'ಕೊರೋನಾ 3ನೇ ಅಲೆ ಎದುರಿಸಲು ಬಿಜೆಪಿ ಸನ್ನದ್ಧ'

By Kannadaprabha NewsFirst Published Jun 24, 2021, 10:04 AM IST
Highlights

* ಉತ್ತರ ಕನ್ನಡ ಜಿಲ್ಲೆಯ 1432 ಬೂತ್‌ಗಳ 2800 ಕಾರ್ಯಕರ್ತರಿಗೆ ತರಬೇತಿ 
* ಕೊರೋನಾ 2ನೇ ಅಲೆಯಲ್ಲಿ ಜಿಲ್ಲೆಯಾದ್ಯಂತ ಶ್ರಮವಹಿಸಿ ಕೆಲಸ ಮಾಡಿದ ಬಿಜೆಪಿ ಕಾರ್ಯಕರ್ತರು
* ಕೊರೋನಾದಿಂದ ಮೃತಪಟ್ಟ 52 ಜನರ ಅಂತ್ಯಸಂಸ್ಕಾರ 
 

ಶಿರಸಿ(ಜೂ.24): ಕೊರೋನಾ 3ನೇ ಅಲೆ ಎದುರಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧರಾಗಿದ್ದು ‘ಮೇರಾ ಬೂತ್‌ ಕೊರೋನ ಮುಕ್ತ ಬೂತ್‌’ ಮಾಡಲು ವ್ಯಾಕ್ಸಿನೇಷನ್‌ ಡ್ರೈವ್‌ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಕ್ಸಿನೇಷನ್‌ ಡ್ರೈವ್‌ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ 1432 ಬೂತ್‌ಗಳ 2800 ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದೇವೆ. ವೈದ್ಯರ ಮೇಲೆ ಒತ್ತಡ ಕಡಿಮೆ ಮಾಡಲು ಬಿಪಿ, ಶುಗರ್‌, ವ್ಯಾಕ್ಸಿನೇಷನ್‌, ಥರ್ಮಾಮೀಟರ್‌ನಿಂದ ಟೆಂಪರೇಚರ್‌ ನೋಡುವ ತರಬೇತಿ ನೀಡಿ ಸಜ್ಜುಗೊಳಿಸಲಾಗುವುದು. ಈಗಾಗಲೇ ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು ದೇಶದಲ್ಲಿ ಒಂದು ಲಕ್ಷ ಕಾರ್ಯಕರ್ತರನ್ನು ಗುರುತಿಸಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಜು. 10 ಹಾಗೂ ಜು. 26ರಂದು ಕ್ರಮವಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಕಾರ್ಯಕಾರಣಿ ಸಭೆ ವರ್ಚುವಲ್‌ ಮಾಧ್ಯಮದ ಮೂಲಕ ನಡೆಯಲಿದೆ. ರಾಜ್ಯ ಹಾಗೂ ಜಿಲ್ಲಾ ಮುಖಂಡರು ನೀಡುವ ಸಲಹೆ- ಸೂಚನೆಗಳನ್ನು ಕಾರ್ಯಕ್ರಮದ ರೂಪದಲ್ಲಿ ಮಂಡಲ ಮಟ್ಟದ ಕಾರ್ಯಕಾರಣಿ ಸದಸ್ಯರು ಸಾಮಾಜಿಕ ಅಂತರದ ನಡುವೆ ಮಾಡಲಿದ್ದಾರೆ ಎಂದರು.

ಗಂಜಿ ಆಸೆಗೆ ಹೇಳಿಕೆ ಕೊಡೋರನ್ನು ಬಂಧಿಸಿ : ನಟ ಚೇತನ್ ವಿರುದ್ಧ ಸಚಿವ ಹೆಬ್ಬಾರ್ ಕಿಡಿ

ಕೊರೋನಾ 2ನೇ ಅಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲೆಯಾದ್ಯಂತ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಡು ಬಡವರಿಗೆ 12,723 ಆಹಾರ ಕಿಟ್‌, 10,670 ಜನರಿಗೆ ರೇಶನ್‌ ಕಿಟ್‌, 36180 ಮೆಡಿಸಿನ್‌ ಕಿಟ್‌ ಹಾಗೂ 36,800 ಬಡವರಿಗೆ ಸ್ಯಾನಿಟೈಸರ್‌ ಮತ್ತು ಮಾಸ್ಕ್‌ ವಿತರಿಸಲಾಗಿದೆ. 

ಕೊರೋನಾದಿಂದ ಮೃತಪಟ್ಟ 52 ಜನರ ಅಂತ್ಯಸಂಸ್ಕಾರ ಮಾಡಿದ್ದು ಬ್ಲಡ್‌ ಕ್ಯಾಂಪ್‌ ಮಾಡಿ 480 ಯುನಿಟ್‌ ರಕ್ತ ಸಂಗ್ರಹಿಸಿ ನೀಡಿದ್ದಾರೆ. ಈ ಎಲ್ಲ ಜನೋಪಯೋಗಿ ಕಾರ್ಯಕ್ರಮಗಳಲ್ಲಿ 3000ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಶ್ಯಾಮಪ್ರಸಾದ ಮುಖರ್ಜಿ ಅವರು ಪುಣ್ಯಸ್ಮರಣೆ ಅಂಗವಾಗಿ ಬುಧವಾರದಿಂದ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ 14 ದಿನಗಳ ಕಾಲ ಪ್ರತಿ ದಿನ 14 ಗಿಡ ನೆಡಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಶಾಂತರಾಮ ಸಿದ್ದಿ, ಸದಾನಂದ ಭಟ್‌, ಚಂದ್ರು ಎಸಳೆ, ಗೋವಿಂದ ನಾಯ್ಕ, ನಾಗರಾಜ ನಾಯ್ಕ, ಮಹಾಂತೇಶ ಹಾದಿಮನೆ, ಡೊನಿ ಡಿಸೋಜ್‌ ಉಪಸ್ಥಿತರಿದ್ದರು.
 

click me!