* ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿ
* ಡಿಸೆಂಬರ್ ನಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನ
* ಬಿಟ್ ಕಾಯಿನ್ ಹಗರಣ ಪ್ರತಿಧ್ವನಿಸುವ ಸಾಧ್ಯತೆ
* ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳ ಪ್ಲಾನ್
ಬೆಂಗಳೂರು(ನ. 21) ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಸುದ್ದಿಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ನವೆಂಬರ್ 17 ಮತ್ತು 18 ರಂದು ಹಿಮಾಚಲ ಪ್ರದೇಶದ(Himachal Pradesh) ಶಿಮ್ಲಾ ದಲ್ಲಿ ಎಲ್ಲ ರಾಜ್ಯಗಳ ಸ್ಪೀಕರ್ ಗಳ ಸಭೆ ನಡೆಯಿತು. 27 ರಾಜ್ಯಗಳ ವಿಧಾನಸಭಾಧ್ಯಕ್ಷರು, ಸಚಿವಾಲಯದ ಕಾರ್ಯದರ್ಶಿಗಳು ಅಧಿಕಾರಿಗಳು ಭಾಗವಹಿಸಿದ್ದರು ಎಂದು ತಿಳಿಸಿದರು.
ಅತ್ಯಂತ ಯಶಸ್ವಿಯಾಗಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಎರಡು ವಿಷಯಗಳ ಬಗ್ಗೆ ವಿಶೇಷ ಚರ್ಚೆ ನಡೆದಿದೆ. ಶತಮಾನದ ಪಯಣ, ನಡೆಯಬೇಕಾದ ಮಾರ್ಗದ ಬಗ್ಗೆ ಚರ್ಚೆ ನಡೆಯಿತು. ಸಂವಿಧಾನ,ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಪೀಠಾಸಿನಾಧಿಕಾರಿಗಳ ಜವಾಬ್ದಾರಿ ಬಗ್ಗೆ ನಾನು ಮಾತನಾಡಿದ್ದೆ ರಾಜ್ಯದಲ್ಲಿ ನಡೆದ ರೀತಿಯಲ್ಲೇ ಹಿಮಾಚಲ ಪ್ರದೇಶ ವಿಧಾನಸಭಾ ಸಮ್ಮೇಳನ ಸಭಾಂಗಣದಲ್ಲಿ ಲೋಕಸಭೆ (Loksabha) ಸ್ಪೀಕರ್ ಎಲ್ಲರನ್ನೂ ಉದ್ದೆಶಿಸಿ ಮಾತನಾಡಿದರು ಎಂದು ತಿಳಿಸಿದರು.
ಇಲ್ಲಿ ಮಾಡಿದಂತೆ ಯಾರೂ ಅಲ್ಲಿ ವಿವಾದ ಮಾಡದೇ ಪ್ರಬುದ್ದವಾಗಿ ನಡೆದುಕೊಂಡರು. ಇನ್ಮುಂದೆ ವರ್ಷದಲ್ಲಿ ಎರಡು ಬಾರಿ ಸಮ್ಮೇಳನ ಮಾಡಲು ನಿರ್ಧರಿಸಲಾಗಿದೆ. ಒಂದು ದೆಹಲಿಯಲ್ಲಿ, ಮತ್ತೊಂದು ಬೇರೆ ರಾಜ್ಯದಲ್ಲಿ ಮಾಡಬೇಕು ಎಂದು ನಿರ್ಧರಿಸಲಾಗಿದೆ. ರಾಷ್ಟ್ರಪತಿಗಳು, ರಾಜ್ಯಪಾಲರು ವಿಧಾನ ಸಭೆಯಲ್ಲಿ ಭಾಷಣ ಮಾಡುವಾಗ, ಗದ್ದಲಗಳಾಗದಂತೆ ಎಚ್ಚರ ವಹಿಸಲು ನಿರ್ಧರಿಸಲಾಗಿದೆ ಎಂದರು.
ಈ ನಿಟ್ಟಿನಲ್ಲಿ ವಿಪಕ್ಷ ಹಾಗು ಆಡಳಿತ ಪಕ್ಷದ ನಾಯಕರಿಂದ ಮೊದಲೇ ಒಪ್ಪಿಗೆ ಪಡೆಯಬೇಕು ಎಂದು ಸಮ್ಮೇಳನದಲ್ಲಿ ತೀರ್ಮಾನಿಸಲಾಗಿದೆ. ನೂತನ ಆಯ್ಕೆಯಾಗುವ ಶಾಸಕರಿಗೆ ತರಬೇತಿ ನೀಡಲಾಗುತ್ತದೆ. ಅತ್ಯುತ್ತಮ ವಿಧಾನಸಭೆ- ಅತ್ಯುತ್ತಮ ವಿಧಾನ ಪರಿಷತ್ ಪ್ರಶಸ್ತಿ ನೀಡಲು ಹಿಂದೆಯೇ ಚರ್ಚೆಯಾಗಿತ್ತು. ಉತ್ತಮ ವಿಧಾನ ಸಭೆ ಪರಿಷತ್ ಪ್ರಶಸ್ತಿ ನೀಡಲು ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳಲಾಗಿದೆ. 1921ರಲ್ಲಿ ವಿಧಾನಸಭಾ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆರ್ಥಿಕ ಸ್ವಾಯತ್ತತೆ ನಿಯಂತ್ರಣ ಜವಾಬ್ದಾರಿ ಯನ್ನು ನೀಡುವ ಬಗ್ಗೆ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ ಎಂದರು.
ಅಧಿವೇಶನ; ಬೆಳಗಾವಿಯ (Belagavi) ಸುವರ್ಣ ಸೌಧದಲ್ಲಿ (Suvarna Soudha) ಡಿ. 13 ರಿಂದ 24 ರ ವರೆಗೆ ಅಧಿವೇಶನ (Karnataka assembly session) ನಡೆಯಲಿದೆ. ಪ್ರವಾಹ ಮತ್ತು ಕೋವಿಡ್ (Coronavirus) ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿರಲಿಲ್ಲ. ಈಗ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರಂಗೇರಿದ ವಿಧಾನ ಪರಿಷತ್ ಚುನಾವಣೆ ಕಣ.. ಪಕ್ಷಗಳಲ್ಲಿ ಬಿರುಸು
ಚಳಿಗಾಲದ ಅಧಿವೇಶನವನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದರು. ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ದಿನಾಂಕ ನಿಗದಿ ಮಾಡಿತ್ತು.
ಬೆಳಗಾವಿ ಸುವರ್ಣ ಸೌಧ ಈ ಬಾರಿ ಮತ್ತೆ ಅಧಿವೇಶನಕ್ಕೆ ಸಾಕ್ಷಿಯಾಗಲಿದೆ. ಸುವರ್ಣ ಸೌಧ ಖಾಲಿ ಬಿದ್ದಿದ್ದು ಕೆಲ ಸರ್ಕಾರಿ ಕಚೇರಿಗಳನ್ನು ಅಲ್ಲಿಗೆ ವರ್ಗಾಯಿಸಿ ಅನುಕೂಲ ಮಾಡಿಕೊಡಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಲೇ ಇರುತ್ತವೆ.
ಬಿಟ್ ಕಾಯಿನ್ ಹಗರಣ(Bitcoin Scam) ಮಳೆ (Rain) ಮತ್ತು ಪ್ರವಾಹಕ್ಕೆ (Flood) ಸ್ಪಂದಿಸುವಲ್ಲಿ ಸರ್ಕಾರದ ಹಿಂದೇಟು, ದೇವಾಲಯಗಳ ಧ್ವಂಸ ವಿಪಕ್ಷಗಳಿಗೆ ಅಸ್ತ್ರವಾಗಬಲ್ಲದು. ವಿಧಾನ ಪರಿಷತ್ ಚುನಾವಣೆ ಕಣದವೂ ಪರಿಣಾಮ ಬೀರಲಿದೆ.
ಬಸವರಾಜ ಬೊಮ್ಮಾಯಿ (Basavaraj Bommai) ಸಿಎಂ ಆದ ನಂತರ ಮೊದಲ ಸಾರಿಗೆ ಬೆಳಗಾವಿಯಲ್ಲಿ ಅಧಿವೇಶನ ಎದುರಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರವಾಹ ಸ್ಥಿತಿ, ಪರಿಹಾರ ವಿತರಣೆಯಲ್ಲಿ ಆದ ಲೋಪ ಎಲ್ಲ ಸವಾಲುಗಳನ್ನು ಎದುರಿಸಿ ಸಮರ್ಪಕ ಉತ್ತರ ನೀಡಬೇಕಾಗುತ್ತದೆ. ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೂ ಇದು ಮೊದಲ ಅಧಿವೇಶನ ಆಗಲಿದೆ.