ಶಾಸಕ ಪರಮೇಶ್ವರ ನಾಯ್ಕ ಅವರನ್ನು ‘ಎ 2’ ಹಾಗೂ ಶಾಸಕರ ಎರಡನೇ ಮಗ ಭರತ್ ಅವರನ್ನು ‘ಎ 1’ ಆರೋಪಿ ಎಂದು ಪರಿಗಣಿಸಿ ಪ್ರಕರಣ ದಾಖಲು| ಆರೋಪಿಗಳ ವಿರುದ್ಧ ಸೆಕ್ಷನ್ 269, 270, 271, 136 ಅಡಿಯಲ್ಲಿ ಪ್ರಕರಣ ದಾಖಲು|
ಬಳ್ಳಾರಿ(ಜೂ.18): ಮಗನ ಮದುವೆಗೆ ಸಾವಿರಾರು ಜನರನ್ನು ಸೇರಿಸಿ ಕೊರೋನಾ ನಿಯಂತ್ರಣದ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಹಡಗಲಿ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶಾಸಕ ಪರಮೇಶ್ವರ ನಾಯ್ಕ ಅವರನ್ನು ‘ಎ 2’ ಹಾಗೂ ಶಾಸಕರ ಎರಡನೇ ಮಗ ಭರತ್ ಅವರನ್ನು ‘ಎ 1’ ಆರೋಪಿ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಸೆಕ್ಷನ್ 269, 270, 271, 136 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
undefined
ಅದ್ಧೂರಿ ಮದುವೆ: ಕಾಂಗ್ರೆಸ್ ಶಾಸಕ, 'ಮದು'ಮಗನ ವಿರುದ್ಧ ಕೇಸ್ ಬುಕ್
ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು ಹರಪನಹಳ್ಳಿ ತಾಲೂಕು ಲಕ್ಷ್ಮೇಪುರದ ತಮ್ಮ ಸ್ವಗ್ರಾಮದಲ್ಲಿ ಜೂ.15ರಂದು ಹಿರಿಯ ಮಗನ ಮದುವೆಗೆ ಸಾವಿರಾರು ಜನರನ್ನು ಸೇರಿಸಿದ್ದರು. ಇದರಿಂದ ಕೊರೋನಾ ನಿಯಂತ್ರಣಕ್ಕೆ ಹಾಕಿರುವ ನಿಯಮ ಉಲ್ಲಂಘಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪ್ರಕರಣ ದಾಖಲಿಸಲು ಹರಪನಹಳ್ಳಿ ತಹಸೀಲ್ದಾರ್ ನಾಗವೇಣಿ ಅವರು ಅರಸಿಕೇರಿ ಠಾಣೆಗೆ ದೂರು ಸಲ್ಲಿಸಿದರು. ಆದರೆ, ತಾಂತ್ರಿಕ ಕಾರಣಗಳಿಂದ ಎಫ್‌ಐಆರ್ ದಾಖಲು ಆಗಿರಲಿಲ್ಲ. ಆದರೆ, ಬುಧವಾರ ದೂರು ದಾಖಲಾಗಿದೆ.