Nelamangala Accident: ಮುಂದಿದ್ದ ಕಾರ್‌ಅನ್ನು ಉಳಿಸಲು ಹೋಗಿ ದುರಂತವಾಗಿದೆ, ಕಂಟೇನರ್‌ ಚಾಲಕ ಆರಿಫ್‌ ಹೇಳಿಕೆ!

By Santosh Naik  |  First Published Dec 21, 2024, 4:43 PM IST

ತುಮಕೂರು-ಬೆಂಗಳೂರು ಹೆದ್ದಾರಿಯ ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್‌ ಸಲ್ಯೂಷನ್ಸ್‌ ಕಂಪನಿಯ ಮಾಲೀಕ ಚಂದ್ರಮ್‌ ಯೇಗಪ್ಪಗೋಳ ಅವರ ಕುಟುಂಬ ಸಾವನ್ನಪ್ಪಿದೆ. ಕಂಟೇನರ್‌ ಚಾಲಕ ಆರಿಫ್‌ ಅಪಘಾತದ ವಿವರ ನೀಡಿದ್ದಾರೆ.


ಬೆಂಗಳೂರು (ಡಿ.21): ತುಮಕೂರು-ಬೆಂಗಳೂರು ಹೆದ್ದಾರಿಯ ನೆಲಮಂಗಲದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್‌ ಸಲ್ಯೂಷನ್ಸ್‌ ಕಂಪನಿಯ ಮಾಲೀಕ ಚಂದ್ರಮ್‌ ಯೇಗಪ್ಪಗೋಳ ಅವರ ಇಡೀ ಕುಟುಂಬ ಹಾಗೂ ಅವರ ತಂಗಿ ಮತ್ತು ತಂಗಿಯ ಮಗ ದಾರುಣ ಸಾವು ಕಂಡಿದ್ದಾರೆ. ಬೀಕರ ರಸ್ತೆ ಅಫಘಾತದ ದೃಶ್ಯಗಳು ಸಿಸಿಟಿವಿಯಲ್ಲೂ ಸೆರೆಯಾಗಿದೆ. ಇದರ ನಡುವೆ ಆಸ್ಪತ್ರೆಗೆ ದಾಖಲಾಗಿರುವ ಕಂಟೇನರ್‌ ಚಾಲಕ್‌ ಆರಿಫ್‌  ನೆಲಮಂಗಲದಲ್ಲಿ ಅಪಘಾತ ಹೇಗಾಯ್ತು ಅನ್ನೋದರ ವಿವರವನ್ನು ನೀಡಿದ್ದಾರೆ.

'ದಾಬಸ್‌ಪೇಟೆಯಿಂದ ಬೆಂಗಳೂರಿನ ಬೈಪಾಸ್‌ ಕಡೆಗೆ ಬರ್ತಿದ್ದೆ ಬಲಬದಿಯಿಂದ ಗಾಡಿ ತೆಗೆದುಕೊಂಡು ಹೋಗುತ್ತಿದ್ದೆ ಎಂದು ಕಂಟೇನರ್‌ ಚಾಲಕ ಆರಿಫ್‌ ಹೇಳಿದ್ದಾನೆ. ಈ ವೇಳೆ ನನ್ನ ಎದುರುಗಡೆ ನಾನು ಗಾಡಿಯನ್ನು ನೋಡಿದೆ. ನಾನು ನಿಧಾನ, ನಿಧಾನವಾಗಿ ಬ್ರೇಕ್‌ ಹಾಕುತ್ತಲೇ ಹೋದೆ. ನನ್ನ ಎದುರಿಗೆ ಇದ್ದ ಕಾರ್‌ನವನು ಅರ್ಜೆಂಟ್‌ ಆಗಿ ಬ್ರೇಕ್‌ ಹಾಕಿ ಬಿಟ್ಟ. ನನ್ನ ಮುಂದಿದ್ದ ಕಾರ್‌ಗೆ ಗುದ್ದಬಾರದು, ಅವನನ್ನು ಸೇಫ್‌ ಮಾಡಲು ಹೋಗಿ, ಸ್ಟೇರಿಂಗ್‌ಅನ್ನು ಬಲಗಡೆಗೆ ಎಳೆದುಕೊಂಡೆ..' ಎಂದು ಹೇಳಿದ್ದಾರೆ.

Tap to resize

Latest Videos

undefined

ಈ ವೇಳೆ ಇನ್ನೊಂದು ಕಡೆಯಿಂದಲೂ ದೊಡ್ಡ ಕ್ಯಾಂಟರ್‌ ಬರುತ್ತಿರೋದನ್ನು ನೋಡಿದೆ. ಟ್ರಕ್‌ಗೆ ಗುದ್ದಬಾರದು ಎಂದು ಮತ್ತೊಮ್ಮೆ ಸ್ಟೇರಿಂಗ್‌ ಲೆಫ್ಟ್‌ಗೆ ಎಳೆದುಕೊಂಡೆ, ಈ ವೇಳೆ ಲಾರಿ ಡಿವೈಡರ್ ದಾಟಿ ಮುಂದಿನ ರಸ್ತೆಗೆ ಪಲ್ಟಿ ಆಯ್ತು. ನನ್ನ ಮುಂದಿದ್ದ ಕಾರ್‌ನಿಂದ ಹೀಗೆ ಆಯ್ತು. ನನಗೆ ತುಂಬಾ ನೋವು ಆಗ್ತಿದೆ. ಅಲ್ಲಿ ಏನ್ ಆಯ್ತು ಅಮೇಲೆ ಅನ್ನೋದು ಗೊತ್ತಿಲ್ಲ. ಕಾರ್ ಮೇಲೆ‌ ನನ್ನ ಲಾರಿ ಪಲ್ಟಿಯಾಗಿತ್ತು. ನಾನು ಕಾರನ್ನ‌ ಬಚಾವ್ ಮಾಡಲು ಹೋದೆ. ಮುಂದೆ  ಡಿವೈಡರ್ ಮೇಲೆ ಹತ್ತಿ ಲಾರಿ ಪಲ್ಟಿ ಆಯ್ತು, ಮುಂದೆ ಕಾರ್ ಮತ್ತೆ ಕಂಟೇನರ್ ಇತ್ತು. ಕಂಟೇನರ್ ಟಚ್ ಆಗಿ ನನ್ನ ಲಾರಿ ಪಲ್ಟಿ ಹೊಡೆದಿದೆ. 6 ಮಂದಿ ಸಾವು ಕಂಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಚಂದ್ರಮ್‌ ಮೂಲತಃ ಮಹಾರಾಷ್ಟ್ರದವರಾಗಿದ್ದು, ಅವರ ಕುಟುಂಬ ವಿಜಯಪುರದಲ್ಲಿ ನೆಲೆಸಿದೆ. ಮಹಾರಾಷ್ಟ್ರದ ಸಾಂಗ್ಲಿಯ ಮೊರಬಗಿಯವರಾಗಿದ್ದು, ಅವರ ತಂದೆ-ತಾಯಿ ಅಲ್ಲಿಯೇ ನೆಲೆಸಿದ್ದಾರೆ. ಇಲ್ಲಿಯವರೆಗೂ ತಮ್ಮ ಮಗ, ಸೊಸೆ, ಮೊಮ್ಮಕ್ಕಳು, ಮಗಳು ಹಾಗೂ ಆಕೆಯ ಮಗ ಸಾವು ಕಂಡಿರುವ ಸುದ್ದಿ ವೃದ್ಧ ತಂದೆ ತಾಯಿಗೆ ತಿಳಿದಿಲ್ಲ.

Nelamangala Accident: ಪುಟ್ಟಿಯ ಜೊತೆ 2 ತಿಂಗಳ ಹಿಂದಷ್ಟೇ 1 ಕೋಟಿಯ ಕಾರು ಖರೀದಿಸಿ ಸಂಭ್ರಮಿಸಿದ್ದ ಚಂದ್ರಮ್‌ ಯೇಗಪ್ಪಗೋಳ!

ಬೆಂಗಳೂರಿನಲ್ಲಿ 2018ರಲ್ಲಿ ಐಎಎಸ್‌ಟಿ ಹೆಸರಿನ ಕಂಪನಿ ಆರಂಭಿಸಿದ್ದ ಚಂದ್ರಮ್‌ ಪುಣೆಯಲ್ಲೂ ಕಂಪನಿ ಆರಂಭಿಸಿದ್ದರು. ಮತ್ತೊಂದು ಹೊಸ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆದಿದ್ದವು. ಶುಕ್ರವಾರ ಸಿಬ್ಬಂದಿ ಜೊತೆ ಮೀಟಿಂಗ್‌ ನಡೆಸಿ, ಕ್ರಿಸ್‌ಮಸ್‌ ಇರುವ ಕಾರಣ ಕೆಲ ದಿನ ತಾವು ಬೆಂಗಳೂರಿನಲ್ಲಿ ಇರೋದಿಲ್ಲ ಎಂದು ತಿಳಿಸಿ ಹೋಗಿದ್ದರು. ವಿಜಯಪುರಕ್ಕೆ ಹೋಗುವ ವೇಳೆ ನೆಲಮಂಗಲದ ಬಳಿ ಈ ಅಪಘಾತ ಸಂಭವಿಸಿದೆ.

Nelamangala Accident: ಮಹಾರಾಷ್ಟ್ರದಲ್ಲಿರುವ ವೃದ್ಧ ತಾಯಿಗಿನ್ನೂ ಮುಟ್ಟಿಲ್ಲ ಮಗನ ಸಾವಿನ ಸುದ್ದಿ!

ಕಾರ್‌ನಲ್ಲಿ ಮೃತಪಟ್ಟವರ ಪೈಕಿ ಚಂದ್ರಮ್‌ ಅವರ ಸಹೋದರಿ ವಿಜಯಲಕ್ಷ್ಮೀ ಹಾಗೂ ಆಕೆಯ 6 ವರ್ಷದ ಪುತ್ರ ಆರ್ಯ ಕೂಡ ಸೇರಿದ್ದಾರೆ. ವಿಜಯಲಕ್ಷ್ಮೀ ಅವರ ಪತಿ ಮಲ್ಲಿನಾಥ್‌ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

Photos: ನೆಲಮಂಗಲ ಭೀಕರ ಆಕ್ಸಿಡೆಂಟ್‌, IAST ಕಂಪನಿ ಮಾಲೀಕ ಚಂದ್ರಮ್‌ ಇಡೀ ಕುಟುಂಬ ಸಾವು

click me!