ಚನ್ನಪಟ್ಟಣದಲ್ಲಿ ಪವಾಡ ಪುರುಷರೋರ್ವರು ಕಾಣಿಸಿಕೊಂಡು ಪವಾಡ ಮಾಡುತ್ತಿದ್ದಾರೆ. ಬಂದ ಭಕ್ತರಿಗೆ ವಿಭೂತಿ ಸಿಹಿ ಹಂಚುತಿದ್ದಾರೆ.
ಚನ್ನಪಟ್ಟಣ [ನ.29]: ಕಳೆದ ಮೂರುದಿನಗಳಿಂದ ತಾಲೂಕಿನಲ್ಲಿ ಕಾಣಿಸಿಕೊಂಡಿರುವ ಬಾಬಾ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಮೂರು ದಿನಗಳ ಹಿಂದೆ ತಾಲೂಕಿನ ಚಿಕ್ಕಮಳೂರು ಗ್ರಾಮದ ಪುಟ್ಟಸ್ವಾಮಿಗೌಡರ ಸಮಾಧಿ ಬಳಿ ಕಾಣಿಸಿಕೊಂಡ ಬಾಬಾ, ಸ್ಥಳೀಯರನ್ನು ಕರೆದು ಬರಿಗೈಯಲ್ಲಿ ವಿಭೂತಿ, ಸಿಹಿ ತಿಂಡಿ, ಸಾಯಿಬಾಬಾ ಡಾಲರ್‌ಗಳನ್ನು ನೀಡುವ ಮೂಲಕ ಭಕ್ತರಲ್ಲಿ ಕೌತುಕ ಮೂಡಿಸಿದ್ದಾರೆ.
undefined
ಮೈ ಪ್ರೇಮ್ ಸಾಯಿಬಾಬಾ: ಇದ್ದಕ್ಕಿದ್ದಂತೆ ಚಿಕ್ಕಮಳೂರು ಗ್ರಾಮದಲ್ಲಿ ಕಾಣಿಸಿಕೊಂಡಿರುವ ಬಾಬಾ ಭಕ್ತರ ಮುಂದೆ ನಾನು ಪ್ರೇಮ್ ಸಾಯಿಬಾಬಾ ಎಂದು ಗುರುತಿಸಿಕೊಂಡಿದ್ದು, ಮಹಾರಾಷ್ಟ್ರದಿಂದ ಬಂದಿರುವುದಾಗಿ ಹೇಳಿದ್ದಾರೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಬಾಬಾ ಸುದ್ದಿ ತಿಳಿದು ತಾಲೂಕಿನ ವಿವಿಧೆಡೆ ಯಿಂದ ತಂಡೋಪ ತಂಡವಾಗಿ ಬಂದು ಹೋಗುತ್ತಿದ್ದಾರೆ.
ಬಿಡದಿ ದೇವಮಾನವನ ಅಸಲಿ ರೂಪ, ನಿತ್ಯಾನಿಗೆ ಶಿಷ್ಯನಿಂದಲೇ ಡಿಚ್ಚಿ!...
ಚಿಕ್ಕಮಳೂರಿನ ಸಮಾದಿ ಬಳಿ ವಾಸವಾಗಿದ್ದ ಬಾಬಾ ಬುಧವಾರ ರಾತ್ರಿಯಿಂದ ಭಕ್ತರೊಬ್ಬರ ತೋಟದಲ್ಲಿ ಉಳಿದು ಕೊಂಡಿದ್ದು, ಚಮತ್ಕಾರದಿಂದ ಮೋಡಿ ಮಾಡಿರುವ ಬಾಬಾನ ವೀಕ್ಷಣೆಗೆ ಜನತೆ ಮುಂದಾಗಿದ್ದಾರೆ.
ದೊಡ್ಡಮಳೂರು ಗ್ರಾಮದಲ್ಲಿ ಸಾಯಿಬಾಬಾ ಮತ್ತೆ ಜನ್ಮ ಎತ್ತುತ್ತಾರೆ ಎಂಬ ಪ್ರತೀತಿ ಇದ್ದು, ಮಣಿಪುರ ಮೂಲದ ಬಾಬಾ ಆಶ್ರಮದ ಸನ್ಯಾಸಿಗಳು ಈಗಾಗಲೇ ಇಲ್ಲಿನ ಮಗುವೊಂದನ್ನು ಮೂರನೇ ಬಾಬಾ ಎಂದು ಗುರುತಿಸಿದ್ದಾರೆ. ಆದರೆ, ಇದೀಗ ಚಿಕ್ಕಮಳೂರು ಗ್ರಾಮದಲ್ಲಿ ಪ್ರೇಮ ಸಾಯಿಬಾಬಾ ಕಾಣಿಸಿಕೊಂಡಿರುವುದು ಸಾಯಿಬಾಬಾ ಭಕ್ತರ ಕುತೂಹಲಕ್ಕೆ ಕಾರಣವಾಗಿದೆ. ಜನ ಮರಳೋ ಜಾತ್ರೆ ಮರಳೋ ಎಂಬಂತೆ ಬಾಬಾ ದರ್ಶನಕ್ಕೆ ಜನ ಮುಗಿ ಬಿದಿದ್ದಾರೆ.