* ಮಳೆಗಾಲ ಮುಗಿಯುವರೆಗೂ ಬಂದ್ ಮಾಡಿ
* ಅವೇಡಾ ಗ್ರಾಮ ಪಂಚಾಯಿತಿಯಿಂದ ಸೂಚನೆ
* ಹೋಂ ಸ್ಟೇ ಮತ್ತು ರಾಫ್ಟಿಂಗ್‌ಗೆ ಹೆಸರುವಾಸಿಯಾದ ಜೋಯಿಡಾ ತಾಲೂಕು
ಜೋಯಿಡಾ(ಜೂ.24): ತಾಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ರಾಫ್ಟಿಂಗ್ ನಿಲ್ಲಿಸುವಂತೆ ಅವೇಡಾ ಗ್ರಾಮ ಪಂಚಾಯಿತಿ ಮಾಲೀಕರಿಗೆ ನೋಟಿಸ್ ನೀಡಿದ್ದರಿಂದ ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜೋಯಿಡಾ ತಾಲೂಕು , ಹೋಂ ಸ್ಟೇ ಮತ್ತು ರಾಫ್ಟಿಂಗ್‌ಗೆ ಹೆಸರುವಾಸಿಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಇಲ್ಲಿನ ಅವೇಡಾ ಗ್ರಾಪಂ ಅಧಿಕಾರಿಗಳು ರಾಫ್ಟಿಂಗ್ ನಡೆಸಬಾರದು ಎಂದು ರಾಫ್ಟಿಂಗ್ ಮಾಲೀಕರಿಗೆ ನೋಟಿಸ್ ನೀಡಿದ್ದು ಇದರಿಂದಾಗಿ ಇಲ್ಲಿನ ಪ್ರವಾಸೋದ್ಯಮ ಕುಂಠಿತವಾಗುವ ಸಾಧ್ಯತೆ ಇದೆ.
undefined
ಕೊರೋನಾ ಹಿನ್ನೆಲೆಯಲ್ಲಿ ಜೂ. 20ರಿಂದ ಜುಲೈ 7ರ ವರೆಗೆ ಗಣೇಶಗುಡಿಯಲ್ಲಿ ಕೋವಿಡ್ ನಿಯಮ ಪಾಲಿಸಬೇಕು ಮತ್ತು ಮಳೆಗಾಲ ಮುಗಿಯವ ತನಕ ರಾಫ್ಟಿಂಗ್ ನಡೆಸಬಾರದು ಎಂಬ ನೋಟಿಸ್ ನೀಡಲಾಗಿದೆ. ಕೋವಿಡ್ ನಿಯಮದಂತೆ ಕೆಲ ದಿನಗಳ ತನಕ ರಾಫ್ಟಿಂಗ್ ಬಂದ ಮಾಡಬಹುದು. ಆದರೆ ಮುಗಿಯುವ ವರೆಗೂ ರಾಫ್ಟಿಂಗ್ ಬಂದ ಮಾಡಬೇಕು ಎನ್ನುವುದು ಯಾವ ನ್ಯಾಯ? ಇಲ್ಲಿನ 600ಕ್ಕೂ ಹೆಚ್ಚಿನ ಕೆಲಸಗಾರರು ಮಳೆಗಾಲ ಮುಗಿಯುವ ತನಕ ಏನು ಮಾಡಬೇಕು ಎಂಬುದು ಇಲ್ಲಿನ ರಾಫ್ಟಿಂಗ್ ಮಾಲೀಕರ ಪ್ರಶ್ನೆಯಾಗಿದೆ.
ಕಾರವಾರ: ಆರು ತಿಂಗಳಿಂದ 15 ಸಿಬ್ಬಂದಿಗಿಲ್ಲ ವೇತನ..!
ಜೋಯಿಡಾ ಹಿಂದುಳಿದ ತಾಲೂಕಾಗಿದ್ದು ಇಲ್ಲಿನ ಯುವಕರು ಕೆಲಸ ಸಿಗದೇ ಗೋವಾಕ್ಕೆ ಕೆಲಸ ಅರಸಿ ಹೋಗುತ್ತಾರೆ. ಇಲ್ಲಿರುವ ಹೋಂ ಸ್ಟೇ, ರೆಸಾರ್ಟ್, ರಾಫ್ಟಿಂಗ್‌ಗಳಿಂದ ತಾಲೂಕಿನ ಯುವಕರಿಗೆ ಕೆಲಸ ಸಿಗುತ್ತಿದೆ. ರಾಫ್ಟಿಂಗ್ ಮಳೆಗಾಲದಲ್ಲಿ ಸಂಪೂರ್ಣ ಬಂದ ಮಾಡುವುದರಿಂದ ನೂರಾರು ಯುವಕರು ನಿರುದ್ಯೋಗಿಗಳಾಗುವ ಸಾಧ್ಯತೆ ಇದೆ.
ಕೆಲ ಮಾಲೀಕರು ನೋಟಿಸ್ ನೀಡಿದ ನಂತರವೂ ರಾಫ್ಟಿಂಗ್ ನಡೆಸುವುದು ಕಂಡು ಬಂದಿದ್ದು, ಇದರಿಂದಾಗಿ ಕೆಲ ರಾಫ್ಟಿಂಗ್ ಮಾಲೀಕರಿಗೆ ಮಾತ್ರ ನಿರ್ಬಂಧ ಹೆರಿದಂತೆ ಆಗಿದೆ. ಅನುಮತಿ ಎಲ್ಲರಿಗೂ ಒಂದೇ ರೀತಿಯಾಗಿರಲಿ ಎಂಬುದು ಇಲ್ಲಿನ ಜನರ ಮಾತಾಗಿದೆ. ಈ ಬಗ್ಗೆ ತಾಲೂಕಿನ ಅಧಿಕಾರಿಗಳು ಮತ್ತು ಅವೇಡಾ ಗ್ರಾಪಂ ಅಧಿಕಾರಿಗಳು ಈ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಮಾಲೀಕರು ಒತ್ತಾಯಿಸಿದ್ದಾರೆ.