Electricity| ಬೆಂಗ್ಳೂರಿನ ವಿವಿಧೆಡೆ ಇಂದು ದಿನವಿಡೀ ಕರೆಂಟ್‌ ಇರಲ್ಲ..!

Kannadaprabha News   | Asianet News
Published : Nov 22, 2021, 07:31 AM ISTUpdated : Nov 22, 2021, 07:44 AM IST
Electricity| ಬೆಂಗ್ಳೂರಿನ ವಿವಿಧೆಡೆ ಇಂದು ದಿನವಿಡೀ ಕರೆಂಟ್‌ ಇರಲ್ಲ..!

ಸಾರಾಂಶ

*   ಭೂಗತ ವಿದ್ಯುತ್‌ ಕೇಬಲ್‌ ಅಳವಡಿಕೆ: ವಿವಿಧೆಡೆ ಇಂದಿನಿಂದ ವಿದ್ಯುತ್‌ ಇರಲ್ಲ *   ಕೆಪಿಟಿಸಿಎಲ್‌, ಬೆಸ್ಕಾಂನಿಂದ ಕಾಮಗಾರಿ *   ನಾಡಿದ್ದಿನ ವರೆಗೆ ವಿದ್ಯುತ್‌ ವ್ಯತ್ಯಯ  

ಬೆಂಗಳೂರು(ನ.22):  ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (KPTCL) ಹಾಗೂ ಬೆಸ್ಕಾಂ ಓವರ್‌ಹೆಡ್‌ ಲೈನ್‌ ವಾಹಕವನ್ನು ಭೂಗತ ಕೇಬಲ್‌(Underground Cable)ಆಗಿ ಬದಲಾಯಿಸುವ ಕಾಮಗಾರಿ ಹಮ್ಮಿಕೊಳ್ಳಲಿರುವ ಹಿನ್ನೆಲೆಯಲ್ಲಿ ನ.22ರಿಂದ 24ವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಎಚ್‌ಎಸ್‌ಆರ್‌ ಮತ್ತು ನಾಗನಾಥಪುರ ವಿದ್ಯುತ್‌ ಕೇಂದ್ರ ವ್ಯಾಪ್ತಿಯಲ್ಲಿ ನ.22ರಂದು 24ನೇ ಮುಖ್ಯರಸ್ತೆ, ಎಚ್‌ಎಸ್‌ಆರ್‌ ಬಡಾವಣೆ, 2ನೇ ಹಂತ, ಉಜಾಲಾ ಫ್ಯಾಕ್ಟರಿ, ಹೊಸಪಾಳ್ಯ ನರ್ಸರಿ, ಶಾಯಿ ಎಕ್ಸ್‌ಪೋರ್ಟ್‌ ಹೊಸೂರು ರಸ್ತೆ, ಹುಂಡೈ ಕೂಡ್ಲು ಗೇಟ್‌ ಹತ್ತಿರ ಹಾಗೂ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

Electricity | ಬಿಪಿಎಲ್‌ ಕುಟುಂಬಕ್ಕೆ ಉಚಿತ ‘ಬೆಳಕು’ ವಿದ್ಯುತ್‌ ಸಂಪರ್ಕ

ನ.23ರಂದು ನಾಗನಾಥಪುರ, ದೇವರ ಬೀಸನಹಳ್ಳಿ, ಸೌತ್‌ಸಿಟಿ, ಖೋಡೇಸ್‌ ಮತ್ತು ಬಿಟಿಎಂ ಬಡಾವಣೆ ವ್ಯಾಪ್ತಿಯ ಚಚ್‌ರ್‍ ರಸ್ತೆ, ಎಇಸಿಎಸ್‌ ಬಿ ಬ್ಲಾಕ್‌, 1ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, ಬಿಡಿಎ 8ನೇ ಹಂತ, ಕೊತ್ತನೂರು ಬಸ್‌ ನಿಲ್ದಾಣ ಬಳಿ, ರಾಯಲ್‌ ಪಾರ್ಕ್ ಆವಲಹಳ್ಳಿ, ಟಿಪ್ಪು ವೃತ್ತ, ನೈಟಿಂಗಲ್‌ ಶಾಲೆ, ವಿಜಯ ಬ್ಯಾಂಕ್‌ ಲೇಔಟ್‌ ಹತ್ತಿರ, ಮುನೇಶ್ವರ ದೇವಸ್ಥಾನ ಹತ್ತಿರ, ರಾಯಲ್‌ ಶೆಲ್ಟರ್‌ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ನ.24ರಂದು ಕಿಯೋನಿಕ್ಸ್‌, ಸೌತ್‌ಸಿಟಿ, ವೆಲಾಂಕಿಣಿ ಮತ್ತು ಬಿಟಿಎಂ ವ್ಯಾಪ್ತಿಯ ವಿದ್ಯುನ್ಮಾನ ನಗರ, ಕೋನಪ್ಪನ ಅಗ್ರಹಾರ, ದೊಡ್ಡ ತೂಗೂರು, ಅರಕೆರೆ ಮೈಕ್ರೋ ಬಡಾವಣೆ, ಲಕ್ಷ್ಮಿ ಲೇಔಟ್‌, ಓಂಕಾರ ನಗರ, ಪೋರ್ಟಿಸ್‌ ಆಸ್ಪತ್ರೆ, ಅಡಿಗಾಸ್‌ ಹೋಟಲ್‌, ಎಟುಬಿ, ಗುರು ಗಾರ್ಡನ್‌, ನಂಜುಂಡಯ್ಯ ಗಾರ್ಡನ್‌, ಬೊಮ್ಮನಹಳ್ಳಿ ಐಸಿಐಸಿಐ ಬ್ಯಾಂಕ್‌ ಹತ್ತಿರ, ಗೋಲ್ಡನ್‌ ಟವರ್‌ ರೂಪೇನ್‌ ಅಗ್ರಹಾರ, ರಾಯಲ್‌ ಶೆಲ್ಟರ್‌ ಬಡಾವಣೆ ಇಂದಿರಾ ಕ್ಯಾಂಟಿನ್‌ ಬಳಿ, ಡಿ-ಮಾರ್ಟ್‌ ಹೊಂಗಸಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಎಸ್ಕಾಂಗಳಿಗೆ ಸರ್ಕಾರದಿಂದಲೇ 5,975 ಕೋಟಿ ಬಾಕಿ..!

ಬೆಂಗಳೂರು(Bengaluru) ಸೇರಿ 8 ಜಿಲ್ಲೆಗಳಿಗೆ ವಿದ್ಯುತ್‌ ವಿತರಿಸುವ ಬೆಸ್ಕಾಂ ಹಾಗೂ ಮೈಸೂರು, ದಕ್ಷಿಣ ಕನ್ನಡ, ಕಲಬುರಗಿ ಸೇರಿ 16 ಜಿಲ್ಲೆಗಳಲ್ಲಿ ವಿದ್ಯುತ್‌ ವಿತರಣೆ ಮಾಡುತ್ತಿರುವ ಮೆಸ್ಕಾಂ, ಜೆಸ್ಕಾಂ, ಚೆಸ್ಕಾಂಗಳಿಗೆ ಸರ್ಕಾರ ಸುಮಾರು 5975 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದೆ. ಬಾಕಿ ವಸೂಲಿಗೆ ಈಗಾಗಲೇ ಕೆಲವೆಡೆ ಎಚ್ಚರಿಕೆ ನೀಡಿರುವ ವಿದ್ಯುತ್‌ ಸರಬರಾಜು ಕಂಪನಿಗಳು(Power Supply Companies), ಬಲವಂತದ ಬಾಕಿ ವಸೂಲಿ ಕ್ರಮಗಳಿಗೂ ಕೈಹಾಕಿವೆ.

ಕಲ್ಲಿದ್ದಲು ಸಮಸ್ಯೆ ಪರಿಹಾರಕ್ಕೆ ಮೋದಿ ಮಧ್ಯಪ್ರವೇಶ!

ಕಲಬುರಗಿ, ಬೀದರ್‌, ರಾಯಚೂರು, ಬಳ್ಳಾರಿ, ವಿಜಯನಗರ, ಯಾದಗಿರಿ, ಕೊಪ್ಪಳ ಹೀಗೆ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಗುಲ್ಬರ್ಗಾ ವಿದ್ಯುತ್‌ ವಿತರಣಾ ಕಂಪನಿ (GESCOM)ಗೆ ಸರ್ಕಾರ 1800 ಕೋಟಿ ವಿದ್ಯುತ್‌ ಬಿಲ್‌(Electricity Bill) ಬಾಕಿ ಉಳಿಸಿಕೊಂಡಿದೆ. ಇವುಗಳಲ್ಲಿ ವಿದ್ಯುತ್‌ ದೀಪ ಮತ್ತು ಕುಡಿಯುವ ನೀರಿನ ಬಿಲ್‌ ಸೇರಿ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಒಟ್ಟಾರೆ ಅಂದಾಜು .700 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಬರಬೇಕಿದೆ. ಇದರ ಜತೆಗೆ ಪಂಪ್‌ಸೆಟ್‌ ಸಬ್ಸಿಡಿ ಅಂದಾಜು 1100 ಕೋಟಿಗೂ ಹೆಚ್ಚು ಬಾಕಿ ಇದೆ.

ಅದೇ ರೀತಿ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ವಿದ್ಯುತ್‌ ಪೂರೈಕೆ ಮಾಡುತ್ತಿರುವ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮಕ್ಕೆ(CESCOM) ಗ್ರಾಪಂಗಳಿಂದ .276.14 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಪಾವತಿಯಾಗಬೇಕಿದೆ. ನಗರಾಭಿವೃದ್ಧಿ ಇಲಾಖೆಯಿಂದ ವಿದ್ಯುತ್‌ ದೀಪ, ನೀರು ಪೂರೈಕೆಗೆ ಸಂಬಂಧಿಸಿದ ವಿದ್ಯುತ್‌ ಬಿಲ್‌ ಬಾಕಿ .67.26 ಕೋಟಿ ತಲುಪಿದೆ. ಒಟ್ಟಾರೆ ಗ್ರಾಪಂಗಳು ಮತ್ತು ನಗರಾಭಿವೃದ್ಧಿ ಇಲಾಖೆಯಿಂದ 343.40 ಕೋಟಿ ಬಾಕಿ ಪಾವತಿಯಾಗಬೇಕಿದೆ.
 

PREV
Read more Articles on
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ