ಮೈಸೂರು: ಮುಸ್ಲಿಮರಿಂದ ಹಿಂದೂ ಮಹಿಳೆ ಅಂತ್ಯ ಸಂಸ್ಕಾರ: ಧರ್ಮ ದಂಗಲ್‌ ನಡುವೆ ಸೌಹಾರ್ದತೆ ಸಂದೇಶ

Published : Apr 23, 2022, 03:25 PM ISTUpdated : Apr 23, 2022, 04:14 PM IST
ಮೈಸೂರು: ಮುಸ್ಲಿಮರಿಂದ ಹಿಂದೂ ಮಹಿಳೆ ಅಂತ್ಯ ಸಂಸ್ಕಾರ: ಧರ್ಮ ದಂಗಲ್‌ ನಡುವೆ ಸೌಹಾರ್ದತೆ ಸಂದೇಶ

ಸಾರಾಂಶ

*ಧರ್ಮ ದಂಗಲ್ ಮಧ್ಯೆ ಮೈಸೂರಿನಲ್ಲಿ ಸೌಹರ್ದತೆ ಸಂದೇಶ ಸಾರಿದ ಘಟನೆ. *ಮೈಸೂರಿನ ಗೌಸಿಯಾನಗರದ ನಿವಾಸಿ ಜಯಕ್ಕ(60) ಅನಾರೋಗ್ಯದಿಂದ ಮೃತ.

ಮೈಸೂರು (ಏ. 23): ರಾಜ್ಯದಲ್ಲಿರುವ ಭುಗಿಲೆದ್ದಿರುವ ಧರ್ಮ ದಂಗಲ್‌ ನುಡವೆ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಹಿಂದೂ ಮಹಿಳೆ ಅಂತ್ಯ ಸಂಸ್ಕಾರ ಮಾಡಿದ ಮುಸ್ಲಿಮರು ಸೌಹಾರ್ದತೆ ಮೆರೆದಿದ್ದಾರೆ. ಮೈಸೂರಿನ ಗೌಸಿಯಾನಗರದ ನಿವಾಸಿ ಜಯಕ್ಕ(60) ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತ ಜಯಕ್ಕನಿಗೆ ಸೊಸೆ ಇಬ್ಬರೂ ಬಿಟ್ಟರೆ ಬೇರೆ ಯಾವ ಸಂಬಂಧಿಗಳಿರಲಿಲ್ಲ. 

ಈ ಹಿನ್ನೆಲೆಯಲ್ಲಿ ನೆರೆಹೊರೆಯ ಮುಸ್ಲಿಂ ಯುವಕರೇ ಜಯಕ್ಕನ ಅಂತ್ಯ ಸಂಸ್ಕಾರಕ್ಕೆ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಅಂತಿಮ ಕಾರ್ಯ ನೆರವೇರಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಕೋಮು ವಿವಾದದ ಸಂದರ್ಭದಲ್ಲಿ ಸಾಮರಸ್ಯ ಸಂದೇಶ ರವಾನೆಯಾಗಿದೆ.

ಗೊತ್ತಿಲ್ಲದೆ ಪೊಲೀಸರಿಂದ ಅಂತ್ಯಸಂಸ್ಕಾರ, ಗೊತ್ತಾದಾಗ ಮತ್ತೆ ಮಣ್ಣಾದ ಮುಜಾಫರ್‌: ಹುಬ್ಬಳ್ಳಿಯ (Hubballi) ಉಣಕಲ್‌ ಕೆರೆಯಲ್ಲಿ (Unakal Lake) ಏಪ್ರಿಲ್ 5 ರಂದು ಪತ್ತೆಯಾಗಿದ್ದು ವಾರಸುದಾರರಿಲ್ಲದೆ ಶವವನ್ನು ಪತ್ತೆಯಾದ ಪೊಲೀಸರ ಅಂತ್ಯಸಂಸ್ಕಾರ ಮಾಡಿ‌ ಮುಗಿಸಿದ್ರು. ಆದ್ರೇ ವಾರಸುದಾರ ಪತ್ತೆಯಾದ ಬಳಿಕ ಇಂದು ಮತ್ತೆ ಹೂತ ಶವವನ್ನು ಹೊರ ತೆಗೆದು ಸಂಬಂಧಿಕರಿಗೆ ಒಪ್ಪಿಸಿದ ಹಿನ್ನೆಲೆಯಲ್ಲಿ ಸಂಬಂಧಿಕರು ಮತ್ತೊಮ್ಮೆ ಅಂತ್ಯಸಂಸ್ಕಾರದ ನೆರವೇರಿಸಿದ ಪ್ರಸಂಗ ಹುಬ್ಬಳ್ಳಿಯಲ್ಲಿ ನಡೆದಿದೆ.

ಇದನ್ನೂ ಓದಿ: 40 ಗಂಟೆ ಹೋಟೆಲ್‌ ಕೋಣೆಯಲ್ಲೇ ಇದ್ದ ಸಂತೋಷ್ ಶವ, ಪೋಸ್ಟ್‌ಮಾರ್ಟಂಗೆ ಮನವೊಲಿಸಲು ಹರಸಾಹಸ

ನಗರದ ಉಣಕಲ್ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದ ಶವದ ವಾರಸುದಾರರು ತಕ್ಷಣವೇ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಶವವನ್ನ ರುದ್ರಭೂಮಿಯಲ್ಲಿ ಹೂಳಿಸಿದ್ರು, ಅದನ್ನೀಗ ಹೊರತೆಗೆದು ಖಬರಸ್ಥಾನಕ್ಕೆ ಶಿಪ್ಟ್ ಮಾಡಲಾಗಿದೆ. ಹೀಗೆ ಎರಡೆರಡು ಬಾರಿ ಮಣ್ಣಾಗಿದ್ದು  ಹುಬ್ಬಳ್ಳಿಯ ಪೆಂಡಾರಗಲ್ಲಿ ಮುಜಾಫರ್ ಕಲಾದಗಿ (31). ಮನೆಯಿಂದ ಏಕಾಏಕಿ ನಾಪತ್ತೆ ಆಗಿದ್ದ ಮುಜಾಫರ್ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ, ಏಪ್ರಿಲ್  5 ರಂದು ಮುಜಾಫರ್ ಶವ ಪತ್ತೆಯಾಗಿತ್ತು.  ಆದರೆ, ಈ ವಿಷಯ ಪೊಲೀಸರಿಗೆ ಗೊತ್ತಾಗದ ಹಿನ್ನೆಲೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಬಿಡನಾಳದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿಸಿದ್ದರು.

PREV
Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ