ರಾಜ್ಯದ 15 ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ 6 ಸ್ಥಾನಗಳಲ್ಲಿ ಗೆಲ್ಲುತ್ತಾರೆ ಎಂದು ಗುಪ್ತಚರ ವರದಿ ಹೇಳಿದೆಯಂತೆ. ಅದಕ್ಕೆ ಸಿಎಂ ಯಡಿಯೂರಪ್ಪ ಗಾಬರಿಯಿಂದ ಹೆಚ್ಚು ಸ್ಥಾನ ಗೆಲ್ಲಲು ನಾಗಾಲೋಟದಲ್ಲಿ ಹೋಗುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ಮಂಡ್ಯ(ನ.30): ರಾಜ್ಯದ 15 ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ 6 ಸ್ಥಾನಗಳಲ್ಲಿ ಗೆಲ್ಲುತ್ತಾರೆ ಎಂದು ಗುಪ್ತಚರ ವರದಿ ಹೇಳಿದೆಯಂತೆ. ಅದಕ್ಕೆ ಸಿಎಂ ಯಡಿಯೂರಪ್ಪ ಗಾಬರಿಯಿಂದ ಹೆಚ್ಚು ಸ್ಥಾನ ಗೆಲ್ಲಲು ನಾಗಾಲೋಟದಲ್ಲಿ ಹೋಗುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ತಾಲೂಕಿನ ಕಿಕ್ಕೇರಿ ಹೋಬಳಿಯ ಆನೆಗೂಳ, ಐಕನಹಳ್ಳಿ, ತುಳಸಿ, ಸಾಸಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್ .ದೇವರಾಜು ಪರ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಪ್ರತಿದಿನ ಇಂಟಲಿಜೆನ್ಸಿ ರಿಪೋರ್ಟ್ ಹೋಗ್ತಿದೆ. ಗುಪ್ತಚರ ವರದಿ ಪ್ರಕಾರ ಬಿಜೆಪಿ 6 ಸ್ಥಾನ ಗೆಲ್ಲುತ್ತಾರೆ ಎಂದು ಹೇಳಿದೆ. ಸಿಎಂ ಗಾಬರಿಯಿಂದ ನಾಗಾಲೋಟದಲ್ಲಿ ಹೋಗ್ತಿದ್ದಾರೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದಿದ್ದಾರೆ.
ಬಿಎಸ್‌ವೈ ತವರಿನಲ್ಲಿ ಬಿಜೆಪಿಗೆ ಕಠಿಣ ಪರೀಕ್ಷೆ; 2 ಸೋಲಿನ ಅನುಕಂಪದ ನಿರೀಕ್ಷೆಯಲ್ಲಿ ಕಾಂಗ್ರೆಸ್
ತಾನು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ. 2008ರಲ್ಲಿ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಬಿ.ಎಲ್. ದೇವರಾಜುವಿಗೆ ಬಿ ಫಾರಂ ಕೊಟ್ಟೆ. ಆದರೆ, ನಾರಾಯಣಗೌಡ ಬಿಡದೆ ಕಾಡಿ ದೇವರಾಜುವಿಗೆ ಕೊಟ್ಟಟಿಕೆಟ್ ತಾನು ಪಡೆದುಕೊಂಡ. ಬೇಜಾರು ಮಾಡಿಕೊಳ್ಳದೆ ದೇವರಾಜು ನಾರಾಯಣನಿಗಾಗಿ ದುಡಿದು ಗೆಲ್ಲಿಸಿಕೊಟ್ಟ. ಆದರೆ, ಗೆದ್ದ ನಾರಾಯಣಗೌಡ ಪಕ್ಷಕ್ಕೆ ದ್ರೋಹ ಮಾಡಿ ಓಡಿಹೋದ ಎಂದು ಕಿಡಿಕಾರಿದ್ದಾರೆ.
ನಾರಾಯಣ ಗೌಡ ಮಾತು ಕೇಳಿದ್ರೆ ಹೇಸಿಗೆಯಾಗುತ್ತೆ: ದೇವೇಗೌಡ
ಸೋನಿಯಾಗಾಂಧಿ, ಶರದ್ ಪವಾರ್ ಮಹಾರಾಷ್ಟ್ರದ ಶಿವಸೇನೆಗೆ ಬೆಂಬಲಕೊಡುತ್ತಾರೆ. ಅದರೆ, ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿವಿಗೆ ಎಲ್ಲರೂ ತೊಡರುಗಾಲು ಹಾಕುತ್ತಾರೆ. ನೀರಾವರಿ ಮಂತ್ರಿಯಾಗಿದ್ದಾಗ ಆದಿಚುಂಚನಗಿರಿ ಆಶೀರ್ವಾದಲ್ಲಿ ಜಿಲ್ಲೆಗೆ ನೀರಾವರಿ ವ್ಯವಸ್ಥೆ ಮಾಡಿದೆ. ಸಕ್ಕರೆ ಕಾರ್ಖಾನೆ ಕೊಟ್ಟೆ. ಕ್ಷೇತ್ರಕ್ಕೆ ಬಂದರೆ ಎಲ್ಲೆಡೆ ಹಸಿರಿದೆ. ಸಂತಸವಾಗುತ್ತದೆ. ಉಳುಮೆ ಮಾಡುವ ಎಲ್ಲ ರೈತರ ಬದುಕು ಬಂಗಾರವಾಗಬೇಕು ಎನ್ನುವುದು ತನ್ನ ಆಸೆಯಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲು ಜೆಡಿಎಸ್ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಅಕ್ಕ-ತಂಗಿಯರಿಗೆ ನೋವಾಗಿದ್ರೆ ಕ್ಷಮೆ ಕೇಳ್ತೀನಿ: ಕಾಮಾಟಿಪುರ ಹೇಳಿಕೆಗೆ ತಮ್ಮಣ್ಣ ಸ್ಪಷ್ಟನೆ
ಇಡೀ ದಿನ ಕೆ.ಆರ್.ಪೇಟೆಯಲ್ಲಿ ಅದ್ದು ರಾತ್ರಿ 10ಗಂಟೆವರೆಗೂ ಕ್ಷೇತ್ರದ 10 ಕಡೆಗಳಲ್ಲಿ ಪ್ರಚಾರ ಮಾಡಲಿದ್ದೇನೆ. ನೆನ್ನೆ ಹುಣಸೂರು, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಪ್ರಚಾರ ಮಾಡಿದ್ದೇನೆ. ಇವತ್ತು ಕೆ.ಆರ್.ಪೇಟೆ ಮುಗಿಸಿ ನಾಳೆ ಚಿಕ್ಕಬಳ್ಳಾಪುರ, ನಾಳಿದ್ದು ಗೋಕಾಕ್‌ಗೆ ಹೋಗಲಿದ್ದೇನೆ. 15 ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ 12 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಮಾಟಿಪುರ ಹೇಳಿಕೆ: ಡಿಸಿ ತಮ್ಮಣ್ಣ ವಿರುದ್ಧ ಮುಂಬೈ ಸೇರಿ ಸ್ಥಳೀಯ ಮತದಾರರ ಆಕ್ರೋಶ
ದಾರಿಯುದ್ದಕ್ಕೂ ಮಹಿಳೆಯರು ಮಾಜಿ ಪ್ರಧಾನಿ ದೇವೇಗೌಡರಿಗೆ ಆರತಿ ಬೆಳಗಿದರು. ಕಾಲಿಗೆ ಬಿದ್ದು ನಮಸ್ಕರಿಸಿದರು. ಹಲವರು ಸಿಹಿ ನೀಡಿದರು. ಪಟಾಕಿ ಸಿಡಿಸಿ ಬಾವುಟ ಹಿಡಿದು ದಾರಿಯುದ್ದಕ್ಕೂ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಪರ ಜೈಕಾರ ಕೂಗಿದರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಮಾಜಿ ಸಂಸದ ಎಲ್.ಆರ್ . ಶಿವರಾಮೇಗೌಡ, ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ರಮೇಶ್, ಜಿಪಂ. ಸದಸ್ಯರಾದ ಎಚ್.ಟಿ. ಮಂಜು, ಸಿ.ಎನ್. ಪುಟ್ಟಸ್ವಾಮಿಗೌಡ, ಮುಖಂಡರಾದ ಮುಖಂಡರಾದ ಐನೋರಹಳ್ಳಿ ಮಲ್ಲೇಶ್, ಕೋಟಹಳ್ಳಿ ಶ್ರೀನಿವಾಸ್, ಕಾಯಿ ಮಂಜೇಗೌಡ, ಎಸ್ಟಿಡಿ ರಮೇಶ್, ಅಕ್ಕಿಹೆಬ್ಬಾಳು ರಘು ಮುಂತಾದವರು ಹಾಜರಿದ್ದರು.