ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ: ಅಂಗಾಂಗ ದಾನ ಮಾಡಿ ಮೂವರ ಜೀವ ಉಳಿಸಿದ ಕರುಣಾಮಯಿ..!

By Girish GoudarFirst Published Apr 23, 2022, 12:53 PM IST
Highlights

*  ಅಪಘಾತದಲ್ಲಿ ಪ್ರೀತಿ ಮನೋಜ್ ಮೆದುಳು ನಿಷ್ಕ್ರಿಯ
*  ಮಹಿಳೆಯ ಅಂಗಾಂಗ ದಾನ ಮಾಡಲು‌ ಪ್ರೀತಿ ಮನೋಜ್ ಕುಟುಂಬಸ್ಥರ ನಿರ್ಧಾರ 
*  ಸಾವಿನಲ್ಲೂ ಮೂವರು ವ್ಯಕ್ತಿಗಳಿಗೆ ಮರು ಜೀವನ ನೀಡಿದ ಪ್ರೀತಿ ಮನೋಜ್ 
 

ಮಂಗಳೂರು(ಏ.23):  ಮಹಿಳೆಯೊಬ್ಬಳು(Woman) ಸಾವಿನಲ್ಲೂ ಮೂವರು ವ್ಯಕ್ತಿಗಳಿಗೆ ಮರು ಜೀವನ ನೀಡಿದ ಘಟನೆ ಮಂಗಳೂರು(Mangaluru) ನಗರದಲ್ಲಿ ನಡೆದಿದೆ. ಅಪಘಾತವೊಂದರಲ್ಲಿ(Accident) ಪ್ರೀತಿ ಮನೋಜ್(46) ಎಂಬುವರ ಮೆದುಳು ನಿಷ್ಕ್ರಿಯಗೊಂಡಿತ್ತು. 

ಬಿಎಂಡಬ್ಲ್ಯು ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಪ್ರೀತಿ ಮನೋಜ್(Preeti Manoj) ಮೆದುಳು ನಿಷ್ಕ್ರಿಯಗೊಂಡಿತ್ತು(Brain Dead). ಕಳೆದ 13 ದಿನಗಳಿಂದ ಪ್ರೀತಿ ಮನೋಜ್ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದರು. ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದ್ದರು. 

Latest Videos

Organ Donation: ಸಾವಿನಲ್ಲೂ 6 ಜನಕ್ಕೆ ಜೀವದಾನ ಮಾಡಿದ ಯುವಕ

ಮೆದುಳು ನಿಷ್ಕ್ರಿಯವಾಗಿದ್ದರಿಂದ ಮಹಿಳೆಯ ಅಂಗಾಂಗ ದಾನ(Multiple Organ Donate) ಮಾಡಲು‌ ಪ್ರೀತಿ ಮನೋಜ್ ಕುಟುಂಬಸ್ಥರು ನಿರ್ಧರಿಸಿದ್ದರು. ಹೀಗಾಗಿ ಬೆಂಗಳೂರು(Bengaluru), ಮಂಗಳೂರಿನ ಮೂರು ಆಸ್ಪತ್ರೆಗೆ ಪ್ರೀತಿ ಮನೋಜ್ ಅಂಗಾಂಗಳು ರವಾನೆಯಾಗಿವೆ.

ಝೀರೋ ಟ್ರಾಫಿಕ್(Zero Traffic) ಮೂಲಕ ಏರ್ಪೋರ್ಟ್‌ಗೆ ತೆರಳಿ ವಿಮಾನದ ಮೂಲಕ ಬೆಂಗಳೂರಿಗೆ ಅಂಗಾಂಗ ರವಾನೆಯಾಗಿದೆ. ಈ ಮೂಲಕ ಪ್ರೀತಿ ಮನೋಜ್‌ ಮೂವರು ವ್ಯಕ್ತಿಗಳಿಗೆ ಮರು ಜೀವನ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 

ಏ.9ರಂದು ನಗರದ ಬಲ್ಲಾಲ್ ಭಾಗ್‌ನಲ್ಲಿ ಕಾರು ಅಪಘಾತ ಸಂಭವಿಸಿತ್ತು. ಪ್ರೀತಿ ಮನೋಜ್ ಅವರು ತನ್ನ‌ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಬಿಎಂಡಬ್ಲ್ಯು ಕಾರೊಂದು ಡಿವೈಡರ್ ಕ್ರಾಸ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿತ್ತು. ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪ್ರೀತಿ ಮನೋಜ್ ಅವರ ತಲೆಗೆ ತೀತ್ರತರವಾದ ಪೆಟ್ಟು ಬಿದ್ದಿತ್ತು. ಬಳಿಕ ಪ್ರೀತಿ ಮನೋಜ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಅಂತ ವೈದ್ಯರು ಘೋಷಿಸಿದ್ದರು.  ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು(Police) ಬಿಎಂಡಬ್ಲ್ಯು ಕಾರು ಚಾಲಕ ಶ್ರವಣ್ ಕುಮಾರ್‌ನನ್ನು ಬಂಧಿಸಿ‌ದ್ದರು(Arrest). ಕಾರು ಚಾಲಕನ ತಪ್ಪಿಗೆ ಮಹಿಳೆ ಜೀವ ತೆತ್ತಿದ್ದಾಳೆ.
 

click me!