ಅದು ಸಾವಿರಾರ ಎಕರೆ ವಿಸ್ತೀಣ೯ದ ಬೃಹತ್ ಕೆರೆ. ಮಳೆಗಾಲ ಆಗಿರೋದ್ರಿಂದ ಇನ್ನೇನು ಕೆಲವೇ ದಿನಗಳಲ್ಲಿ ಕೆರೆ ಕೋಡಿ ಸಹ ಹರಿಯುತ್ತೆ. ಕಳೆದ ವಷ೯ ಕೋಡಿ ಹರಿದು, ಮುಖ್ಯ ರಸ್ತೆ ಬಂದ್ ಆಗಿ ಸಾಕಷ್ಟು ನಷ್ಟ ಉಂಟಾಗಿ ಆತಂಕ ಎದುರಾಗಿದ್ದು, ಜೀವ ಕೈಯಲ್ಲಿ ಹಿಡಿದು ಜನರು ಸಂಚಾರ ಮಾಡ್ತಿದ್ದಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಜು.19): ಅದು ಸಾವಿರಾರ ಎಕರೆ ವಿಸ್ತೀಣ೯ದ ಬೃಹತ್ ಕೆರೆ. ಮಳೆಗಾಲ ಆಗಿರೋದ್ರಿಂದ ಇನ್ನೇನು ಕೆಲವೇ ದಿನಗಳಲ್ಲಿ ಕೆರೆ ಕೋಡಿ ಸಹ ಹರಿಯುತ್ತೆ. ಕಳೆದ ವಷ೯ ಕೋಡಿ ಹರಿದು, ಮುಖ್ಯ ರಸ್ತೆ ಬಂದ್ ಆಗಿ ಸಾಕಷ್ಟು ನಷ್ಟ ಉಂಟಾಗಿ ಆತಂಕ ಎದುರಾಗಿದ್ದು, ಜೀವ ಕೈಯಲ್ಲಿ ಹಿಡಿದು ಜನರು ಸಂಚಾರ ಮಾಡ್ತಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಎತ್ತ ಕಣ್ಣು ಕಾಯಿಸಿದರೂ ನೀರು. ಭಾರಿ ಗಾಳಿಯೊಂದಿಗೆ ರಭಸವಾಗಿ ಬಡಿಯುತ್ತಿರುವ ನೀರು. ಜೀವ ಕೈಯಲಿಡಿದು ಸಂಚಾರ ಮಾಡ್ತಿರುವ ವಾಹನ ಸವಾರರು. ಅಂದಹಾಗೆ ಇವೆಲ್ಲಾ ದೃಶ್ಯಗಳು ಕಂಡುಬಂದಿದ್ದು ಕೋಲಾರ ತಾಲೂಕಿಗೆ ಸೇರಿರುವ ಮುದುವಾಡಿ ಕೆರೆ.
undefined
ಸುಮಾರು 1200 ಎರಕೆ ವಿಸ್ತೀಣ೯ ಹೊಂದಿರುವ ಈ ಕೆರೆಗೆ ಸಾಕಷ್ಟು ಪುರಾತನ ಇತಿಹಾಸವಿದೆ. ಸುಮಾರು 25 ಅಡಿ ಆಳವಿರುವ ಮುದುವಾಡಿ ಕೆರೆಯ ಬಗ್ಗೆ ನಮ್ಮ ಜಾನಪದರು ಸಹ ಹಾಡನು ರಚಿಸಿ ಅಧ್ಬುತವಾಗಿ ವಣ೯ನೆ ಮಾಡಿದ್ಧಾರೆ. ಕೆರೆಗಳ ನಾಡು ಅಂತಾನೆ ಪ್ರಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ಇದೇ ಅತೀ ದೊಡ್ ಕೆರೆ ಅಂತಾನು ಹೇಳಲಾಗ್ತಿದೆ. ಈಗಿರುವ ಹಲವಾರು ವಷ೯ಗಳ ಕಾಲ ನೀರಿಗೆ ಭಾರಿ ಅಭಾವ ಉಂಟಾಗಿ, ಅಂತಜ೯ಲ ಪಾತಾಳಕ್ಕೆ ಕುಸಿದು ಕೆರೆಗಳೆಲ್ಲಾ ಖಾಲಿ ಮೈದಾನದಂತೆ ಆಗಿತ್ತು, ಇದಕ್ಕೆ ಮುದುವಾಡಿ ಕೆರೆ ಸಹ ಹೊರತಾಗಿಲ್ಲ. ಆದ್ರೀಗ ಕೋಲಾರ ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಬರುತ್ತಿದ್ದು, ಇದರ ಜೊತೆ ಜೊತೆಗೆ ಕಳೆದ ಎರಡು ವಷ೯ಗಳಿಂದ ಉತ್ತಮವಾಗಿ ಮಳೆ ಆಗ್ತಿರುವ ಪರಿಣಾಮ ಬಹುತೇಕ ಕೆರೆಗಳು ಕೋಡಿ ಹರಿಯುತ್ತಿದೆ.
ಕೋಲಾರ ಜಿಲ್ಲೆಗೆ ಅವಧಿಗೂ ಮುನ್ನವೇ ಮುಂಗಾರು ಮಳೆ ಆಗಮನ!
ಇನ್ನು ಕಳೆದ ವಷ೯ ಮುದುವಾಡಿ ಕೆರೆ ಕೋಡಿ ಹರಿದ ಪರಿಣಾಮ ನೀರು ಮುಖ್ಯ ರಸ್ತೆಯ ಮೇಲೆ ರಭಸವಾಗಿ ಹರಿದು ಪಕ್ಕದ ಜಮೀನುಗಳಿಗೆ ನುಗಿದ್ದ ಪರಿಣಾಮ ವಾಹನ ಸವಾರರು ಸಾಕಷ್ಟು ಕಷ್ಟ ಪಡಬೇಕಾಯ್ತು, ರೈತರು ನಷ್ಟ ಅನುಭವಿಸಬೇಕಾಯ್ತು. ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇದೀಗ ಕೋಲಾರದಲ್ಲಿ ಆಗಾಗೇ ಸುರಿಯುವ ಮಳೆಯಿಂದಾಗಿ ಇನ್ನೇನು ಕೆಲವೇ ದಿನಗಳಲ್ಲಿ ಮುದುವಾಡಿ ಕೆರೆ ಕೋಡಿ ಹೊಡೆದು ಮತ್ತೆ ರಸ್ತೆ ಮೇಲೇ ಸಂಚಾರ ಮಾಡೋದ್ರಲ್ಲಿ ಅನುಮಾನವಿಲ್ಲ.ಇದಕ್ಕೆ ಸ್ಥಳೀಯರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನು ಮುದುವಾಡಿ ಕೆರೆ ಕೋಲಾರ ತಾಲೂಕಿಗೆ ಸೇರಿದ್ರು ಸಹ ಇದು ಶ್ರೀನಿವಾಸಪುರ ವಿಧಾನಸಭಾ ವ್ಯಾಪ್ತಿಗೆ ಸೇರುತ್ತದೆ. ಮಾಜಿ ಸ್ಪೀಕರ್ ಮತ್ತು ಶಾಸಕರು ಆಗಿರುವ ರಮೇಶ್ ಕುಮಾರ್ ವ್ಯಾಪ್ತಿಗೆ ಬರುತ್ತೆ. ಕೆರೆಯ ಏರಿ ಮೇಲೇ ಕೋಲಾರ ಮತ್ತು ಶ್ರೀನಿವಾಸಪುರಕ್ಕೆ ಸಂಪಕಿ೯ಸುವ ಮುಖ್ಯ ರಸ್ತೆ ಸಹ ಇದೆ. ಶಾಲಾ, ಕಾಲೇಜು ವಾಹನಗಳು, ಸಕಾ೯ರಿ ಬಸ್ಸುಗಳು, ಆಟೋಗಳು ಸೇರಿದಂತೆ ದಿನಕ್ಕೆ ಸಾವಿರಾರು ವಾಹನಗಳೂ ಸಂಚಾರ ಮಾಡುತ್ತಿದೆ. ಇನ್ನು ಅಲ್ಲಲ್ಲಿ ಹಾಕಿರೋ ಟಾರು ಕಿತ್ತು ಹೋಗಿ ಗುಂಡಿಗಳು ಬಿದ್ದಿರುವ ಜೊತೆ ಸಾಕಷ್ಟೂ ಕಿರಿದಾದ ರಸ್ತೆ ಆಗಿರೋದ್ರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡ್ತಿದ್ದಾರೆ.
ಅಗತ್ಯ ವಸ್ತುಗಳ ದರ ಏರಿಕೆಗೆ ಬಿಜೆಪಿ ಕಾರಣ: ನಾರಾಯಣಸ್ವಾಮಿ
ಇದರ ಜೊತೆ ರಸ್ತೆಯ ಎರಡೂ ಬದಿಯಲ್ಲಿ ತಡೆ ಗೋಡೆ ಇಲ್ಲ, ಕೊಂಚ ಮೈ ಮರೆತರೂ ಕೆರೆಗೆ ಬಿದ್ದು ಪ್ರಾಣ ಕಳೆದುಕೊಳ್ಳೋದು ಪಕ್ಕ. ರಾತ್ರಿ ವೇಳೆ ಹಾಗೂ ಮಳೆಗಾಲದಲ್ಲಿ ಕಿತ್ತೋಗಿರೋ ಈ ರಸ್ತೆಯ ಮೇಲೆ ಸಂಚಾರ ಮಾಡೋದು ಸವಾಲಿನ ಕೆಲಸವಾಗಿದೆ. ಅದೆಷ್ಟೇ ಮನವಿ ಮಾಡಿದ್ರು ಸಹ ಇಲ್ಲಿನ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಲೆಕಡೆಸಿಕೊಂಡಿಲ್ಲ ಅನ್ನೋದಕ್ಕೆ ಇಲ್ಲಿನ ಅವ್ಯವಸ್ಥೆಯೇ ಸ್ಪಷ್ಟ ನಿದಶ೯ನ. ವಾಹನ ಸವಾರರು ಹಾಗೂ ಸ್ಥಳಿಯರು ಪ್ರತಿಕ್ಷಣ ಹಿಡಿಶಾಪ ಹಾಕ್ತಿದ್ದಾರೆ. ಒಟ್ಟಾರೆ ಅದೆಷ್ಟೇ ಬಾರಿ ಮನವಿ ಮಾಡಿದ್ರು ಸಹ ನಮಗೂ ಇದಕ್ಕೂ ಸಂಬಂಧವಿಲ್ಲ ಅಂತ ಸಂಬಂಧಪಟ್ಟವರು ದೂರ ಉಳಿದಿದ್ದಾರೆ. ಜನರ ಜೀವನ ಜೊತೆ ಚೆಲ್ಲಾಟವಾಡುವ ಬದಲು ಮುಂದಾಗುವ ಅನಾಹುತಗಳನ್ನು ತಪ್ಪಿಸಲಿ ಅನ್ನೋದು ನಮ್ಮ ಮನವಿ.