ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ನಸೀರ್ ಅಹಮದ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ಲಭಿಸಿದೆ. ಕೆಜಿಎಫ್ ಮೂಲದವರಾದ ನಸೀರ್ ಅಹಮದ್ ಅವರು ಕೋಲಾರ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ರಾಜಕಾರಣಿ.
ಕೋಲಾರ(ಜೂ.18): ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ನಸೀರ್ ಅಹಮದ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ಲಭಿಸಿದೆ. ಕೆಜಿಎಫ್ ಮೂಲದವರಾದ ನಸೀರ್ ಅಹಮದ್ ಅವರು ಕೋಲಾರ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ರಾಜಕಾರಣಿ.
ಈ ಹಿಂದೆ ಅವರು ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿದರೂ ಸೋಲನ್ನು ಅನುಭವಿಸಿದರು, ಇದರಿಂದ ಬೇಸರಗೊಂಡ ಅವರು 1989 ಬೆಂಗಳೂರಿನ ಭಿನ್ನಿಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಬಾರಿ ವಿಧಾನಸಭಾ ಸದಸ್ಯರಾಗಿ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದರು. ಕಾಲ ನಂತರದ ಬೆಳವಣಿಗೆಗಳಿಂದ ಅವರು ಭಿನ್ನಿಪೇಟೆ ಕ್ಷೇತ್ರವನ್ನೂ ಬಿಡಬೇಕಾಯಿತು.
undefined
ನಾಮಪತ್ರಕ್ಕೆ ಇಂದು ಕೊನೆ ದಿನ; ಜೆಡಿಎಸ್‌ನಿಂದ ಅಚ್ಚರಿ ಅಭ್ಯರ್ಥಿ ಕಣಕ್ಕೆ
ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದರು, ಎರಡು ಬಾರಿ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್‌ಗೆ ಆಯ್ಕೆ ಆಗಿದ್ದರು. ಇದು ನಾಲ್ಕನೇ ಬಾರಿಗೆ ವಿಧಾನ ಪರಿಷತ್ ಚುನಾವಣೆ ಎದುರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ನಸೀರ್ ಅವರ ರಾಜಕೀಯ ಬೆಳವಣಿಗೆಯನ್ನು ಕೆ.ಎಚ್.ಮುನಿಯಪ್ಪ ಸಹಿಸಲಿಲ್ಲ,ಇದರಿಂದಾಗಿ ನಸೀರ್ ಅಹಮದ್ ಅವರು ಮುನಿಯಪ್ಪ ವಿರೋಧಿ ಗುಂಪಿನಲ್ಲಿ ಸೇರಿಕೊಂಡರು.
ಇದೇ ಕಾರಣಕ್ಕೆ ಕಳೆದ ಲೋಕ ಸಭಾ ಚುನಾವಣೆ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜತೆಗೂಡಿ ಕೆ.ಎಚ್.ಮುನಿಯಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಮುನಿಯಪ್ಪನವರಿಗೇ ಟಿಕೆಟ್ ಕೊಟ್ಟಿದ್ದರಿಂದ ಸಿಡಿದೆದ್ದ ಅವರ ಗುಂಪು ಲೋಕಸಭೆ ಚುನಾವಣೆಯಲ್ಲಿ ಮುನಿಯಪ್ಪ ಅವರನ್ನು ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ MLC ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಜೆಡಿಎಸ್ ಪಕ್ಷದಿಂದ ಗೋವಿಂದರಾಜ್ ಮತ್ತು ಕಾಂಗ್ರೆಸ್ ನಸೀರ್ ಅಹಮದ್ ಅವರಿಗೆ ಸೀಟು ಸಿಕ್ಕಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಹರ್ಷವನ್ನುಂಟು ಮಾಡಿದ್ದು ಜಿಲ್ಲೆಯ ಇಬ್ಬರು ವಿಧಾನ ಪರಿಷತ್‌ಗೆ ಹೋಗಲು ಅವಕಾಶ ಸಿಕ್ಕಿದಂತಾಗಿದೆ.