WPL ಟಿ20ಗಾಗಿ ಮೆಟ್ರೋ ವಿಸ್ತರಣೆ: ಆರ್‌ಸಿಬಿ ಮ್ಯಾಚ್ ಟಿಕೆಟ್ ಬೆಲೆಗಿಂತ, ಮೆಟ್ರೋ ಟಿಕೆಟ್ ದರವೇ ಹೆಚ್ಚಾಯ್ತು!

Published : Feb 20, 2025, 05:24 PM ISTUpdated : Feb 20, 2025, 05:47 PM IST
WPL ಟಿ20ಗಾಗಿ ಮೆಟ್ರೋ ವಿಸ್ತರಣೆ: ಆರ್‌ಸಿಬಿ ಮ್ಯಾಚ್ ಟಿಕೆಟ್ ಬೆಲೆಗಿಂತ, ಮೆಟ್ರೋ ಟಿಕೆಟ್ ದರವೇ ಹೆಚ್ಚಾಯ್ತು!

ಸಾರಾಂಶ

WPL ಪಂದ್ಯಗಳಿಗಾಗಿ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಲಾಗಿದೆ. ಆದರೆ ಟಿಕೆಟ್ ದರಕ್ಕಿಂತ ಪ್ರಯಾಣ ದರ ದುಬಾರಿಯಾಗಿದೆಯೇ?

ಈಗಾಗಲೇ ನಮ್ಮ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಳ ಮಾಡಿದ್ದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ನಿರೀಕ್ಷಿತ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್) ಮಹಿಳೆಯರ ಪ್ರೀಮಿಯರ್ ಲೀಗ್ (WPL) ಕ್ರಿಕೆಟ್ 2025 - ಬೆಂಗಳೂರು ಪಂದ್ಯಗಳಿಗೆ ಮೆಟ್ರೋ ರೈಲು ಸೇವೆಗಳ ವಿಸ್ತರಣೆ  ಮಾಡುತ್ತಿದೆ. ಆದರೆ, ಇಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಟಿ-20 ಪಂದ್ಯ ವೀಕ್ಷಣೆಗೆ ಟಿಕೆಟ್ ದರ ಕೇವಲ 100 ರೂ. ಇದ್ದರೆ, ಮೆಟ್ರೋ ಕೊನೆಯ ನಿಲ್ದಾಣದಿಂದ ಬಂದು ಹೋಗೋರಿಗೆ ಮೆಟ್ರೋ ಟಿಕೆಟ್ ಖರೀದಿಸಲು 180 ರೂ. ಖರ್ಚು ಮಾಡಬೇಕಾಗುತ್ತದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮಹಿಳೆಯರ ಕ್ರಿಕೆಟ್ ಪಂದ್ಯಗಳು ನಡೆಯುವ ದಿನ ರಾತ್ರಿ ವೇಳೆ ಕೊನೆಯದಾಗಿ ಹೊರಡುವ ಮೆಟ್ರೋ ರೈಲು 11.20ಕ್ಕೆ ಹೊರಟು 11.55ಕ್ಕೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೂ ಮೆಟ್ರೋ ರೈಲು ಹೊರಡಿಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಟಾಟಾ ಮಹಿಳಾ ಪ್ರೀಮಿಯರ್ ಲೀಗ್ (WPL) T-20 ಕ್ರಿಕೆಟ್ ಪಂದ್ಯಗಳು ಬೆಂಗಳೂರಿನಲ್ಲಿ ಫೆಬ್ರವರಿ 21, 22, 24, 25, 26, 27, 28 ಮತ್ತು ಮಾರ್ಚ್ 01, 2025 ರಂದು ನಡೆಯಲಿವೆ. ಕ್ರಿಕೆಟ್ ಪಂದ್ಯಗಳಿಗೆ ಪ್ರಯಾಣಿಸಲು ಮತ್ತು ಹಿಂತಿರುಗಲು ಅನುಕೂಲವಾಗುವಂತೆ, ಬಿ.ಎಂ.ಆರ್.ಸಿ.ಎಲ್ ಈ ಮೇಲೆ ತಿಳಿಸಿದ ದಿನಗಳಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೂ ಮೆಟ್ರೋ ದರ ಏರಿಕೆಗೂ ಸಂಬಂಧವಿಲ್ಲ; ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!

ನೇರಳೆ ಮತ್ತು ಹಸಿರು ಮಾರ್ಗಗಲ್ಲಿನ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಾದ ಚಲ್ಲಘಟ್ಟ, ವೈಟ್‌ಫೀಲ್ಡ್, ಮಾದಾವರ ಮತ್ತು ರೇಷ್ಮೆ ಸಂಸ್ಥೆಯಿಂದ ಕೊನೆಯ ರೈಲು ಸೇವೆ ರಾತ್ರಿ 11.20 ರವರೆಗೆ ಮತ್ತು ಮೆಜೆಸ್ಟಿಕ್‌ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 11:55 ಕ್ಕೆ ಹೊರಡುತ್ತವೆ. ಪ್ರಯಾಣಿಕರು ಮೆಟ್ರೋ ಪ್ರಯಾಣಕ್ಕಾಗಿ ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ ಗಳು (ಎನ್‌ಸಿಎಂಸಿ) ಮತ್ತು ಟೋಕನ್‌ಗಳನ್ನು ಬಳಸಿ ಪ್ರಯಾಣಿಸಬಹುದು.

ಸಾರ್ವಜನಿಕರಿಗೆ ಮತ್ತು ಮೆಟ್ರೋ ಪ್ರಯಾಣಿಕರು ಇದನ್ನು ಸದುಪಯೋಗ ಮಾಡಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

ಇದನ್ನೂ ಓದಿ: ದರ ಏರಿಕೆ ಬೆನ್ನಲ್ಲೇ ತಗ್ಗಿದ ಮೆಟ್ರೋ ಬಳಕೆದಾರರು! Bengaluru Metro fare | Suvarna News

ಇತ್ತೀಚೆಗೆ ನಮ್ಮ ಮೆಟ್ರೋ ಬೆಲೆ ಹೆಚ್ಚಳದಿಂದಾಗಿ ಶೇ.46 ಪರ್ಸೆಂಟ್‌ನಿಂದ ಶೇ.100ರವರೆಗೆ ಬೆಲೆ ಹೆಚ್ಚಳ ಕೆಲವೊಂದು ನಿಲ್ದಾಣಗಳಲ್ಲಿ ಅನ್ವಯ ಆಗಿತ್ತು. ಇದೀಗ ಮೆಟ್ರೋ ಎಂಡ್‌ ಟು ಎಂಡ್ ಕೊನೆಯ ನಿಲ್ದಾಣಕ್ಕೆ 90 ರೂ. ಬೆಲೆ ನಿಗದಿ ಮಾಡಲಾಗಿದೆ. ಉಳಿದಂತೆ ಮೆಜೆಸ್ಟಿಕ್‌ನಿಂದ ಯಾವುದೇ ಕೊನೆಯ ನಿಲ್ದಾಣಕ್ಕೆ 70 ರೂ. ನಿಗದಿ ಮಾಡಲಾಗಿದೆ. ಅಂದರೆ ಒಂದು ಕಡೆಯಿಂದ ಮೆಜೆಸ್ಟಿಕ್ ಅಥವಾ ಲಾಲ್‌ಬಾಗ್ ನಿಲ್ದಾಣಕ್ಕೆ 70 ರೂ. ಕೊಟ್ಟು ಬಂದರೆ, ಪುನಃ ಹೋಗುವಾಗ 70 ರೂ. ಪಾವತಿಸಬೇಕು. ಒಟ್ಟಾರೆ 140 ರೂ. ಮೆಟ್ರೋ ಟಿಕೆಟ್‌ಗೆ ಖರ್ಚು ಆಗುತ್ತದೆ. ಆದರೆ, ಮಹಿಳಾ ಡಬ್ಲ್ಯೂಪಿಎಲ್‌ ಟಿ-20 ಪಂದ್ಯಕ್ಕೆ ವೀಕ್ಷಣೆಗೆ ಹೋಗುವ ಪ್ರೇಕ್ಷಕರಿಗೆ 100 ರೂ. ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ. ಅಂದರೆ ಇಲ್ಲಿ ಕ್ರಿಕೆಟ್ ಪಂದ್ಯದ ಟಿಕೆಟ್‌ಗಿಂತ ಮೆಟ್ರೋ ಪ್ರಯಾಣ ದರವೇ ಹೆಚ್ಚಾಗಿದೆ.
 

PREV
Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಪಬ್‌ನಲ್ಲಿ ಶಾರುಖ್ ಪುತ್ರನ ದುರ್ವರ್ತನೆ ಕೇಸ್: ಆರ್ಯನ್ ಖಾನ್ ಸೇರಿ ಮೂವರ ವಿರುದ್ಧ ಹಿಂದೂ ಮುಖಂಡನಿಂದ ದೂರು