ಕಲಾವಿದನ ಕುಂಚದಲ್ಲಿ ಅರಳಿದ ಕೊರೋನಾ ಮೆಟ್ಟಿ ಮುನ್ನುಗ್ಗುತ್ತಿರೋ ಭಾರತದ ಚಿತ್ರ..!

By Suvarna News  |  First Published May 27, 2020, 3:47 PM IST

ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಸಂಗಮೇಶ್ ಬಗಲಿ| ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹೊಸೂರು ಗ್ರಾಮದ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ| ಕೊರೋನಾ ವಿರುದ್ಧ ನಮೋ ಅಶ್ವಮೇಧಯಾಗ ಬಿಂಬಿಸುವ ಚಿತ್ರವನ್ನ ಬಿಡಿಸುವ ಮೂಲಕ ಗಮನ ಸೆಳೆದ ಸಂಗಮೇಶ್ ಬಗಲಿ|


ಬಾಗಲಕೋಟೆ(ಮೇ.27): ಮಾರಕ ಕೊರೋನಾ ಬಗ್ಗೆ ಚಿತ್ರಕಲಾ ಶಿಕ್ಷಕರೊಬ್ಬರು ಅಪರೂಪದ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸಂಗಮೇಶ್ ಬಗಲಿ ಎಂಬುವರೇ ಅಪರೂಪದ ಚಿತ್ರ ಬಿಡಿಸಿದ ಚಿತ್ರಕಲಾ ಶಿಕ್ಷಕರಾಗಿದ್ದಾರೆ. 
ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಿವಾಸಿಯಾಗಿರುವ ಸಂಗಮೇಶ್ ಬಗಲಿ ಅವರು ಹೊಸೂರು ಗ್ರಾಮದ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 

ಸಂಗಮೇಶ್ ಬಗಲಿ ಕೊರೋನಾ ವಿರುದ್ಧ ನಮೋ ಅಶ್ವಮೇಧಯಾಗ ಬಿಂಬಿಸುವ ಚಿತ್ರವನ್ನ ಬಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿ ಭಾರತ ಮಹಾಮಾರಿ ಕೊರೋನಾವನ್ನ ಮೆಟ್ಟಿ ಮುನ್ನುಗ್ಗುತ್ತಿರುವ ಹಾಗೆ ಕಾಣಿಸುತ್ತದೆ.  ಕುದುರೆ ಮೇಲೆ ಭಾರತ‌ದ ನಕ್ಷೆ, ಬಾವುಟದ ಚಿತ್ರ ಬಿಡಿಸಲಾಗಿದ್ದು, ಕುದುರೆಗೆ ಮಾಸ್ಕ್ ಕುದುರೆ ಕೊರಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಾಣಿಸುತ್ತಿದೆ. ಕುದುರೆ ಬೆನ್ನ ಮೇಲೆ ಕೊರೊನಾ ವಾರಿಯರ್ಸ್ ಚಿತ್ರವನ್ನ ಸಂಗಮೇಶ್ ಬಗಲಿ ಅವರು ತಮ್ಮ ಕುಂಚದಲ್ಲಿ ಬಿಡಿಸಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ ಬಗ್ಗೆ ಫೇಸ್​ಬುಕ್​ನಲ್ಲಿ ಅಶ್ಲೀಲ ಪೋಸ್ಟ್​; ಬಾದಾಮಿಯ ಯುವಕ ಅರೆಸ್ಟ್

15-3-2020 ರಿಂದ 31-5-2020 ರ ಲಾಕ್ ಡೌನ್ ಮೈಲುಗಲ್ಲು, ಮೈಲುಗಲ್ಲಿನ ಪಕ್ಕ ಓಡುತ್ತಿರುವ ಕುದುರೆ ಕಾಲ್ತುಳಿತಕ್ಕೆ ಕೊರೋನಾ ವಿಲವಿಲ ಒದ್ದಾಡುತ್ತಿರುವ ಚಿತ್ರವನ್ನ ಆಕ್ರಾಲಿಕ್ ಕ್ಯಾನ್ವಾಸ್ ಪೇಂಟಿಂಗ್ ಮೂಲಕ ಚಿತ್ರ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಚಿತ್ರದಲ್ಲಿ ಭಾರತ ಕೊರೋನಾ ವೈರಸ್‌ ವಿರುದ್ಧದ ಹೋರಾಟ ಹಾದಿಯನ್ನ ಹೇಳುವ ಪ್ರಯತ್ನ ಮಾಡಿದ್ದಾರೆ. 

click me!