*ನನಗೆ ಬಹಳ ಇಷ್ಟವಾದ ಮುಖ್ಯಮಂತ್ರಿಗಳೆಂದರೆ ಸಿದ್ದರಾಮಯ್ಯ
*ಬಹಿರಂಗವಾಗಿ ವೇದಿಕೆಯಲ್ಲಿ ಹೇಳಿಕೆ ನೀಡಿದ ವಚನಾನಂದ ಶ್ರೀಗಳು
ದಾವಣಗೆರೆ (ಏ. 23): ನನಗೆ ಬಹಳ ಇಷ್ಟವಾದ ಮುಖ್ಯಮಂತ್ರಿಗಳೆಂದರೆ ಅವರು ಸಿದ್ದರಾಮಯ್ಯನವರು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಪೀಠಾಧಿಪತಿ ವಚನಾನಂದ ಶ್ರೀ ಹೇಳಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಪಂಚಮಸಾಲಿ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವ ಮತ್ತು ಏ.24ರಂದು ಬೃಹತ್ ಉದ್ಯೋಗ ಮೇಳವನ್ನು ಮಠದ ಆವರಣದಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಶನಿವಾರ ಪಂಚಮಸಾಲಿ ವೀರಸೇನಾನಿಗಳ ಭಾವಚಿತ್ರಗಳನ್ನು, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅನಾವರಣಗೊಳಿಸಿದ್ದಾರೆ.
ಈ ವೇಳೆ ಮಾತನಾಡಿದ ವಚನಾನಂದ ಶ್ರೀ ಸಿದ್ದರಾಮಯ್ಯ ಒಬ್ಬ ಯೋಗರಾಮಯ್ಯ ಎಂದು ಹೊಗಳಿದ್ದು "ನನಗೆ ಬಹಳ ಇಷ್ಟವಾದ ಮುಖ್ಯಮಂತ್ರಿಗಳೆಂದರೆ ಅವರು ಸಿದ್ದರಾಮಯ್ಯನವರು, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಅಂತಾರಾಷ್ಟ್ರೀಯ ಯೋಗಾದಿನಾಚರಣೆಗೆ ಮೂರು ವರ್ಷ ನನಗೆ ಅವಕಾಶ ಕಲ್ಪಿಸಿದ್ದರು, ಯಾರು ಗುರುತಿಸದ ಕಾಲದಲ್ಲಿ ಅವರು ನನ್ನನ್ನು ಗುರುತಿಸಿದರು" ಎಂದು ಹೇಳಿದ್ದಾರೆ
ಇದನ್ನೂ ಓದಿ: ರಾಜಗುರು ರಾಜನೀತಿ: ಪಂಚಮಸಾಲಿ ಮಠದ ಪೀಠಾಧಿಪತಿ ವಚನಾನಂದ ಶ್ರೀಗಳ ವಿಶೇಷ ಸಂದರ್ಶನ
ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಹೊರವಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಆವರಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಂಚಮಸಾಲಿ ಸಮಾಜದವರ ಪಾತ್ರ ಮತ್ತು ವೀರ ಸೇನಾನಿಗಳಿಗೆ ಗೌರವ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದಾರೆ. ʼ
ಇನ್ನು ಬೆಳವಡಿ ಮಲ್ಲಮ್ಮ, ಕೆಳದಿಯ ಚೆನ್ನಮ್ಮ, ಕಂಬಳಿ ಸಿದ್ದಪ್ಪ ಸೇರಿ ಆಯ್ದ ಏಳು ಜನ ವೀರಸೇನಾನಿಗಳ ಜೀವನ ಚರಿತ್ರೆಯ ಪುಸ್ತಕಗಳನ್ನು ಮುದ್ರಿಸಲಾಗಿದ್ದು, ಅವರ ಸಾಧನೆ ಕುರಿತು ಚಿತ್ರಸಾಹಿತಿ ಕೆ.ಕಲ್ಯಾಣ್ ರಚಿಸಿರುವ ಗೀತೆಯನ್ನು ಲೋಕಾರ್ಪಣೆ ಮಾಡಲಾಗುವುದು. ಮಧ್ಯಾಹ್ನ 3 ಗಂಟೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಲಾಭ ನಷ್ಟದ ಕುರಿತು ಶೃಂಗ ಸಭೆಯನ್ನು ಏರ್ಪಡಿಸಲಾಗಿದ್ದು, ಸಚಿವ ಡಾ.ಸಿ.ಎನ್.ಅಶ್ವತ್‌್ಥನಾರಾಯಣ ವಿಷಯ ಮಂಡನೆ ಮಾಡಲಿದ್ದಾರೆ.