ಚಿತ್ರದುರ್ಗದ ರೆಮ್‌ಡೆಸಿವಿರ್‌ ಟ್ವೀಟ್‌ಗೆ ಮುಂಬೈನಿಂದ ಸೋನು ಸೂದ್‌ ಸ್ಪಂದನೆ

Kannadaprabha News   | Asianet News
Published : May 14, 2021, 07:30 AM IST
ಚಿತ್ರದುರ್ಗದ ರೆಮ್‌ಡೆಸಿವಿರ್‌ ಟ್ವೀಟ್‌ಗೆ ಮುಂಬೈನಿಂದ ಸೋನು ಸೂದ್‌ ಸ್ಪಂದನೆ

ಸಾರಾಂಶ

* ಸೋನು ಸೂದ್‌ಗೆ ಧನ್ಯವಾದ ಹೇಳಿದ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ * ಕೊರೋನಾ ಸಂಕಷ್ಟ ಕಾಲದಲ್ಲಿ ಕಷ್ಟದಲ್ಲಿರುವವರ ನೋವಿಗೆ ಮಿಡಿಯುತ್ತಿರುವ ಸೋನು ಸೂದ್‌ * ಲಸಿಕೆ ವ್ಯವಸ್ಥೆ ಮಾಡಲಾಗಿದ್ದು ತಲುಪಿಸಲಾಗಿದೆ ಎಂದು ಪ್ರತಿಕ್ರಿಯೆ

ಚಿತ್ರದುರ್ಗ(ಮೇ.14): ಬಾಲಿವುಡ್‌ ನಟ ಸೋನು ಸೂದ್‌ ಕೊರೋನಾ ಸಂಕಷ್ಟ ಕಾಲದಲ್ಲಿ ಕಷ್ಟದಲ್ಲಿರುವವರ ನೋವಿಗೆ ಮಿಡಿಯುತ್ತಿರುವ ಕಾರ್ಯ ಮುಂದುವರೆದಿದ್ದು, ಇದೀಗ ರೆಮ್‌ಡೆಸಿವಿರ್‌ ಲಸಿಕೆ ತುರ್ತಾಗಿ ಬೇಕೆಂದು ಚಿತ್ರದುರ್ಗದ ಸೋಂಕಿರೊಬ್ಬರು ಮಾಡಿದ ಟ್ವೀಟ್‌ಗೆ ಸ್ಪಂದಿಸಿದ್ದು, ಲಸಿಕೆ ಕಳುಹಿಸಿಕೊಟ್ಟಿರುವುದಾಗಿ ರೀ ಟ್ವೀಟ್‌ ಮಾಡಿದ್ದಾರೆ.

ಇದನ್ನು ಗಮನಿಸಿದ ಕ್ರಿಕೆಟಿಗ ಹರ್ಭಜನ್‌ ಸಿಂಗ್‌, ಸೂದ್‌ಗೆ ಧನ್ಯವಾದ ಹೇಳಿದ್ದಾರೆ. ಚಿತ್ರದುರ್ಗದ ಬಸಪ್ಪ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ ವಿನಯ್‌ ಎಂಬವರಿಗೆ ರೆಮ್‌ಡೆಸಿವಿರ್‌ ಬೇಕಾಗಿದ್ದು, ಈ ಕುರಿತು ಅವರು ಟ್ವೀಟ್‌ ಮಾಡಿದ್ದರು. ಇದನ್ನು ಗಮಸಿದ ಸೂದ್‌, ಲಸಿಕೆ ವ್ಯವಸ್ಥೆ ಮಾಡಲಾಗಿದ್ದು ತಲುಪಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

"

ಕನ್ನಡಿಗನಿಗೆ ನೆರವು ಕೇಳಿದ ಭಜ್ಜಿ; ಡೋಂಟ್‌ ವರಿ ಎಂದ ಸೋನು ಸೂದ್‌..!

ಈ ಕುರಿತು ಪ್ರತಿಕ್ರಿಯಿಸಿರುವ ಸೋಂಕಿತರ ಪತ್ನಿ ಪೂಜಾ, ಸದ್ಯ ಇನ್ನೂ ಲಸಿಕೆ ಕೈ ಸೇರಿಲ್ಲ ಎಂದಲ್ಲ ನಾಳೆ ಸೇರುವ ವಿಶ್ವಾಸವಿದೆ ಎಂದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು