Covid 3rd Wave ಆತಂಕವಿದ್ದರೂ ಆರಂಭವಾಗದ ಆಕ್ಸಿಜನ್‌ ಘಟಕ

By Kannadaprabha News  |  First Published Jan 9, 2022, 11:26 AM IST

*  ಕಾರ್ಯಾರಂಭ ಮಾಡದ ಆಕ್ಸಿಜನ್‌ ಘಟಕ
*  ಆಕ್ಸಿಜನ್‌ ಉತ್ಪಾದನಾ ಘಟಕವಿದ್ದರೂ ವಿದ್ಯುತ್‌ ಸಂಪರ್ಕವಿಲ್ಲ
*  ಆಸ್ಪತ್ರೆಯಲ್ಲಿ 100 ಸಿಲಿಂಡರ್‌ಗಳಿದ್ದರೂ ಅವುಗಳಿಗೆ ಆಕ್ಸಿಜನ್‌ ಪೂರೈಸಿಲ್ಲ 
 


ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ(ಜ.09): ತಾಲೂಕಿನಲ್ಲೂ ಕೋವಿಡ್‌ ಮೂರನೇ ಅಲೆ(Covid 3rd Wave) ಆತಂಕ ಶುರುವಾಗಿದೆ. ಆದರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 6 ತಿಂಗಳ ಹಿಂದೆ ಸ್ಥಾಪನೆಯಾಗಿದ್ದ ಆಕ್ಸಿಜನ್‌ ಉತ್ಪಾದನಾ ಘಟಕ(Oxygen Production Plant) ಇನ್ನೂ ಕಾರ್ಯಾರಂಭ ಮಾಡಿಲ್ಲ.

Latest Videos

undefined

ಈ ಹಿಂದೆ ಸಾಕಷ್ಟು ಆಕ್ಸಿಜನ್‌(Oxygen) ಕೊರತೆ ಉಂಟಾಗಿ ತೀವ್ರ ಸಮಸ್ಯೆಯಾದಾಗ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ(GM Siddeshwara) ತಮ್ಮ ಚಾರಿಟೇಬಲ್‌ ಟ್ರಸ್ಟ್‌ನಿಂದ 60 ಲಕ್ಷ ವೆಚ್ಚದಲ್ಲಿ ಆಕ್ಸಿಜನ್‌ ಜನರೇಟರ್‌ ಪ್ಲಾಂಟ್‌ ಸ್ಥಾಪನೆಗೆ ಕ್ರಮ ಕೈಗೊಂಡರು. ಈ ಆಕ್ಸಿಜನ್‌ ಘಟಕದಿಂದ 50-60 ಕೋವಿಡ್‌ ರೋಗಿಗಳಿಗೆ ಆಕ್ಸಿಜನ್‌ ಪೂರೈಕೆಯಾಗುವ ವ್ಯವಸ್ಥೆ ಇದೆ. ಉತ್ಪಾದನಾ ಘಟಕ ಸಿದ್ಧಗೊಂಡಿದ್ದರೂ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ (ಟಿಸಿ) ಅಳವಡಿಸದಿರುವುದರಿಂದ ಕಾರ್ಯಾರಂಭ ಸಾಧ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆ(Department of Health) ಮೂಲಗಳು ತಿಳಿಸಿವೆ.

Covid 19 Spike: ಬೆಂಗ್ಳೂರಲ್ಲಿ ಶೇ.9.8ಕ್ಕೆ ಏರಿದ ಪಾಸಿಟಿವಿಟಿ ದರ: ಹೆಚ್ಚಾದ ಆತಂಕ

65 ಹಾಸಿಗೆಗಳನ್ನು ಸಿದ್ಧಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ 100 ಸಿಲಿಂಡರ್‌ಗಳಿದ್ದರೂ ಅವುಗಳಿಗೆ ಆಕ್ಸಿಜನ್‌ ಪೂರೈಸಿಲ್ಲ. ಪ್ರತಿ ದಿನ 150 ಜನರಿಗೆ ಕೋವಿಡ್‌ ಪರೀಕ್ಷೆ(Covid Test) ನಡೆಸಲಾಗುತ್ತಿದ್ದು, ಇದನ್ನು ಹೆಚ್ಚಿಸಬೇಕಾಗಿದೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ತಾಲೂಕಿನಲ್ಲಿ 52 ಜನರು ಮೃತಪಟ್ಟಿದ್ದಾರೆ. ಬೇರೆ ಜಿಲ್ಲೆಗಳ ಆಸ್ಪತ್ರೆಯಲ್ಲಿ ಇನ್ನೂ ಅನೇಕರು ನಿಧನರಾಗಿದ್ದಾರೆ ಹಾಗೂ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಂಡರೆ ಮುಂದಾಗಬಹುದಾದ ತೊಂದರೆ ತಪ್ಪಿಸಬಹುದು ಎಂಬುದು ಸಾರ್ವಜನಿಕರ ಆಶಯವಾಗಿದೆ.

ಕೊರೋನಾ 3ನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಆಕ್ಸಿಜನ್‌ ಉತ್ಪಾದನಾ ಘಟಕ ಕಾರ್ಯಾರಂಭ ಮಾಡುವಲ್ಲಿ ಆರೋಗ್ಯ ಇಲಾಖೆ, ತಾಲೂಕು ಆಡಳಿತ, ಜನಪ್ರತಿನಿಧಿಗಳು ಗಮನ ಹರಿಸಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.

ಸರ್ಕಾರ(Government of Karnataka) ವಾರಾಂತ್ಯ ಕರ್ಫ್ಯೂ(Weekend Curfew0 ಜಾರಿಗೊಳಿಸಿರುವುದರಿಂದ ಪಟ್ಟಣದಲ್ಲಿ ಶನಿವಾರ ನಡೆಯುವ ವಾರದ ಸಂತೆಯನ್ನು ಸ್ಥಳಾಂತರ ಮಾಡಲಾಗುವುದು. ಮಾಸ್ಕ್‌(Mask) ಧರಿಸದಿದ್ದರೆ ದಂಡ ವಿಧಿಸಲಾಗುವುದು ಅಂತ ಹರಪನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ತಿಳಿಸಿದ್ದಾರೆ.  

ಆಕ್ಸಿಜನ್‌ ಉತ್ಪಾದನಾ ಘಟಕಕ್ಕೆ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ನ್ನು ಶೀಘ್ರದಲ್ಲಿ ಅಳವಡಿಸಲಾಗುವುದು. ಈ ವಾರದಲ್ಲಿ ಆಕ್ಸಿಜನ್‌ ಉತ್ಪಾದನೆ ಆರಂಭವಾಗಲಿದೆ. ಕೊರೋನಾ 3ನೇ ಅಲೆ ಎದುರಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಅಂತ ಹರಪನಹಳ್ಳಿ(Harapanahalli) ತಾಲೂಕು ಆರೋಗ್ಯಾಧಿಕಾರಿ ಎಸ್‌.ಪಿ. ಹಾಲಸ್ವಾಮಿ ಹೇಳಿದ್ದಾರೆ.  

Omicron Threat: ರಾಜ್ಯದಲ್ಲಿ ಕೊರೋನಾ ಸ್ಫೋಟ: ನಿಯಂತ್ರಣ ಮಟ್ಟಮೀರಿದ ಸೋಂಕು

ಮದುವೆಗಳಿಗೆ ಈ ಸಲವೂ ಸೋಂಕು ಅಡ್ಡಿ: ಸರ್ಕಾರದ ವಿರುದ್ಧ ಬೇಸರ

ಕೊರೋನಾ(Coronavirus) ಹರಡುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರ(Government of Karnataka) ಮದುವೆ(Marriage) ಸಮಾರಂಭಗಳಿಗೆ ಜನಮಿತಿ ಹೇರಿರುವುದರಿಂದ ಜನವರಿ ಮತ್ತು ಫೆಬ್ರವರಿಯಲ್ಲಿ ನಿಗದಿಯಾಗಿದ್ದ ಮದುವೆಗಳಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಹಲವು ಕುಟುಂಬಗಳು ಮದುವೆ ದಿನಾಂಕ ಬದಲಾವಣೆ ಮಾಡಿವೆ. ಇನ್ನೂ ಹಲವು ಕುಟುಂಬಗಳು ಮದುವೆಗೆಂದು ಕಾದಿರಿಸಿದ್ದ ಸಭಾಂಗಣ, ಕಲ್ಯಾಣ ಮಂಟಪಗಳ ಬುಕಿಂಗ್‌ ಅನ್ನು ರದ್ದು ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಕಲ್ಯಾಣ ಮಂಟಪ, ಮ್ಯಾರೇಜ್‌ ಹಾಲ್‌ಗಳ ಮಾಲೀಕರು ಚಿಂತೆಗೀಡಾಗಿದ್ದು, ಮದುವೆ ಮಾಸಗಳಲ್ಲಿಯೇ (ಸೀಜನ್‌) ನಿರ್ಬಂಧ ವಿಧಿಸಿರುವ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಜನವರಿ 14 ರಿಂದ ಮದುವೆ ಮಾಸ ಆರಂಭವಾಗಿ, ಮಾರ್ಚ್‌ 31ವರೆಗೂ ನಡೆಯಲಿದೆ. ಕಳೆದ ಎರಡು ವರ್ಷ ಕೊರೋನಾ ಹಿನ್ನೆಲೆ ಅದ್ಧೂರಿ ಮದುವೆಗೆ ಕಾಯ್ದಿದ್ದ ಸಾವಿರಾರು ಮಂದಿ 3-4 ತಿಂಗಳ ಮುಂಚೆಯೇ ಕಲ್ಯಾಣ ಮಂಟಪ, ಐಷಾರಾಮಿ ಹೋಟೆಲ್‌ಗಳ ಹಾಲ್‌ಗಳು, ಸಂಘ ಸಂಸ್ಥೆಗಳ ಸಭಾಂಗಣಗಳನ್ನು ಮುಂಗಡ ಹಣ ನೀಡಿ ಬುಕ್ಕಿಂಗ್‌ ಮಾಡಿಕೊಂಡಿದ್ದಾರೆ. ಆದರೆ ಜ.4 ರಂದು ಸರ್ಕಾರ ಮದುವೆ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 200, ಸಭಾಂಗಣಗಳಲ್ಲಿ 100 ಮಂದಿಯ ಮಿತಿ ಹೇರಿದೆ. ಈ ಹಿನ್ನೆಲೆ ಸಾವಿರಾರು ಜನರನ್ನು ಕರೆದು ಅದ್ಧೂರಿ ಮದುವೆ ಮಾಡಿಕೊಳ್ಳಬೇಕು ಎನ್ನುವವರಿಗೆ ನಿರಾಸೆಯಾಗಿ ಹಲವರು ದಿನಾಂಕ ಬದಲಾವಣೆ, ರದ್ದು ಮಾಡಲು ಮುಂದಾಗಿದ್ದಾರೆ. ಅಲ್ಲದೆ, ಪ್ರಸಕ್ತ ತಿಂಗಳಲ್ಲಿ ಮದುವೆ ಇರುವವರು ಕಲ್ಯಾಣಮಂಟಪಗಳಿಗೆ ನೀಡಿದ್ದ ಮುಂಗಡ ಹಣವನ್ನು ವಾಪಸ್‌ ಕೇಳುತ್ತಿದ್ದು, ಕಲ್ಯಾಣ ಮಂಟಪದ(Kalyana Mantapa) ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.
 

click me!