ಬೆಂಗಳೂರಿನಲ್ಲಿ ಡಿಟೋನೇಟರ್ ಸ್ಫೋಟ: 6 ವಿಜ್ಞಾನಿಗಳಿಗೆ ಗಾಯ..!

By Web DeskFirst Published Nov 29, 2019, 5:07 PM IST
Highlights

ಬೆಂಗಳೂರಿನ ಮಡಿವಾಳದ ಎಫ್ ಎಸ್ಎಲ್ ಕಚೇರಿಯಲ್ಲಿ ಡಿಟೋನೇಟರ್  ಸ್ಫೋಟಗೊಂಡಿದ್ದು, ಅವಘಡದಲ್ಲಿ ಆರು ಜನರು ಗಾಯಗೊಂಡಿದ್ದಾರೆ.

ಬೆಂಗಳೂರು, (ನ,29) : ಬೆಂಗಳೂರಿನಲ್ಲಿ ಡಿಟೋನೇಟರ್ ಸ್ಫೋಟಗೊಂಡು ಐವರು ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ನಲ್ಲಿ ಡಿಟೋನೇಟರ್ ಸ್ಫೋಟಗೊಂಡಿದೆ. 6 ವಿಜ್ಞಾನಿಗಳು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಶ್ವನಾಥ್ ದಾಖಲೆ ಬಿಡುಗಡೆ ಮಾಡ್ತಾರೆ ಸಾರಾ, ಸಾಧ್ವಿ ಕ್ಷಮೆ ಕೇಳ್ತಾರಾ ರಾಗಾ?: ಇಂದಿನ ಟಾಪ್ 10!

ಒಟ್ಟು 9 ಡಿಟೋನೇಟರ್‌ಗಳನ್ನು ಪರಿಶೀಲನೆ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ಒಂದು ಡಿಟೋನೇಟರ್ ಸ್ಫೋಟಗೊಂಡಿದೆ. ಡಿಟೋನೇಟರ್ ತಪಾಸಣೆ ಮಾಡಲೆಂದೇ ವಿಜ್ಞಾನಿಗಳು ರಾಯಚೂರಿನಿಂದ ಬಂದಿದ್ದರು. 

ಡಿಸಿಪಿ ಇಶಾಪಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು,  ಡಿಟೋನೇಟರ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
 
ಇದನ್ನು ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಒಂದು ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.

click me!