ಮದರಸಾಗಳಲ್ಲಿಯೂ ಹೊಸ ಶಿಕ್ಷಣ ಪದ್ಧತಿ: ಕರ್ನಾಟಕದ 20 ಸಾವಿರ ಶಾಲೆಗಳಲ್ಲಿ NEP ಜಾರಿ: ಸಚಿವ ನಾಗೇಶ್

By Suvarna News  |  First Published Mar 19, 2022, 3:29 PM IST

ಹಿಜಾಬ್‌ಗೋಸ್ಕರ ಶಿಕ್ಷಣವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ


ಉತ್ತರಕನ್ನಡ (ಮಾ. 19): ಗುಜರಾತ್‌ನಲ್ಲಿ 6ರಿಂದ 12ನೇ ತರಗತಿಯ ಪಠ್ಯದಲ್ಲಿ ಭಗವದ್ಗೀತೆ (Bhagavad Gita) ಸೇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಕರ್ನಾಟಕದಲ್ಲೂ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೊಳಿಸುವ ಕುರಿತು ಚರ್ಚೆ ಆರಂಭವಾಗಿದೆ. ಈ ಬೆನ್ನಲ್ಲೇ  ಉತ್ತರಕನ್ನಡ (Uttara Kannada) ಜಿಲ್ಲೆಯ ಗೋಕರ್ಣದಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ (BC Nagesh) ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಕೊರತೆ ಇರೋದು ಎಲ್ಲರಿಗೂ ಅರಿವಾಗಿದೆ ಎಂದು ಹೇಳಿದ್ದಾರೆ. 

"ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ನೈತಿಕ ಶಿಕ್ಷಣದ ಕ್ಲಾಸನ್ನು ಮಾಡುತ್ತೇವೆ, ನೈತಿಕ ಶಿಕ್ಷಣದಲ್ಲಿ ಏನೇನು ಇರಬೇಕು ಎಂದು ಶಿಕ್ಷಣ ತಜ್ಞರು ನಿರ್ಧರಿಸಲಿದ್ದಾರೆ.  ಸಮಿತಿಯಲ್ಲಿರುವ ಶಿಕ್ಷಣ ತಜ್ಞರ ಸಲಹೆ  ಮೇರೆಗೆ ಭಗವದ್ಗೀತೆ ಅಳವಡಿಕೆ ಮಾಡಲಾಗುವುದು, ಭಗವದ್ಗೀತೆ ರಿಲೀಜಿಯಸ್ ಅಲ್ಲ" ಎಂದು ಸಚಿವರು ಹೇಳಿದ್ದಾರೆ. 

Tap to resize

Latest Videos

ಇದನ್ನೂ ಓದಿ: ನಾವು ಹಿಂದೂ ಧರ್ಮದ ಮೇಲೆ ‌ನಂಬಿಕೆ ಇಟ್ಟವರು: ಸಿದ್ದರಾಮಯ್ಯ

ಮದರಸಾಗಳಲ್ಲಿ ಹೊಸ ಶಿಕ್ಷಣ ಪದ್ಧತಿ:  ಇನ್ನು ಒಂದಷ್ಟು ಕಡೆ ಮದರಸಾಗಳಲ್ಲಿ (Madrasa) ಹೊಸ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ. "ಅಲ್ಪಸಂಖ್ಯಾತರ ಮಕ್ಕಳು ಇಂದಿನ ಶಿಕ್ಷಣ ಪದ್ಧತಿಯಿಂದ ದೂರ ಉಳಿಯಬಾರದು. ಎಲ್ಲಾ ಮಕ್ಕಳಂತೆ ಈ‌ ಶಿಕ್ಷಣ ಪದ್ಧತಿಗೆ ಅವರು ಕೂಡಾ ಬರಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚನೆ ಮಾಡಲಿದ್ದೇವೆ.  ಇತ್ತೀಚೆಗೆ ಮದರಸದಿಂದ ಹೆಚ್ಚಾಗಿ ನಮ್ಮ ಸರಕಾರಿ ಶಾಲೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದಿನ ಪ್ರಪಂಚದಲ್ಲಿ ಬದುಕುವುದಾದರೇ ಈ ಶಿಕ್ಷಣವನ್ನು ಪಡೆಯಲೇಬೇಕು. ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ" ಎಂದು ನಾಗೇಶ್‌ ತಿಳಿಸಿದ್ದಾರೆ. 

ರಾಜ್ಯದ 20 ಸಾವಿರ ಶಾಲೆಯಲ್ಲಿ ಎನ್ಇಪಿ: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪಾಲಕರಲ್ಲಿ ಗೊಂದಲ ಹಿನ್ನೆಲೆ  ರಾಜ್ಯದ 20 ಸಾವಿರ ಶಾಲೆಯಲ್ಲಿ ಮಾತ್ರ ಎನ್ಇಪಿ ಶಿಕ್ಷಣ (National Education Policy) ಪ್ರಾರಂಭ ಮಾಡುತ್ತೇವೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. "ಉಳಿದ ಶಾಲೆಗಳಲ್ಲಿ ಈಗ ಹೇಗೆ ನಡೆಯುತ್ತದೆಯೋ ಹಾಗೆ ಇರುತ್ತೆ. ನಮ್ಮಲ್ಲಿ 48 ಸಾವಿರ ಶಾಲೆಗಳಿದ್ದರೂ  ಮಕ್ಕಳ ಸಂಖ್ಯೆ ಕಡಿಮೆಯಿದೆ. ಮಕ್ಕಳು ಹೆಚ್ಚು ಇರುವಲ್ಲಿ ಈ ಎನ್‌ಇಪಿ ಪ್ರಾರಂಭ ಮಾಡುತ್ತೇವೆ ಹಾಗೂ ಸಂಖ್ಯೆ ಹಾಗೂ ಸಾಕ್ಷರತೆಗೆ ಒತ್ತನ್ನು ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್, ಕಾಶ್ಮೀರಿ ಫೈಲ್ ಆಯ್ತು ಈಗ ಭಗವದ್ಗೀತೆ ಪ್ರಲಾಪ, ರಾಜ್ಯ ರಾಜಕಾರಣದಲ್ಲಿ ಮತ್ತೆ ಕಿಡಿ

ಶಿಕ್ಷಣ ಹಾಳು ಮಾಡಿಕೊಳ್ಳಬೇಡಿ:  ಇನ್ನು ರಾಜ್ಯದಲ್ಲಿ ಭುಗಿಲೆದ್ದು ಅಂತಾರಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ  ಹಿಜಾಬ್ ವಿವಾದದ (Karnataka Hijab Row) ಬಗ್ಗೆ ಮಾತನಾಡಿದ ಬಿ. ಸಿ. ನಾಗೇಶ್‌ ಹಿಜಾಬ್ ಗೋಸ್ಕರ ಶಿಕ್ಷಣವನ್ನು ಹಾಳು ಮಾಡಿಕೊಳ್ಳಬೇಡಿ ಎಂದಿದ್ದಾರೆ. "ಬೇರೆ ಬೇರೆ ವಿಚಾರದಲ್ಲಿ ಹೈಕೋರ್ಟ್ ಆದೇಶ ನೀಡಿದೆ. ಶಾಲೆಗೆ ಬರಬೇಕಾದರೆ ಹಿಜಾಬ್ ಬಿಟ್ಟು ಬರಬೇಕು. ಹಲವು ಬಾರಿ ಅಧಿಕಾರಿಗಳು, ಮುಸ್ಲಿಂ ನಾಯಕರು ಮನವಿ ಮಾಡಿದ್ದಾರೆ. ಶೇ. 99.9 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದು, ಕೇವಲ ಶೇ.1ರಷ್ಟು ಮಾತ್ರ ಬರುತ್ತಿಲ್ಲ. ಅವರನ್ನು ಮತ್ತೆ ಶಿಕ್ಷಣದೆಡೆಗೆ ತರುವಂತಹ ಪ್ರಯತ್ನ ಮಾಡುತ್ತೇವೆ" ಎಂದು ಹೇಳಿದ್ದಾರೆ. 

ಬಿಜೆಪಿ ಮಾದರಿ ಮೂಲಕವೇ ನಾವು ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿರುವ ಸಚಿವ ನಾಗೇಶ್ "ಬಿಜೆಪಿ ವೈಚಾರಿಕ ಸಂಘಟನೆ ವಿಚಾರ ಒಪ್ಪಿಕೊಂಡು ಬಂದವರಿಗೆ ಸ್ವಾಗತಿಸುತ್ತೇವೆ. ಹೊರಟ್ಟಿಯಂತಹ ಹಿರಿಯರ ಸೇರ್ಪಡೆಗೆ ಪಕ್ಷದ ಹಿರಿಯರು, ಸಂಘಟನೆ ನಿಶ್ಚಯ ಮಾಡಲಿದ್ದಾರೆ"  ಎಂದು ಹೇಳಿದ್ದಾರೆ. 

click me!