ಪ.ಮಲ್ಲೇಶ್ ಬಾಯಿಬಡುಕ ಮತ್ತು ಜಾತಿಯ ಹುಳು. ಜತೆಗೆ, ಕಾಂಗ್ರೆಸ್ ಅನಧಿಕೃತ ವಕ್ತಾರರು. ಬ್ರಾಹ್ಮಣರ ಕುರಿತು ಮಾತನಾಡಲು ಇವರಿಗೆ ನೈತಿಕ ಹಕ್ಕು ಇಲ್ಲ. ಇಂತಹ ವ್ಯಕ್ತಿಯನ್ನು ಯಾವುದೇ ಮಠಕ್ಕೂ ಸೇರಿಸಿಕೊಳ್ಳಬಾರದು: ಪ್ರತಾಪ್ ಸಿಂಹ
ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು
ಮೈಸೂರು(ನ.22): ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವ ಪ.ಮಲ್ಲೇಶ್ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟದಿಂದ ಮೈಸೂರು ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರ ಶಂಕರಮಠದ ವಿದ್ಯಾಶಂಕರ ಕಲ್ಯಾಣಮಂಪಟದ ಬಳಿ ಪ್ರತಿಭಟನಾಕಾರರು ಜಮಾವಣೆಗೊಂಡರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನಾ ಮೆರವಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡರು. ಮಹಾರಾಜ ಕಾಲೇಜಿನ ಪಕ್ಕದಲ್ಲಿರುವ ರಸ್ತೆ ಸಂಚಾರವನ್ನು ಬಂದ್ ಮಾಡಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
undefined
ನ. 15 ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ.ಮಲ್ಲೇಶ್ ಅವರು `ಬ್ರಾಹ್ಮಣರನ್ನು ಮತ್ತು ಬ್ರಾಹ್ಮಣರ ಆಚರಣೆಯನ್ನು ನಂಬಬೇಡಿ. ವೇದಗಳು-ಉಪನಿಷತ್ತುಗಳು ಈ ದೇಶವನ್ನು ಹಾಳು ಮಾಡುತ್ತಿವೆ' ಎಂದು ಹೇಳುವ ಮೂಲಕ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಎಚ್.ಡಿ.ಕೋಟೆ: ಗ್ರಾಮ ವಾಸ್ತವ್ಯ ನನಗೆ ಪಾಠಶಾಲೆ ಇದ್ದಂತೆ, ಸಚಿವ ಅಶೋಕ್
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೇಲ್ವರ್ಗದ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇದನ್ನೂ ಕೂಡ ಮಲ್ಲೇಶ್ ಅವರು ತಪ್ಪೆಂದು ವಿರೋಧಿಸಿದ್ದಾರೆ. ಇದು ನ್ಯಾಯಾಂಗ ನಿಂದನೆ ಮಾಡಿದಂತಾಗಿದೆ. ಈ ರೀತಿ ವರ್ತನೆಯಿಂದ ಸಮುದಾಯವು ತುಂಬ ಮನನೊಂದಿದೆ. ಇವರ ವರ್ತನೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವರ ಹೇಳಿಕೆ ವಿರುದ್ಧ ಈಗಾಗಲೇ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ, ನೆಮ್ಮದಿಯನ್ನು ದುರುದ್ದೇಶ ಪೂರ್ವಕವಾಗಿ ಕದಡಿರುವ ಇವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಎಂಎಲ್ಸಿ ಗೋ.ಮಧುಸೂದನ್, ಪಾಲಿಕೆ ಸದಸ್ಯ ಮಾ.ವಿ.ರಾಮ್‌ಪ್ರಸಾದ್, ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಮುಖಂಡರಾದ ಭಾನು ಪ್ರಕಾಶ್ ಶರ್ಮ, ಬಿ.ಆರ್.ನಟರಾಜ್ ಜೋಯಿಸ್, ಡಾ.ಲಕ್ಷ್ಮೀ, ಎಂ.ಸಿ.ರಮೇಶ್, ಜಿ.ಆರ್.ನಾಗರಾಜ್, ಗೋಪಾಲ್‌ರಾವ್ ಇನ್ನಿತರರು ಪಾಲ್ಗೊಂಡಿದ್ದರು.
ಇತ್ತೀಚಿಗೆ ಬುದ್ಧಿಜೀವಿಗಳು, ಜಾತ್ಯತೀತರರು, ಪ್ರಗತಿಪರರು ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನ ಮಾಡುತ್ತಿದ್ದು, ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ. ಆದ್ದರಿಂದ ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮುಡಾ ಮಾಜಿ ಆದ್ಯಕ್ಷ ಎಚ್.ವಿ.ರಾಜೀವ್ ಹೇಳಿದ್ರು.
ಎಚ್.ಡಿ.ಕೋಟೆ: ಗ್ರಾಮ ವಾಸ್ತವ್ಯದ ನೆನಪಿಗೆ 1 ಕೋಟಿ ಬಿಡುಗಡೆ: ಸಚಿವ ಅಶೋಕ್
ಪ.ಮಲ್ಲೇಶ್ ಬಾಯಿಬಡುಕ ಮತ್ತು ಜಾತಿಯ ಹುಳು. ಜತೆಗೆ, ಕಾಂಗ್ರೆಸ್ ಅನಧಿಕೃತ ವಕ್ತಾರರು. ಬ್ರಾಹ್ಮಣರ ಕುರಿತು ಮಾತನಾಡಲು ಇವರಿಗೆ ನೈತಿಕ ಹಕ್ಕು ಇಲ್ಲ. ಇಂತಹ ವ್ಯಕ್ತಿಯನ್ನು ಯಾವುದೇ ಮಠಕ್ಕೂ ಸೇರಿಸಿಕೊಳ್ಳಬಾರದು. ಅಲ್ಲದೆ, ಇದು ಪ.ಮಲ್ಲೇಶ್ ಹೇಳಿಕೆಯಷ್ಟೇ ಅಲ್ಲ, ಇದು ಮಾಜಿ ಸಿಎಂ ಸಿದ್ದರಾಮಯ್ಯ ಅಂತರಾಳದ ಮಾತು ಸಹ ಆಗಿದೆ ಅಂತ ಸಂಸದ ಪ್ರತಾಪ್ ಸಿಂಹ ಗುಡುಗಿದರು.
ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಆಗಿ ಮಾತನಾಡಿರುವ ಪ.ಮಲ್ಲೇಶ್‌ರಿಗೆ ಆ ಸಂದರ್ಭದಲ್ಲೇ ಸಿದ್ದರಾಮಯ್ಯ ಬುದ್ಧಿ ಹೇಳಬೇಕಿತ್ತು. ಈ ರೀತಿ ಮಾತನಾಡಬೇಡ ಎಂದು ತಿಳಿಹೇಳಬೇಕಿತ್ತು. ಆದರೆ, ಸಿದ್ದರಾಮಯ್ಯ ಈ ರೀತಿ ನಡೆದುಕೊಳ್ಳಲಿಲ್ಲ ಎಂಬುದು ಶಾಸಕ ಎಸ್.ಎ.ರಾಮದಾಸ್ ಮಾತಾಗಿತ್ತು.