resize

Latest Videos

ಸಿದ್ದರಾಮಯ್ಯನವರನ್ನು ಬೆಂಬಲಿಗರ ಜೊತೆ ಭೇಟಿ ಮಾಡಿ ಸನ್ಮಾನಿಸಿದ ಸಂದರ್ಭದಲ್ಲಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ, ಕಳೆದ ಬಾರಿ ನಾನು ಅಧ್ಯಕ್ಷನಾಗಬೇಕಿತ್ತು. ಆದರೆ ಆಗಲಿಲ್ಲ. ನೀವು ಕಳೆದ ಬಾರಿ ಮಾತುಕೊಟ್ಟಿದ್ದೀರಿ. ಈ ಬಾರಿ ಆ ಮಾತು ಈಡೇರಿಸಿ ಎಂದು ಕಾಶಪ್ಪನವರ ಬೆಂಬಲಿಗರು ಸಹ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದರು.

ಸಹಕಾರಿ ಸಂಘಗಳಲ್ಲಿ ನನ್ನದು ಏನು ಇಲ್ಲ. ಅದನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಕಾಶಪ್ಪನವರಿಗೆ ಹೇಳಿದರಲ್ಲದೆ ನಿನ್ನ ಜೊತೆ ಸದಾ ಇರುವೇ ಎಂಬ ಮಾತು ಸಹ ಹೇಳಿ ಸಮಾಧಾನಪಡಿಸಿದರು.

click me!