'ಅಳುವಂತಹದ್ದು ಏನೂ ಆಗಿಲ್ಲ' ಎಚ್‌ಡಿಕೆಗೆ ಚಲುವರಾಯಸ್ವಾಮಿ ಟಾಂಗ್

By Divya Perla  |  First Published Nov 29, 2019, 11:57 AM IST

ಅಳುವಂತಹದ್ದು ಏನೂ ಆಗಿಲ್ಲ. ಇದು ಜನರ ಭಾವನೆಯನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಕುಮಾರಸ್ವಾಮಿ ಕಣ್ಣೀರನ್ನು ವ್ಯಂಗ್ಯ ಮಾಡಿದ್ದಾರೆ.


ಮಂಡ್ಯ(ನ.29): ಒಂದು ಸಲ ಸೋತ ಮಗನ ಸಲುವಾಗಿ ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಅವರ ತಂದೆ ತುಮಕೂರಿನಲ್ಲಿ ಸೋತರು. ಈ ಕಾರಣಕ್ಕಾಗಿ ಅಲ್ಲಿಗೆ ಹೋಗಿ ಕಣ್ಣೀರು ಹಾಕಿದ್ದರೆ ಸಿಂಪಥಿ ಸಿಗುತ್ತಿತ್ತು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಗುರುವಾರ ಕುಮಾರಸ್ವಾಮಿ ಕಣ್ಣೀರನ್ನು ಕುರಿತು ವ್ಯಾಖ್ಯಾನ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ತಮ್ಮ ಕಣ್ಣೀರಿಗೆ ಮಹತ್ವ ಸಿಗಲ್ಲ ಅನ್ನೋದು ಈಗ ಅವರಿಗೆ ಅರ್ಥವಾಗಿದೆ. ಯಾವಾಗಲಾದರೂ ಒಮ್ಮೆ ಕಣ್ಣೀರು ಹಾಕಿದರೆ ಪರವಾಗಿಲ್ಲ. ಆದರೆ ಅವರು ಪ್ರತಿ ಚುನಾವಣೆ ಸಮಯದಲ್ಲಿ ಕಣ್ಣೀರು ಹಾಕೋದು ಸಾಮಾನ್ಯವಾಗಿದೆ. ಅದು ಭಾವನಾತ್ಮಕವಾಗಿಯಂತೂ ಅಲ್ಲ. ಏಕೆಂದರೆ ಅಳುವಂತಹದ್ದು ಏನೂ ಆಗಿಲ್ಲ. ಇದು ಜನರ ಭಾವನೆಯನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅನ್ನಿಸುತ್ತದೆ ಎಂದಿದ್ದಾರೆ.

Latest Videos

undefined

ಕಾಮಾಟಿಪುರ ಹೇಳಿಕೆ: ಡಿಸಿ ತಮ್ಮಣ್ಣ ವಿರುದ್ಧ ಮುಂಬೈ ಸೇರಿ ಸ್ಥಳೀಯ ಮತದಾರರ ಆಕ್ರೋಶ

ಕಣ್ಣೀರು ಹಾಕೋದು, ನಾಟಕ ಮಾಡೋದು, ಎಲ್ಲವನ್ನೂ ನೋಡಿ ನೋಡಿ ಸಾಕಾಗಿದೆ. ಅವರ ತಂದೆ ಸೋತಿದ್ದಕ್ಕೆ ತುಮಕೂರಿಗೆ ಹೋಗಿ ಕಣ್ಣೀರು ಹಾಕಿದ್ರೆ ಪರವಾಗಿಲ್ಲ. ಆದರೆ ಒಮ್ಮೆ ಸೋತಿರುವ ಮಗನಿಗಾಗಿ ಕಣ್ಣೀರು ಹಾಕಿದ್ದಕ್ಕೆ ಏನು ಅರ್ಥ? ನಮಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಮತ ಕೊಡಿ ಅಂತಾರೆ. ಅಳಿವು ಉಳಿವಿನ ಬಗ್ಗೆ ಮಾತನಾಡೋಕೆ ಇದೇನು ಸಾರ್ವತ್ರಿಕ ಚುನಾವಣೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಬಿಎಸ್‌ವೈ ಅಧಿಕಾರ ರೋಗದಿಂದ ಚುನಾವಣೆ ಬಂದಿದೆ: ಎಚ್‌ಡಿಕೆ

ಅವರು ಅಧಿಕಾರ ಕಳೆದುಕೊಳ್ಳಲು ಅವರೇ ಕಾರಣ. ಜಿಲ್ಲೆಯ ಜನರು ಅವರಿಗೆ ಅಧಿಕಾರ ನೀಡಿದರೂ ಅದನ್ನು ಉಳಿಸಿಕೊಳ್ಳಲಿಲ್ಲ. ಪೂರ್ತಿ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದರು. ಮಾಡಲಿಲ್ಲ. ಮಂಡ್ಯ ಷುಗರ್‌ ಕಾರ್ಖಾನೆ ನಿಲ್ಲಲು ಅವರೇ ಕಾರಣ. ವೈಯಕ್ತಿಕ ಅಥವಾ ರಾಜಕೀಯವಾಗಲಿ ಕುಮಾರಸ್ವಾಮಿ ಮೇಲೆ ದ್ವೇಷ ಇಲ್ಲ. ಅವರು ನನ್ನನ್ನು ಸ್ನೇಹಿತ ಅಂತ ಒಪ್ಪಿಕೊಂಡರೆ ಖುಷಿಯೇ ಎಂದು ಹೇಳಿದ್ದಾರೆ.

'ಸರ್ಕಾರದ ಮನೆ ತೆಗೆಯದ್ದಕ್ಕೆ ರೂಂ ಮಾಡಿದ್ದೆ, ನಿಮ್ಮ ಥರ ರಾಸಲೀಲೆಗಲ್ಲ'..!

ಕುಮಾರಸ್ವಾಮಿಯವರೇ ಸಾಧ್ಯವಾದರೆ ನಮ್ಮ ಪಕ್ಷಕ್ಕೆ ಸಹಾಯ ಮಾಡಲಿ. ಕೆ.ಆರ್‌.ಪೇಟೆ ಪೇಟೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆದು ಕಾಂಗ್ರೆಸ್‌ಗೆ ಸಹಾಯ ಮಾಡಿದರೆ ತಪ್ಪೇನು? ಎಂದು ಪ್ರಶ್ನೆ ಮಾಡಿದ್ದಾರೆ.

click me!