ಮಂಗಳೂರಿಗೆ ಮುಂಬೈ ಕೊರೋನಾ ಶಾಕ್‌..! ಕಂದಮ್ಮ ಸೇರಿ 11 ಜನಕ್ಕೆ ಸೋಂಕು

By Kannadaprabha NewsFirst Published May 27, 2020, 4:02 PM IST
Highlights

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬೈ ಕೊರೋನಾ ಶಾಕ್ ಉಂಟಾಗಿದೆ. ಮೂರು‌ ವರ್ಷದ ಮಗು ಸೇರಿದಂತೆ 11 ಮಂದಿಗೆ ಮಹಾಮಾರಿ ಕೊರೋನಾ ಕಾಣಿಸಿಕೊಂಡಿದೆ.

ಮಂಗಳೂರು(ಮೇ 27): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬೈ ಕೊರೋನಾ ಶಾಕ್ ಉಂಟಾಗಿದೆ. ಮೂರು‌ ವರ್ಷದ ಮಗು ಸೇರಿದಂತೆ 11 ಮಂದಿಗೆ ಮಹಾಮಾರಿ ಕೊರೋನಾ ಕಾಣಿಸಿಕೊಂಡಿದೆ.

ಗುಜರಾತ್ ರಾಜ್ಯದಿಂದ ಬಂದ 22 ವರ್ಷದ ಯುವಕನಲ್ಲೂ ಸೋಂಕು ಪತ್ತೆಯಾಗಿದೆ. 7 ಮಂದಿ ಮಹಿಳೆಯರು 4 ಮಂದಿ ಪುರುಷರಿಗೆ ಸೋಂಕು ತಗುಲಿದ್ದು, ಇವರು ಮಹಾರಾಷ್ಟ್ರ ದಿಂದ ‌ಬಂದು ಕ್ವಾರೆಂಟೈನ್ ನಲ್ಲಿದ್ದರು. ಸ್ವಾಬ್ ಟೆಸ್ಟ್ ವರದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ.

Latest Videos

ಹಸಿವಿನಿಂದ ನಿಲ್ದಾಣದಲ್ಲಿ ಪ್ರಾಣ ಬಿಟ್ಟ ಕಾರ್ಮಿಕ ಮಹಿಳೆ: ಅಮ್ಮನ ಎಬ್ಬಿಸಲು ಕಂದನ ಪರದಾಟ!

ಸೋಂಕಿತರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಲ್ಲಿವರೆಗೂ ಮಹಾರಾಷ್ಟ್ರದಿಂದ ಬಂದ ಒಟ್ಟು 18 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಸದ್ಯ ಜಿಲ್ಲೆಯಲ್ಲಿ ಆ್ಯಕ್ಟೀವ್ ಪ್ರಕರಣಗಳ ಸಂಖ್ಯೆ 48 ಕ್ಕೆ ಏರಿಕೆಯಾಗಿದೆ.

ಒಂದೇ ಕುಟುಂಬದವರಿಗೆ ಕೊರೋನಾಘಾತ:

ಮುಂಬೈನಿಂದ ಬಂದ ಇಡೀ ಕುಟುಂಬಕ್ಕೆ ಕೊರೋನಾ ಆಘಾತವಾಗಿದೆ. ಮುಂಬೈನಿಂದ ಒಟ್ಟಿಗೆ ಆಗಮಿಸಿದ್ದ ಕುಟುಂಬ ತಂದೆ, ತಾಯಿ, ಇಬ್ಬರು ಮಕ್ಕಳಿಗೆ ಕೊರೋನಾ ಪಾಸಿಟಿವ್‌ ಕಂಡು ಬಂದಿದೆ. ಮತ್ತೊಂದು ಕುಟುಂಬದ ಮೂವರಿಗೆ ಸೋಂಕು ತಗುಲಿದ್ದು, ಮತ್ತೊಂದು ದಂಪತಿಗೂ ಕೊರೋನ ಸೋಂಕು ದೃಢವಾಗಿದೆ. ಮೂವರಿಗೆ ಮಾತ್ರ ಒಬ್ಬೊಬ್ಬರಿಗೆ ಸೋಂಕು ಪತ್ತೆಯಾಗಿದೆ.

ಬಜ್ಪೆ ಕಂಟೈನ್‌ಮೆಂಟ್ ಝೋನ್

ಮಂಗಳೂರಿನ ಬಜ್ಪೆಗೆ ಬಳಿ ಕಂಟೈನ್ಮೆಂಟ್ ಝೋನ್ ಮಾಡಲು ಸಿದ್ದತೆ ನಡೆಸಲಾಗಿದೆ. ಮಹಾರಾಷ್ಟ್ರದಿಂದ ಬಂದಿದ್ದ ಸೋಂಕಿತ ಮನೆ ಸೀಲ್ ಡೌನ್ ಆಗಿದ್ದು, ಸೋಂಕಿತ ಮುಂಬೈನಿಂದ ಬಂದು ಅಂತ್ಕಸಂಸ್ಕಾರದಲ್ಲಿ ಭಾಗವಹಿಸಲು ಹೋಗಿದ್ದ. ತನ್ನ ಮನೆ ಬಳಿ ಹೋಗಿದ್ದ ಸೋಂಕಿತ ಬಳಿಕ ಕ್ವಾರಂಟೈನ್ ಸೆಂಟರ್ ಸೇರಿದ್ದ. ಸಂಜೆ ವೇಳೆಗೆ ಬಜ್ಪೆಯ ನಿಗದಿತ ಪ್ರದೇಶ ಸೀಲ್ ಡೌನ್ ಗೆ ಸಿದ್ದತೆ‍ ಮಾಡಲಾಗಿದೆ.

ಮುಂಬೈನಿಂದ ಬಂದ ಇಡೀ ಕುಟುಂಬಕ್ಕೆ ಕೊರೊನ ಶಾಕ್ ಎದುರಾಗಿದ್ದು, ಮುಂಬೈನಿಂದ ಒಟ್ಟಿಗೆ ಆಗಮಿಸಿದ್ದ ತಂದೆ, ಅಜ್ಜಿ, ಇಬ್ಬರು ಮಕ್ಕಳಿಗೆ ಕೊರೊನ ಪಾಸಿಟಿವ್‌ ಇದೆ. ನಾಲ್ವರ ಕುಟುಂಬ ಉಳ್ಳಾಲದ ಕ್ವಾರೆಂಟೈನ್ ಸೆಂಟರ್ ನಲ್ಲಿ ಕ್ವಾರಂಟೈನ್ ಆಗಿತ್ತು. ಮತ್ತೊಂದು ಕುಟುಂಬದ ಮೂವರಿಗೆ ಸೋಂಕು ಪತ್ತೆಯಾಗಿದ್ದು, ಪುತ್ತೂರಿನ ಕ್ವಾರಂಟೈನ್ ಸೆಂಟರ್‌ನಲ್ಲಿ ಗಂಡ, ಹೆಂಡತಿ ಮತ್ತು ಮಗು ಇದ್ದರು.

ಚಲಿಸುವ ರೈಲಿನಲ್ಲಿಯೇ ಮಗುವಿಗೆ ಜನ್ಮ, ಸೆಲ್ಯೂಟ್ ಬೆಂಗಳೂರು ಪೊಲೀಸ್

ಉಳ್ಳಾಲದಲ್ಲಿ ಕ್ವಾರೆಂಟೈನ್ ಆಗಿದ್ದ ಗಂಡ ಮತ್ತು ಹೆಂಡತಿಗೂ ಕೊರೋನ ಸೋಂಕು ದೃಢವಾಗಿದ್ದು,  ಇಬ್ಬರಿಗೆ ಮಾತ್ರ ಒಬ್ಬೊಬ್ಬರಿಗೆ ಸೋಂಕು ದೃಢವಾಗಿದೆ. ಬೆಳ್ತಂಗಡಿ ಕ್ವಾರಂಟೈನ್ ಸೆಂಟರ್ ಮತ್ತು ಗುಜರಾತ್ ನಿಂದ ಆಗಮಿಸಿ ಉಳ್ಳಾಲದಲ್ಲಿ ಕ್ವಾರೆಂಟೈನ್ ಇದ್ದವರಿಗೆ ಸೋಂಕು ತಗುಲಿದೆ.

click me!