ಸಂಚಾರ ನಿಯಮ ಉಲ್ಲಂಘಿಸಿದರ ಮನೆ ಬಾಗಿಲಿಗೆ ಬರುತ್ತೆ ನೋಟಿಸ್‌..!

By Kannadaprabha NewsFirst Published Jun 15, 2022, 3:55 AM IST
Highlights

*  ನಿಯಮ ಉಲ್ಲಂಘನೆಯ ದಾಖಲೆ ಸಮೇತ ನೋಟಿಸ್‌ ಮನೆ ಬಾಗಿಲಿಗೆ ಬರುತ್ತದೆ
*  ಆ್ಯಪ್‌ ಅಳವಡಿಸಿಕೊಂಡ ಜಿಲ್ಲಾ ಪೊಲೀಸ್‌ ಇಲಾಖೆ 
*  ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರನ್ನು ಹಿಡಿದು ನಿಲ್ಲಿಸಿ ಪ್ರಶ್ನೆ ಮಾಡುವುದಿಲ್ಲ

ಕೊಪ್ಪಳ(ಜೂ.15):  ಕೊಪ್ಪಳ- ಗಂಗಾವತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ಮಾಲೀಕರ ಮನೆಗೆ ಬಾಗಿಲಿಗೆ ನೋಟಿಸ್‌ ಬರುತ್ತದೆ. ಅಲ್ಲದೇ, ಕೋರ್ಟ್‌ಗೆ ಹೋಗಿ ದಂಡ ಕಟ್ಟಬೇಕಾಗುತ್ತದೆ. ಹಾಗಂತ ಸಂಚಾರ ನಿಯಮ ಉಲ್ಲಂಘನೆ ಮಾಡಿದವನ್ನು ಹಿಡಿದು ನಿಲ್ಲಿಸಿ, ನಿಮ್ಮ ಕೈಗೆ ನೋಟಿಸ್‌ ಕೊಡುವುದಿಲ್ಲ. ನಿಯಮ ಉಲ್ಲಂಘನೆಯ ದಾಖಲೆ ಸಮೇತ ನೋಟಿಸ್‌ ಮನೆ ಬಾಗಿಲಿಗೆ ಬರುತ್ತದೆ.

ಇಂಥದ್ದೊಂದು ಆ್ಯಪ್‌ಅನ್ನು ಜಿಲ್ಲಾ ಪೊಲೀಸ್‌ ಇಲಾಖೆ ಅಳವಡಿಸಿಕೊಂಡಿದೆ. ಹೀಗಾಗಿ ನೀವು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದನ್ನು ಪೊಲೀಸರು ಕೇಳಿಯೇ ಇಲ್ಲ ಎಂದು ಮುಂದೆ ಸಾಗಬಹುದು. ಆದರೆ, ಅದಾದ ಮೇಲೆ ನಿಮ್ಮ ಮನೆ ಬಾಗಿಲಿಗೆ ನೋಟಿಸ್‌ ಬರುತ್ತದೆ. ಆಗ ನಿಯಮ ಉಲ್ಲಂಘಿಸಿದ್ದು ನಿಮಗೆ ಗೊತ್ತಾಗುತ್ತದೆ.

Latest Videos

ಅಂಜನಾದ್ರಿ ಸುತ್ತಮುತ್ತ ಹೋಂ ಸ್ಟೇಗಿಲ್ಲ ಅನುಮತಿ: ಆನಂದ ಸಿಂಗ್‌

ಏನಿದು ಆ್ಯಪ್‌?:

ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರನ್ನು ಹಿಡಿದು ನಿಲ್ಲಿಸಿ ಪ್ರಶ್ನೆ ಮಾಡುವುದಿಲ್ಲ. ಆದರೆ, ತಮ್ಮ ಮೊಬೈಲ್‌ನಲ್ಲಿ ಅಳವಡಿಸಲಾಗಿರುವ ಆ್ಯಪ್‌ನಲ್ಲಿ ಫೋಟೊ ತೆಗೆಯುತ್ತಾರೆ. ನೀವು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕುರಿತು ಅದರಲ್ಲಿ ಒಂದೆರಡು ಲೈನ್‌ ಬರೆದು ಅಪ್‌ಲೋಡ್‌ ಮಾಡುತ್ತಾರೆ. ಆಗ ಪೊಲೀಸರು ನಿಮ್ಮನ್ನು ಮಾತನಾಡಿಸಿಯೂ ಇರುವುದಿಲ್ಲ. ನಿಮ್ಮನ್ನು ಯಾಕೆ ಎಂದು ಪ್ರಶ್ನೆಯೂ ಮಾಡಿರುವುದಿಲ್ಲ. ಆದರೆ, ನೋಟಿಸ್‌ ಕಳುಹಿಸುವ ವೇಳೆ ನೀವು ಎಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಿ? ರಾಂಗ್‌ ಡ್ರೈವ್‌ ಮಾಡಿದ್ದಿರಿ? ಎನ್ನುವ ಫೋಟೊ ಸಮೇತ ದಾಖಲೆಯೊಂದಿಗೆ ನೋಟಿಸ್‌ ಕಳುಹಿಸಲಾಗುತ್ತದೆ.

ಸದ್ಯಕ್ಕೆ ಹೆಲ್ಮೆಟ್‌ ಹಾಕದಿರುವವರ ಮೇಲೆ ಕೇಸ್‌ ಹಾಕಿ ನೋಟಿಸ್‌ ಕಳುಹಿಸುವ ಕುರಿತ ಆ್ಯಪ್‌ನಲ್ಲಿ ಅಳವಡಿಸಿಲ್ಲ. ಆದರೆ, ಉಳಿದಂತೆ ಸಿಗ್ನಲ್‌ ಜಂಪ್‌ ಮಾಡುವುದು, ರೆಡ್‌ ಲೈಟ್‌ ಬಂದ ಮೇಲೆಯೂ ವೇಗವಾಗಿ ಚಲಿಸುವುದು. ರಾಂಗ್‌ ರೂಟ್‌ನಲ್ಲಿ ಸಂಚಾರ ಮಾಡುವುದು ಸೇರಿದಂತೆ ನಾನಾ ರೀತಿಯಲ್ಲಿ ಮಾಡುವ ತಪ್ಪುಗಳ ಕುರಿತು ಪೊಲೀಸರು ಫೋಟೊ ತೆಗೆದು, ನಿಮಗೆ ನೋಟಿಸ್‌ ಕಳಿಸುತ್ತಾರೆ. ನೀವು ಪೊಲೀಸ್‌ ಠಾಣೆಯಲ್ಲಿ ಇಲ್ಲವೇ ಕೋರ್ಚ್‌ನಲ್ಲಿ ದಂಡ ತೆರಬೇಕು.
ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಹೊಸ ಆ್ಯಪ್‌ ಅಳವಡಿಸಲಾಗಿದೆ. ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಫೋಟೊ ತೆಗೆದು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ನಂತರ ತನ್ನಿಂದ ತಾನೆ ನೋಟಿಸ್‌ ಜಾರಿಯಾಗುತ್ತದೆ ಅಂತ ಕೊಪ್ಪಳ ಎಸ್ಪಿ ಅರುಣಾಂಗ್ಷು ತಿಳಿಸಿದ್ದಾರೆ. 
 

click me!