BSYಕೊಂಡಾಡಿದ ಜಿಟಿಡಿ : ಏನು ಬೇಕೆಂದು ಸಿಎಂ ಕೇಳಿದ್ದಾರೆಂದ ಸಂಸದ

Kannadaprabha News   | Asianet News
Published : Oct 18, 2020, 12:47 PM IST
BSYಕೊಂಡಾಡಿದ ಜಿಟಿಡಿ : ಏನು ಬೇಕೆಂದು ಸಿಎಂ ಕೇಳಿದ್ದಾರೆಂದ ಸಂಸದ

ಸಾರಾಂಶ

ಸಿಎಂಗೆ ದೈವಬಲವಿದೆ. ಅವರಿಗೆ ಇನ್ನಷ್ಟು ಶಕ್ತಿಯನ್ನು ದೇವರು ನೀಡಲಿ ಎಂದು ಜೆಡಿಎಸ್ ಮುಖಂಡ ಜಿಟಿ ದೇವೇಗೌಡ ಕೊಂಡಾಡಿದ್ದಾರೆ

ಮೈಸೂರು (ಅ.18): ಮೈಸೂರು ದಸರಾ ಕಾರ್ಯಕ್ರಮದ ಉದ್ಘಾಟನೆ ಬಳಿಕ ಮಾತನಾಡಿದ ಜೆಡಿಎಸ್  ಶಾಸಕ ಜಿ.ಟಿ. ದೇವೇಗೌಡ ಸಿಎಂ ಯಡಿಯೂರಪ್ಪ ಅವರನ್ನು ಕೊಂಡಾಡಿದರು.

 ಯಡಿಯೂರಪ್ಪ ಅವರಿಗೆ ಇನ್ನೂ ಹೆಚ್ಚು ಶಕ್ತಿ ಬರಲಿ. ಅವರಿಂದ ಈ ರಾಜ್ಯ ರಾಮ ರಾಜ್ಯವಾಗಲಿ, ರಾಜ್ಯಕ್ಕೆ ಸಮೃದ್ಧಿ ಬರಲಿ ಯಡಿಯೂರಪ್ಪ ಗೆ ಅಪಾರ ದೈವ ಬಲವಿದೆ ಎಂದು ಕೊಂಡಾಡಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ದಸರಾ ಉದ್ಘಾಟನೆಗೆ ಆಗಮಿಸಿದ ಸಿಎಂ ಯಡಿಯೂರಪ್ಪ ಅವರು, ಮೈಸೂರಿನ ಅಭಿವೃದ್ಧಿಗೆ ಏನೇನು ಆಗಬೇಕು ಎಂದು ಕೇಳಿದರು. ನಾನು ವಿಮಾನ ನಿಲ್ದಾಣದ ವಿಸ್ತರಣೆ, ಮೈಸೂರು ಸುತ್ತಮುತ್ತಲ ಗ್ರಾಪಂಗಳನ್ನು ನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿ ಬೃಹತ್‌ ನಗರ ಪಾಲಿಕೆಯನ್ನಾಗಿಸಬೇಕು ಎಂಬ ಪ್ರಸ್ತಾವನೆಯನ್ನು ಅವರ ಮುಂದಿಟ್ಟಿದ್ದೇನೆ. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ ಎಂದರು.

'ಬಿಜೆಪಿ ಸೇರಲು ಸಜ್ಜಾದ ಕಾಂಗ್ರೆಸ್‌ನ ಐವರು ಶಾಸಕರು : ಸಿಎಂ BSYರಿಂದ ಬ್ರೇಕ್ ' ..

ದೆವ್ವವನ್ನು ದೇವರು ಮಾಡುವ ಪ್ರವೃತ್ತಿಗೆ ಕಡಿವಾಣ

ಹಿಂದೂ ಧರ್ಮದಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ. ಬೇರೆ ಧರ್ಮದಲ್ಲಿ ಈ ಮನಃಸ್ಥಿತಿ ಇಲ್ಲ. ಜಾತ್ಯತೀತರು ಎಂದು ಹೇಳಿ ಕೊಳ್ಳುವವರಿಗೆ ಇದು ಅರ್ಥವಾಗುವುದಿಲ್ಲ ಎಂದು ಮಹಿಷಾ ದಸರಾ ಬಗ್ಗೆ ಕಿಡಿ ಕಾರಿದ ಅವರು, ದೆವ್ವವನ್ನು ದೇವರು ಮಾಡುವುದು, ದೇವರನ್ನು ದೆವ್ವ ಮಾಡುವ ಪ್ರವೃತ್ತಿ ಮೈಸೂರಲ್ಲಿ ಶುರುವಾಗಿತ್ತು. ಯಡಿಯೂರಪ್ಪನವರ ಸರ್ಕಾರ ಬಂದ ಮೇಲೆ ಅದು ನಿಂತಿದೆ ಎಂದು ಅವರು ಹೇಳಿದರು.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು