ಮನೆ ಮಾಲೀಕರಿಗೆ ನೂತನ ಬಾಡಿಗೆ ನೀತಿ ಜಾರಿ ಮಾಡಲಾಗಿದೆ. ಬಾಡಿಗೆ ಕೊಡುವ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ಲಿಯರೆನ್ಸ್ ಸರ್ಟಿಫಿಕೆಟ್ ತೆಗೆದುಕೊಳ್ಳುವುದು ಕಡ್ಡಾಯ
ಮೈಸೂರು(ನ.26): ಮಂಗಳೂರಿನಲ್ಲಿ ಬಾಂಬ್ ಸ್ಫೋಟವಾದ ಬಳಿಕ ಮೈಸೂರು ಪೊಲೀಸರು ಹೊಸ ಬಾಡಿಗೆ ನೀತಿಯನ್ನ ಜಾರಿಗೆ ತಂದಿದ್ದಾರೆ. ಮನೆ ಮಾಲೀಕರಿಗೆ ನೂತನ ಬಾಡಿಗೆ ನೀತಿ ಜಾರಿ ಮಾಡಲಾಗಿದೆ. ಬಾಡಿಗೆ ಕೊಡುವ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ಲಿಯರೆನ್ಸ್ ಸರ್ಟಿಫಿಕೆಟ್ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.
ಶಂಕಿತ ಉಗ್ರ ಶಾರಿಕ್ ನಕಲಿ ದಾಖಲೆ ನೀಡಿ ಬಾಡಿಗೆ ಮನೆ ಪಡೆದ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸರು ನೂತನ ನಿಯಮವನ್ನ ಜಾರಿ ಮಾಡಿದ್ದಾರೆ. ಮಂಗಳೂರಿನಲ್ಲಿ ಬಾಂಬ್ ಸ್ಫೋಟವಾದ ಬಳಿಕ ಮೈಸೂರು ಪೊಲೀಸರು ಎಚ್ಚೆತ್ತಕೊಂಡಿದ್ದಾರೆ.
undefined
ಮಂಗಳೂರು ಬಾಂಬ್ ಸ್ಫೋಟ: ಲಷ್ಕರ್ ಸಂಪರ್ಕಿಸಿ ಎಕೆ47 ತರಿಸಲು ಶಾರೀಕ್ ಯತ್ನ..!
100 ರೂ. ಪಾವತಿಸಿ ಅರ್ಜಿ ಪಡೆದು ಕ್ಲಿಯರೆನ್ಸ್ ಸರ್ಟಿಫಿಕೆಟ್ ಪಡೆಯಬೇಕು. ಬ್ಯಾಚುಲರ್, ಕುಟುಂಬಗಳಿಗೆ, ಪಿಜಿ ನಡೆಸುವವರಿಗೆ ಪ್ರತ್ಯೇಕ ಅರ್ಜಿ ಲಭ್ಯವಾಗಲಿದೆ. ಈಗಾಗಲೇ ಬಾಡಿಗೆ ಇರುವವರ ಮಾಹಿತಿಯನ್ನ ಠಾಣೆಗೆ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ನಗರದ ಎಲ್ಲ ಠಾಣೆಗಳಲ್ಲಿ ಕಟ್ಟು ನಿಟ್ಟಾಗಿ ನಿಯಮ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ರಮೇಶ್ ಅವರು ಸೂಚನೆ ನೀಡಿದ್ದಾರೆ.