ದಸರಾ : ಮಾವುತರಿಗೆ ಭರ್ಜರಿ ಭೋಜನ ಬಡಿಸಿದ ಡಿಸಿ ರೋಹಿಣಿ ಸಿಂಧೂರಿ

Suvarna News   | Asianet News
Published : Oct 18, 2020, 12:32 PM IST
ದಸರಾ :   ಮಾವುತರಿಗೆ ಭರ್ಜರಿ ಭೋಜನ ಬಡಿಸಿದ ಡಿಸಿ ರೋಹಿಣಿ ಸಿಂಧೂರಿ

ಸಾರಾಂಶ

ಮೈಸೂರು ದಸರಾ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಮಾವುತರಿಗೆ ಉಣಬಡಿಸಲಾಯಿತು.

ಮೈಸೂರು (ಅ.18): ಮೈಸೂರಿನಲ್ಲಿ ಅಕ್ಟೋಬರ್ 17 ರಿಂದ ದಸರಾ ಸಂಭ್ರಮ ಆರಂಭವಾಗಿದೆ. 

ಮೈಸೂರಿನ ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಮಾವುತರಿಗೆ ಹಾಗೂ ಅವರ ಕುಟುಂಬಸ್ಥರಿಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು.  
 
ಈ ವೇಳೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್ ಮಾವುತರಿಗೆ ಊಟ ಬಡಿಸಿದರು. ಈ ವೇಳೆ ಶಾಸಕ ಎಸ್‌ ಎ ರಾಮದಾಸ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು. 

ಡಿಸಿ ನಿರ್ಧಾರಕ್ಕೆ ಅಸಮಾಧಾನ : ರೋಹಿಣಿ ಸಿಂಧೂರಿಗೆ ಸಿಎಂ ಬಿಎಸ್‌ವೈ ಸೂಚನೆ .

ಔತಣಕೂಟಕ್ಕೆ ವಿವಿಧ ರಿತಿಯ ಭಕ್ಷ್ಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಕ್ಟೋಬರ್ 17 ರಂದು ಮೈಸೂರಿನಲ್ಲಿ ಆರಂಭಗೊಂಡಿರುವ ದಸರಾ ಮಹೋತ್ಸವ 27 ರಂದು ಕೊನೆಗೊಳ್ಳಲಿದೆ. 

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ