ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರ: ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಕಂಗಾಲಾದ ಜನತೆ..!

Suvarna News   | Asianet News
Published : Oct 18, 2020, 01:09 PM ISTUpdated : Oct 18, 2020, 03:17 PM IST
ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರ: ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಕಂಗಾಲಾದ ಜನತೆ..!

ಸಾರಾಂಶ

ಭೀಕರ ಪ್ರವಾಹದಲ್ಲಿ ಬದುಕಿ ಬಂದಿದ್ದೇ ದೊಡ್ಡ ಪವಾಡ| ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಜನಪ್ರತಿನಿಧಿಗಳು|  ಸಚಿವ, ಶಾಸಕರ ವಿರುದ್ಧ ಹರಿಹಾಯ್ದ ಸಂತ್ರಸ್ತರು| ಮಹಾ ಪ್ರವಾಹಕ್ಕೆ ಗ್ರಾಮಕ್ಕೆ ಗ್ರಾಮವೇ ಸಂಪೂರ್ಣ ಜಲಾವೃತ|  ನೀರಿನಲ್ಲೀ ಈಜಿಕೊಂಡೇ ಮನೆಯಲ್ಲಿರುವ ವಸ್ತುಗಳನ್ನ ತರುತ್ತಿರುವ ಜನರು|  

ಕಲಬುರಗಿ/ವಿಜಯಪುರ(ಅ.18): ಭೀಮಾ ನದಿಯ ಪ್ರವಾಹಕ್ಕೆ ಕಲಬುರಗಿ ಜಿಲ್ಲೆಯ ಬಂಕಲಾದ ಗ್ರಾಮದ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ನದಿಯ ನೀರು ಮನೆಗಳಿಗೆ ಹೊಕ್ಕಿದ್ದರಿಂದ ದವಸ ಧಾನ್ಯ, ಪಠ್ಯ ಪುಸ್ತಕಗಳು, ಮನೆಯ ಪೀಠೋಪಕರಣಗಳು ಸೇರಿದಂತೆ ಮತ್ತಿತರ ವಸ್ತುಗಳು ನೀರು ಪಾಲಾಗಿವೆ. ಇದರಿಂದ ಜಿಲ್ಲೆಯ ಜನರು ಕಂಗಾಲಾಗಿ ಹೋಗಿದ್ದಾರೆ. 

"

ಈ ಭೀಕರ ಪ್ರವಾಹದಲ್ಲಿ ಬದುಕಿ ಬಂದಿದ್ದೇ ದೊಡ್ಡ ಪವಾಡ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದಿದ್ದಾರೆ. 

"

ಸತ್ತೀದ್ದೀವಾ..ಬದುಕಿದ್ದೀವಾ ಅಂಥ ನೋಡೋಕೂ ಬಂದಿಲ್ಲ ಎಂದು ಪರಿಶೀಲನೆ ಬಂದ ಶಾಸಕ ಎಂ ವೈ ಪಾಟೀಲ್‌ ಅವರಿಗೆ ಸಂತ್ರಸ್ತರು ಬೆಂಡೆತ್ತಿದ್ದಾರೆ.ಮಳೆಗೆ ನಮ್ಮ ಬದುಕೇ ಬರ್ಬಾದ್‌ ಆಗಿ ಹೋಗಿದೆ ಪ್ರವಾಹ ಬಂದ ಸಂದರ್ಭದಲ್ಲಿ ನಮ್ಮ ಕಷ್ಟಗಳನ್ನು ಕೇಳದೆ ಪ್ರವಾಹ ಕಡಿಮೆಯಾದ ಮೇಲೆ ಬಂದಿದ್ದೀರಾ ಎಂದು ಸಂತ್ರತ್ರರು ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ. 

"

ಇನ್ನೂ ಭೀಮಾ ನದಿಯ ಪ್ರವಾಹಕ್ಕೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದ ಜನತೆ ಕೂಡ ಕಂಗಾಲಾಗಿ ಹೋಗಿದ್ದಾರೆ. ಇಡೀ ಗ್ರಾಮಕ್ಕೆ ಗ್ರಾಮದಕ್ಕೆ ಸಂಪೂರ್ಣವಾಗಿ ಜಲಾವೃತವಾಗಿದೆ. ನೀರಿನಲ್ಲೀ ಈಜಿಕೊಂಡೇ ಮನೆಯಲ್ಲಿರುವ ವಸ್ತುಗಳನ್ನ ತರುತ್ತಿದ್ದಾರೆ ಇಲ್ಲಿನ ಜನರು. 

"

ಕಲಬುರಗಿ: ಭೀಮೆಯ ಆರ್ಭಟಕ್ಕೆ ಕಣ್ಣೀರಿಟ್ಟ ಮಣ್ಣೂರು ಜನ..!

ಜೀವ ಉಳಿದರೆ ಸಾಕು ಎಂದು ಇಲ್ಲಿನ ಜನರು ಸುರಕ್ಷಿತ ಸ್ಥಳಗಳತ್ತ ಧಾವಿಸುತ್ತಿದ್ದಾರೆ. ಭಾರಿ ಮಳೆ ಸುರಿದ ಪರಿಣಾಮ ಕುಮಸಗಿ ಗ್ರಾಮದ ಜನರು ಪಡಬಾರದ ಕಷ್ಟಗಳನ್ನ ಎದುರಿಸುತ್ತಿದ್ದಾರೆ. ಮನೆ, ಜಮೀನುಗಳಿಗೆ ನೀರು ನುದ್ದಿದ ಪರಿಣಾಮ ಅಪಾರ ಪ್ರಮಾಣ ನಷ್ಟ ಉಂಟಾಗಿದೆ. 

"

ಜಿಲ್ಲೆಯಲ್ಲಿ ಪ್ರವಾಹದಿಂದ ಇಷ್ಟೆಲ್ಲಾ ಸಮಸ್ಯೆಗಳು ಎದುರಾಗಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾತ್ರ ಇತ್ತ ಕಡೆ ಆಗಮಿಸಿರಲಿಲ್ಲ. ಹೀಗಾಗಿ ಸಚಿವೆ ವಿರುದ್ಧ ಇಲ್ಲಿನ ಜನರು ತಿರುಗಿ ಬಿದ್ದಿದ್ದಾರೆ. ಸಂಕಚ್ಟದಲ್ಲಿದ್ದಾಗ ಬರಲಿಲ್ಲ ಪ್ರವಾಹ ಕಡಿಮೆಯಾದ ಮೇಲೆ ಯಾಕೆ ಬರ್ತೀರಿ ಎಂದು ಉಮ್ರಾಣಿ ಗ್ರಾಮದ ಮಹಿಳೆಯರು ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಹರಿಹಾಯ್ದಿದ್ದಾರೆ. 

"

"

 

PREV
click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ