ಕೋವಿಡ್ ಪಾಸಿಟಿವ್ ಇದ್ರೂ ಮದುವೆಗೆ ಹಾಜರು : ನ್ಯಾಯವಾದಿ ವಿರುದ್ಧ FIR

Suvarna News   | Asianet News
Published : May 14, 2021, 09:48 AM ISTUpdated : May 14, 2021, 10:26 AM IST
ಕೋವಿಡ್ ಪಾಸಿಟಿವ್ ಇದ್ರೂ ಮದುವೆಗೆ ಹಾಜರು : ನ್ಯಾಯವಾದಿ ವಿರುದ್ಧ FIR

ಸಾರಾಂಶ

ಕೊರೋನಾ ಪಾಸಿಟಿವ್ ಬಂದರೂ ಮದುವೆ ಕಾರ್ಯಕ್ರಮಕ್ಕೆ ಹಾಜರು ದಕ್ಷಿಣ ಕನ್ನಡದ ವಕೀಲರೋರ್ವರ ವಿರುದ್ಧ FIR ದಾಖಲು ಮಾಣಿನಾಲ್ಕೂರು ಗ್ರಾಮದ ರಾಜೇಶ್ ಪೂಜಾರಿ ವಿರುದ್ದ ಎಫ್ ಐಆರ್ ದಾಖಲು

ಬಂಟ್ವಾಳ (ಮೇ.14):  ಕೊರೋನಾ ಪಾಸಿಟಿವ್ ಬಂದರೂ ಮದುವೆ ಕಾರ್ಯಕ್ರಮಕ್ಕೆ ಹಾಜರಾದ ಹಿನ್ನೆಲೆ  ಬಂಟ್ವಾಳದ ನ್ಯಾಯವಾದಿಯೋರ್ವರ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿನಾಲ್ಕೂರು ಗ್ರಾಮದ ರಾಜೇಶ್ ಪೂಜಾರಿ ವಿರುದ್ದ ಎಫ್ ಐಆರ್ ದಾಖಲಿಸಲಾಗಿದೆ. 

ಮೇ.10ರಂದು ಬಂಟ್ವಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ಬಂದಿತ್ತು. ಹೀಗಾಗಿ ಮೇ.11ರಂದು ರಾಜೇಶ್ ಮನೆಗೆ ತೆರಳಿದ ಆಶಾ ಕಾರ್ಯಕರ್ತೆಯರು ಕ್ವಾರೆಂಟೈನ್  ಆಗುವಂತೆ ಸೂಚಿಸಿದ್ದರು.

ದ.ಕ.ದಲ್ಲಿ ಕೊರೋನಾ ಸೋಂಕಿತರಲ್ಲಿ ಡೆಂಘೀ ಜ್ವರ, ಜಿಲ್ಲಾಡಳಿತಕ್ಕೆ ತಲೆನೋವು .

ಆದರೆ ಮೇ.13ರಂದು ಮತ್ತೆ ಪರಿಶೀಲನೆಗೆ ಎಂದು ಆಶಾ ಕಾರ್ಯಕರ್ತೆಯರು ಮನೆಗೆ ತೆರಳಿದ್ದಾಗ ರಾಜೇಶ್ ಕಾರ್ಕಳದಲ್ಲಿ ಮದುವೆಗೆ ಹೋಗಿರುವ ವಿಚಾರ ಗೊತ್ತಾಗಿದೆ.  ಈ ವೇಳೆ ಕರೆ ಮಾಡಿ ಮಾತನಾಡಿದಾಗ ರಾಜೇಶ್ ಉಡಾಫೆ ವರ್ತನೆ ತೋರಿದ್ದಾರೆ. 

ದಕ್ಷಿಣ ಕನ್ನಡ : ಲಾಠಿ ಎತ್ತದೆ ಪರಿಸ್ಥಿತಿ ನಿಯಂತ್ರಿಸುತ್ತಿರುವ ಪೊಲೀಸರು

ಪಿಎಚ್ ಸಿ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೂ ಖಾಸಗಿ ಆಸ್ಪತ್ರೆಯಲ್ಲಿ ಮತ್ತೆ ಪರೀಕ್ಷೆ ಮಾಡಿಸಿದ್ದೇನೆ.  ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ಬೇರೆಯವರಿಗೆ ನ್ಯಾಯ ಒದಗಿಸಿಕೊಡುವ ವ್ಯಕ್ತಿಯೇ ಈ ರೀತಿ ವರ್ತನೆ ತೋರಿಸಿದ್ದು ಆಕ್ರೋಶ ವ್ಯಕ್ತವಾಗಿದೆ. 

ಈ ನಿಟ್ಟಿನಲ್ಲಿ ರಾಜೇಶ್ ಪೂಜಾರಿ ವಿರುದ್ಧ ಪಂಚಾಯತ್ ಪಿಡಿಓ ವಸಂತಿ ಎಂಬವರ ದೂರಿನ ಆಧಾರದ ಮೇಲೆ  ಪ್ರಕರಣ ದಾಖಲಿಸಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!