ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಟ ದರ್ಶನ್ 6 ತಿಂಗಳ ಬಳಿಕ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ರಿಲ್ಯಾಕ್ಸ್ ಮೂಡ್‌ನಲ್ಲಿದ್ದು, ಫಾರ್ಮ್‌ಹೌಸ್‌ನ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕಿಡ್ನಾಪ್ ಮಾಡಿ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಜಾಮೀನು ಮೇಲೆ ಬಿಡುಗಡೆ ಆಗಿದ್ದು, ಬರೋಬ್ಬರಿ 6 ತಿಂಗಳ ಬಳಿಕ ಶುಕ್ರವಾರ ಮೈಸೂರಿಗೆ ಆಗಮಿಸಿ ತಮ್ಮ ಫಾರಂ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಪ್ರಕರಣದ ಬಳಿಕ ಇಲ್ಲಿವರೆಗೆ ಬೆಂಗಳೂರು ಬಿಟ್ಟು ಹೋಗಲು ನ್ಯಾಯಾಲಯ ಅವಕಾಶ ನೀಡಿರಲಿಲ್ಲ. ಆದರೆ ಈಗ ಜ.5 ರವರೆಗೆ ಮೈಸೂರಿಗೆ ತೆರಳಲು ಅವಕಾಶ ನೀಡಿದೆ.
ತಾಯಿ, ಪತ್ನಿ ಜೊತೆ ರಿಲ್ಯಾಕ್ಸ್
ಈ ಹಿನ್ನೆಲೆಯಲ್ಲಿ ಮೈಸೂರು- ಟಿ. ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯಲ್ಲಿರುವ ವಿನೀಶ್ ದರ್ಶನ್ ಕಾಟೇವಾರಿ ಸ್ಟಡ್ ಫಾರಂ ಹೌಸ್ ಗೆ ಅಕ್ಕನ ಮಗ ಚಂದನ್ ,ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮೀ, ನಟ ಧನ್ವೀರ್, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜೊತೆಗೆ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ಇನ್ನೂ ನಟ ದರ್ಶನ್ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ.
undefined
ಮದುವೆಯಾದ ಬೆನ್ನಲ್ಲೇ ಭಾರಿ ಪ್ರಮಾಣದಲ್ಲಿ ಸಂಭಾವನೆ ಏರಿಸಿದ ಕೀರ್ತಿ ಸುರೇಶ್
ಸಿಸಿ ಕ್ಯಾಮಾರಾ ತೆಗೆಸಿದ ಡಿ ಬಾಸ್
ತಮ್ಮ ನೆಚ್ಚಿನ ಫಾರಂ ಹೌಸ್‌ನಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿರುವ ಹಿನ್ನೆಲೆಯಲ್ಲಿ ತನ್ನ ಫಾರಂ ಹೌಸ್ ನ ಗೇಟ್ ಗೆ ಸಿಬ್ಬಂದಿಗಳ ಕೈನಲ್ಲಿ ಬೀಗ ಹಾಕಿಸಿದ್ದಾರೆ. ತೋಟದ ಒಳಗಿನ ಯಾವ ದೃಶ್ಯವೂ ಸೆರೆಯಾಗದಂತೆ ಗೇಟ್ ಗೆ ಕಪ್ಪು ಬಣ್ಣದ ಟಾರ್ಪಲ್ ಹಾಕಿ ಎಚ್ಚರ ವಹಿಸಿದ್ದಾರೆ. ಕೊಲೆ ಆರೋಪಿ ದರ್ಶನ್ ಫಾರಂ ಹೌಸ್ ನಲ್ಲಿದ್ದ ಸಿಸಿ ಕ್ಯಾಮರಾವನ್ನ ತೆಗೆಸಿದ್ದಾರೆ. ಈ ಹಿಂದೆ ಫಾರಂ ಹೌಸ್ ಗೇಟ್ ಹಾಗೂ ಮರಗಳಲ್ಲಿ ಇದ್ದ ಸಿಸಿ ಕ್ಯಾಮರಾಗಳು ಒಂದು ಕೂಡ ಕಾಣಿಸುತ್ತಿಲ್ಲ. ಮಾತ್ರವಲ್ಲ ಫಾರಂ ಹೌಸ್ ಗೇಟ್ ಬಳಿ ಯಾವುದೇ ಸಿಸಿ ಕ್ಯಾಮರಾಗಳು ಕೂಡ ಇಲ್ಲ.
ಖಾಕಿ ಮಾದರಿ ಕಾಪಿ ಮಾಡಿದ ದರ್ಶನ್
ಇಷ್ಟು ಮಾತ್ರವಲ್ಲ ತೋಟದ ಒಳಗಿನ ಯಾವುದೇ ದೃಶ್ಯಗಳು ಕಾಣಬಾರದು ಎಂದು ಫಾರ್ಮ್ ಹೌಸ್ ಗೇಟನ್ನು ಕಪ್ಪು ಬಣ್ಣದ ಟಾರ್ಪಲ್ ನಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ. ಅನ್ನಪೂರ್ಣೇಶ್ವರಿ ಠಾಣೆ ಮಾದರಿಯಲ್ಲೇ ಫಾರಂ ಹೌಸ್ ಗೂ ಟಾರ್ಪಲ್ ಹಾಕಲಾಗಿದೆ. ದರ್ಶನ್ ಬಂಧನದ ಸಮಯದಲ್ಲಿ ಅನ್ನಪೂರ್ಣೇಶ್ವರಿ ಠಾಣೆಯ ಸುತ್ತ ಶಾಮಿಯಾನ ಹಾಕಿ ಗೇಟ್ ಬಂದ ಮಾಡಲಾಗಿತ್ತು. ಇದೀಗ ಪೊಲೀಸರ ಐಡಿಯಾವನ್ನೇ ನಟ ದರ್ಶನ್ ಕಾಫಿ ಮಾಡಿದ್ದು, ಫಾರಂಹೌಸ್ ನಿಂದ ಹೊರಬಂದಿಲ್ಲ.
ಅರಾಮಾಗಿದ್ದ ಡಿಬಾಸ್‌ಗೆ ಸಡನ್ ಏನಾಯ್ತ?
ಈ ಮಧ್ಯೆ ನಿನ್ನೆ ಅರಾಮಾಗಿದ್ದ ಕೊಲೆ ಆರೋಪಿ ದರ್ಶನ್ ದೀಢೀರ್ ಏನಾಯ್ತು? ಎಂಬ ಪ್ರಶ್ನೆ ಮೂಡಿದೆ. ನಿನ್ನೆ ಆರಾಮಾಗಿ ಓಡಾಡುತ್ತಿದ್ದ ಕೊಲೆ ಆರೋಪಿಗೆ ದರ್ಶನ್ ಇಂದು ಕುಂಟುತ್ತಾ ಬೆನ್ನು ಹಿಡಿದುಕೊಳ್ಳುತ್ತಾ ವಾಕಿಂಗ್ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಫಾರಂ ಹೌಸ್ ನಲ್ಲಿ ಬೆಳಗ್ಗೆ ವಾಕಿಂಗ್ ವೇಳೆ ಬೆನ್ನು ನೋವು ಕಾಲು ನೋವು ಕಾಣಿಸಿಕೊಂಡು ಕುಂಟುತ್ತಾ ಓಡಾಡುತ್ತಿರುವ ಕೊಲೆ ಆರೋಪಿ ದರ್ಶನ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮೊಬೈಲ್‌ನಲ್ಲಿ ಸೆರೆ ಹಿಡಿದು ಅಭಿಮಾನಿಗಳು ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದಾರೆ.