ತುಮಕೂರು ಘಟನೆ ಬೆನ್ನಲ್ಲೇ ಕರ್ನಾಟಕದಲ್ಲಿ ಮತ್ತೆರಡು ಕಡೆ ಬಸ್‌ ಅಪಘಾತ!

By Suvarna News  |  First Published Mar 19, 2022, 2:48 PM IST

ಬೀದರ್‌ ಹಾಗೂ ವಿಜಯನಗರದಲ್ಲಿ ಬಸ್‌ ಅಪಘಾತಗಳು ಸಂಭವಿಸಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. 


ಬೆಂಗಳೂರು (ಮಾ. 19):  ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 8 ಮಂದಿ ಮೃತಪಟ್ಟು 25ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ತುಮಕೂರು (Tumkur) ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಶನಿವಾರ ನಡೆದಿದೆ. ತುಮಕೂರಿನ ಪಾವಗಡದ ಘಟನೆ ಬೆನ್ನಲ್ಲೇ ರಾಜ್ಯದ ಇನ್ನೆರಡು ಕಡೆ ಬಸ್‌ ಅಪಘಾತಗಳು ಸಂಭವಿಸಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.ರಾಜ್ಯದ ಬೀದರನಲ್ಲಿ (Bidar) ಖಾಸಗಿ ಬಸ್‌ ಪಲ್ಟಿಯಾಗಿದ್ದರೆ ವಿಜಯನಗರದಲ್ಲಿ (Vijayanagar) ಸರ್ಕಾರಿ ಕೆಎಸ್‌ಆರ್‌ಟಿಸಿ ಬಸ್‌ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಹಳ್ಳಕ್ಕಿಳಿದ ಘಟನೆ ನಡೆದಿದೆ. 

ಬೀದರ್: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಬೀದರ್ ತಾಲೂಕಿನ ಅಣದೂರು ವಾಡಿ ಬಳಿ ಘಟನೆ ನಡೆದಿದ್ದು  8 ಜನರಿಗೆ ಗಾಯಗಳಾಗಿವೆ.  ಬೆಂಗಳೂರಿನಿಂದ ಬೀದರ್‌ಗೆ ಬರುತ್ತಿದ್ದ ಎಸ್‌ಆರ್‌ಎಸ್ ಬಸ್ಸಿನಲ್ಲಿ 6 ಜನ ಪ್ರಯಾಣಿಕರು ಹಾಗೂ ಚಾಲಕ ನಿರ್ವಾಹಕ  ಸೇರಿ ಒಟ್ಟು 8 ಪ್ರಯಾಣಿಸುತ್ತಿದ್ದರು.  

Tap to resize

Latest Videos

undefined

ಬೈಕ್ ಸವಾರನನ್ನ ಅಪಘಾತದಿಂದ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಚಾಲಕ ಹಾಗೂ ನಿರ್ವಾಹಕನಿಗೆ ಗಂಭೀರ ಗಾಯಗಳಾಗಿದ್ದು ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಬೀದರ್‌ನ ಬ್ರೀಮ್ಸ್ ಆಸ್ಪತ್ರೆ ‌ದಾಖಲಿಸಿ‌ ಚಿಕಿತ್ಸೆ ನೀಡಲಾಗುತ್ತಿದೆ. 

ಇದನ್ನೂ ಓದಿ: Tumakuru Accident: ಅಪಘಾತದಲ್ಲಿ ಮಡಿದ ಕುಟುಂಬಸ್ಥರಿಗೆ ದೊಡ್ಡ ಮೊತ್ತದ ಪರಿಹಾರ ನೀಡಿ: HDK

ವಿಜಯನಗರ:  ಇನ್ನು ಸರ್ಕಾರಿ ಸಾರಿಗೆ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಹಳ್ಳಕ್ಕಿಳಿದ ಘಟನೆ ವಿಜಯನಗರದಲ್ಲಿ ನಡೆದಿದೆ.  ವಿಜಯನಗರದ ಕೊಟ್ಟೂರು ತಾಲೂಕಿನ ಜಾಗಟಗೇರೆ ಗ್ರಾಮದ ಹೊರವಲಯದಲ್ಲಿ ಘಟನೆ ಸಂಭವಿಸಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. 15 ರಿಂದ 18 ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಬೆಂಗಳೂರಿನಿಂದ ಕೊಟ್ಟೂರು ಪಟ್ಟಣಕ್ಕೆ ಆಗಮಿಸುತ್ತಿದ್ದ ಸರ್ಕಾರಿ ಸಾರಿಗೆ ಬಸ್  ಗ್ರಾಮದ ಹೊರವಲಯದಲ್ಲಿ  ಹಳ್ಳಕ್ಕಿಳಿದಿದೆ. 

ಒಬ್ಬರನ್ನು ಬಳ್ಳಾರಿ ಮತ್ತೊಬ್ಬರನ್ನು ದಾವಣಗೆರೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.  ಕೊಟ್ಟೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಯಾಣಿಕರು ಮೆನೆಗೆ ತೆರಳಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಇದನ್ನೂ ಓದಿRoad Accident: ಮರಣದ ಮನೆಗೆ ಹೋಗಿದ್ದವರೆ ಮಸಣಕೆ.. ಬೆಳ್ತಂಗಡಿ ಭೀಕರ ಅಪಘಾತ, ಸಹೋದರರ ದುರ್ಮರಣ

ತುಮಕೂರಿನಲ್ಲಿ ಸ್ಥಳದಲ್ಲೇ 8 ಮಂದಿ ದುರ್ಮರಣ: ಇನ್ನು ಖಾಸಗಿ ಬಸ್ ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ  ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ತುಮಕೂರಿನ ದರ್ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಗಾಯಾಳುಗಳನ್ನ ಸ್ಥಳೀಯರು ರಕ್ಷಿಸಿ ಆಸ್ಪತ್ರೆ ದಾಖಲಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

ಘಟನಾ ಸ್ಥಳಕ್ಕೆ ಪಾವಗಡ ಪೊಲೀಸರು ದೌಡಾಯಿಸಿದ್ದಾರೆ. ಬಸ್‌ನಲ್ಲಿ 80ಕ್ಕೂ ಹಚ್ಚು ಜನರು ಪ್ರಯಾಣಿಸುತ್ತಿದ್ದರು. ಬಸ್‌ನ ಟಾಪ್ ಮೇಲೂ ಕೂಡ ಕುಳಿತಿದ್ದರು ಎಂದು ತಿಳಿದು ಬಂದಿದೆ. ಬಸ್ ಪಲ್ಟಿಯಾಗುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ. ವೈ.ಎನ್ ಹೊಸಕೋಟೆ ಮೂಲದ ಬಸ್ ಇದಾಗಿದ್ದು ಬಸ್ ಮಾಲೀಕನ ಹೆಸರು ಶ್ರೀನಿವಾಸ್ ಎಂದು ತಿಳಿದು ಬಂದಿದೆ.

ದುರ್ಘಟನೆಯಲ್ಲಿ ವಿದ್ಯಾರ್ಥಿಗಳೂ ಕೂಡ ಮೃತಪಟ್ಟಿದ್ದಾರೆ. ಮೃತರ ಹೆಸರು ಅಮೂಲ್ಯ ಪೋತಗಾನಹಳ್ಳಿ (16), ಅಜಿತ್ ಸೂಲನಾಯಕನಹಳ್ಳಿ(18), ಕಲ್ಯಾಣ್ (18) ವೈ.ಎನ್ ಹೊಸಕೋಟೆ, ಶಹನವಾಜ್ (18) ಬೆತ್ತರಹಳ್ಳಿ ಅಂತ ಗುರುತಿಸಲಾಗಿದೆ. ಇನನ್ನುಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶಾಸಕ ವೆಂಕಟರಮಣಪ್ಪ ಭೇಟಿ ನೀಡಿ, ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ವೈದ್ಯರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

click me!