ಟ್ರ್ಯಾಕ್ಟರ್ ಓಡಿಸಿ ಪ್ರಚಾರ ಮಾಡಿದ ಬಿಜೆಪಿ ಬಂಡಾಯ ಅಭ್ಯರ್ಥಿ

Published : Nov 29, 2019, 11:39 AM IST
ಟ್ರ್ಯಾಕ್ಟರ್ ಓಡಿಸಿ  ಪ್ರಚಾರ ಮಾಡಿದ ಬಿಜೆಪಿ ಬಂಡಾಯ ಅಭ್ಯರ್ಥಿ

ಸಾರಾಂಶ

ವಿನೂತನವಾಗಿ ಪ್ರಚಾರ ಮಾಡಿದ ವಿಜಯನಗರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್| ಕವಿರಾಜ್ ಅರಸ್ ಕ್ಷೇತ್ರದ ಬುಕ್ಕಸಾಗರ ಗ್ರಾಮದಲ್ಲಿ ಟ್ರ್ಯಾಕ್ಟರ್ ಓಡಿಸಿ  ಪ್ರಚಾರ ಮಾಡಿದ್ದಾರೆ| ಟ್ರ್ಯಾಕ್ಟರ್ ‌ಗುರುತು ಇರುವ ಕಾರಣ ಟ್ರ್ಯಾಕ್ಟರ್ ಓಡಿಸಿ‌ ಮತಯಾಚನೆ  ಮಾಡುತ್ತಿದ್ದಾರೆ| ನಾಮಪತ್ರ ‌ವೇಳೆ 108 ಲೀಟರ್ ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದ ಕವಿರಾಜ್|

ಬಳ್ಳಾರಿ[ನ.29]: ಜಿಲ್ಲೆಯ ವಿಜಯನಗರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಅವರು ವಿನೂತನವಾಗಿ ಪ್ರಚಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕವಿರಾಜ್ ಅರಸ್ ಅವರು ಕ್ಷೇತ್ರದ ಬುಕ್ಕಸಾಗರ ಗ್ರಾಮದಲ್ಲಿ ಟ್ರ್ಯಾಕ್ಟರ್ ಓಡಿಸಿ  ಪ್ರಚಾರ ಮಾಡಿದ್ದಾರೆ. ಟ್ರ್ಯಾಕ್ಟರ್ ‌ಗುರುತು ಇರುವ ಕಾರಣ ಟ್ರ್ಯಾಕ್ಟರ್ ಓಡಿಸಿ‌ ಮತಯಾಚನೆ  ಮಾಡುತ್ತಿದ್ದಾರೆ. 

ನಾಮಪತ್ರ ಸಲ್ಲಿಕೆಯಾದ ದಿನದಿಂದಲೂ ಕವಿರಾಜ್ ಅರಸ್ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ನಾಮಪತ್ರ ‌ಸಲ್ಲಿಸುವ ವೇಳೆ 108 ಲೀಟರ್ ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದ ಕವಿರಾಜ್ ಅವರು ಇಂದು ಟ್ರ್ಯಾಕ್ಟರ್ ಚಲಾಯಿಸಿ ಮತದಾರರ ಗಮನ ಸೆಳೆದಿದ್ದಾರೆ.

ಪ್ರಚಾರದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕವಿರಾಜ್ ಅರಸ್  ಆನಂದ್ ಸಿಂಗ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಆನಂದ್ ಸಿಂಗ್ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ.ಕಬ್ವಿಣದ ಉಂಗುರ ಮಾಡಿಸಿ ಅದಕ್ಕೆ ಬಂಗಾರದ ಲೇಪನ ಮಾಡಿ ಜನರಿಗೆ ಹಂಚುತ್ತಿದ್ದಾರೆ. ಜನರಿಗೆ ಸತ್ಯ ಗೊತ್ತಾರೆ ಧರ್ಮದೇಟು ಕೊಡ್ತಾರೆ ಎಂದು ಹೇಳಿದ್ದಾರೆ. ಸಿಎಂ ಯಡಿಯೂರಪ್ಪ  ಸಮಾವೇಶಕ್ಕೆ ಹಣಕೊಟ್ಟು ‌ಜನರನ್ನು ಕರೆತಂದ್ರು, ಆನಂದ್ ಸಿಂಗ್ ಐಎಸ್ ಆರ್ ಶುಗರ್ ಫ್ಯಾಕ್ಟರಿ ಮುಚ್ಚಿಸಿದ್ದಾರೆ.ನಾನು ಶಾಸಕನಾದ್ರೆ ನೂರು ಕೋಟಿ ಸ್ವಂತ ಹಣ ಖರ್ಚು ಮಾಡಿ ಶುಗರ್ ಫ್ಯಾಕ್ಟರಿ ಕಟ್ಟಿಸುವೆ ಎಂದು ಭರವಸೆ ನೀಡಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC