ಕಿ.ಮೀ ದೂರ ನಡೆದೇ ಸಾಗಿದ ನಿಖಿಲ್ : ಬಿರುಸುಗೊಂಡ ಚಟುವಟಿಕೆ

Published : Nov 11, 2020, 07:04 AM IST
ಕಿ.ಮೀ ದೂರ ನಡೆದೇ ಸಾಗಿದ ನಿಖಿಲ್ : ಬಿರುಸುಗೊಂಡ ಚಟುವಟಿಕೆ

ಸಾರಾಂಶ

ನಿಖಿಲ್ ಕುಮಾರಸ್ವಾಮಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ನಡೆದುಕೊಂಡೇ ಹೋಗಿದ್ದಾರೆ

ಕನಕಪುರ (ನ.11):  ತಾಲೂಕಿನ ಮರಳವಾಡಿ ಹೋಬಳಿಯ ವಿವಿಧ ಹಳ್ಳಿಗಳಿಗೆ ಜೆಡಿಎಸ್‌ ಯುವ ಘಟಕದ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ​ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರದ ಭರವಸೆ ನೀಡಿದರು.

ಶಿವನಹಳ್ಳಿದೊಡ್ಡಿ ಗ್ರಾಮದಲ್ಲಿ ಅರ್ಧಕ್ಕೆ ನಿಂತಿ​ರುವ ಸೇತುವೆ ಕಾಮ​ಗಾರಿ ವೀಕ್ಷಿಸಿದ ನಿಖಿಲ್‌ ಅವ​ರು, ಆದಷ್ಟುಬೇಗ ಸೇತುವೆ ನಿರ್ಮಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿ​ಕೊ​ಡು​ವು​ದಾಗಿ ತಿಳಿ​ಸಿ​ದರು.

 ಸೇತುವೆ ಬಳಿ ಭೇಟಿ ನೀಡಿದ ನಿಖಿಲ್ ಅವರನ್ನು ಗ್ರಾಮಸ್ಥರು ಗ್ರಾಮಕ್ಕೆ ಭೇಟಿ ನೀಡಬೇಕೆಂದು ಪಟ್ಟುಹಿಡಿದು ನಾವು ದಿನನಿತ್ಯ ಪಡುವ ಕಷ್ಟವನ್ನು ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.

ಜನರ ಮನವಿಗೆ ಸ್ಪಂದಿಸಿದ ನಿಖಿಲ್ ಹಳ್ಳವನ್ನು ದಾಟಿ ಸುಮಾರು 1 ಕಿ.ಮೀ. ನಡೆದುಕೊಂಡು ಹೋಗಿ ಗ್ರಾಮದ ಜನರ ಸಮಸ್ಯೆ ಆಲಿಸಿ ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

PREV
click me!

Recommended Stories

ಎಐ ಆಧಾರಿತ ಉದ್ಯೋಗ ಕೌಶಲ್ಯ: ಬೆಂಗಳೂರಿನಲ್ಲಿ 'ಪ್ರಾಜೆಕ್ಟ್ ಹೆಲಿಕ್ಸ್' ಅನಾವರಣಗೊಳಿಸಿದ ಕೋರ್ಸೆರಾ, ಐಐಎಂ-ಬಿ ಜೊತೆ ಒಪ್ಪಂದ
Belagavi: 20 ವರ್ಷದ ಯುವಕನ ಹೊಟ್ಟೆಯಲ್ಲಿದ್ದ ನೇಲ್ ಕಟರ್ ಹೊರಗೆ ತೆಗೆದ ವೈದ್ಯರು